ಕಾಸರಗೋಡು: ಜಿಲ್ಲೆಯ ವಿಧವೆಯರ ಸಂರಕ್ಷಣೆ ಮತ್ತು ಅಭಿವೃದ್ಧಿ ಉದ್ದೇಶದಿಂದ ಜಿಲ್ಲಾಡಳಿತ ಮತ್ತು ಮಹಿಳಾ ಸಂರಕ್ಷಣೆ ವಿಭಾಗ ನೇತೃತ್ವದಲ್ಲಿ ರಚಿಸಿರುವ "ಕೂಟ್" ಯೋಜನೆಯಲ್ಲಿ ಗಾರ್ಮೆಂಟ್ ನಿರ್ಮಾಣ ಘಟಕ ಶೀಘ್ರದಲ್ಲೇ ಆರಂಭಿಸಲಾಗುವುದು.
ಈ ಯೋಜನೆಯ ಅಂಗವಾಗಿ ವಿಧವೆಯರಿಗಾಗಿ ಕಾಞಂಗಾಡಿನ ವೆಳ್ಳಿಕೋತ್ ಇನ್ಸ್ ಸ್ಟಿಟ್ಯೂಟ್ ಮುಖಾಂತರ ಉಚಿತ ರೂಪದ ಹೊಲಿಗೆ ತರಬೇತಿ ನೀಡಲಾಗುವುದು. ತರಬೇತಿಗೆ ಆಯ್ಕೆಗೊಂಡವರಿಗೆ ವಸತಿ, ಭೋಜನ ಉಚಿತವಾಗಿರುವುದು. ಕಾಸರಗೋಡು, ಕಾರಡ್ಕ, ಮಂಜೇಶ್ವರ ಬ್ಲೋಕ್ ಗಳ 45 ವರ್ಷ ಪ್ರಾಯ ಮೀರದ, ಕುಟುಂಬದ ಜವಾಬ್ದಾರಿ ಹೊಂದಿರುವ ವಿಧವೆಯರಿಗೆ( ವಿಧವೆಯರ ಜೊತೆಗೆ ವಿಚ್ಛೇದನ ಪಡೆದ ಮಹಿಳೆಯರು, ಪತಿ ನಾಪತ್ತೆಯಾಗಿ ಅನೇಕ ವರ್ಷ ಸಂದರೂ, ಪತಿಯ ಬಗ್ಗೆ ಮಾಹಿತಿಯಿಲ್ಲದವರು) ಈ ತರಬೇತಿ ಪಡೆಯಲು ಅರ್ಹರಾಗಿದ್ದಾರೆ. ಬಿಳಿಹಾಳೆಯಲ್ಲಿ ಸಿದ್ಧಪಡಿಸಿದ ಅರ್ಜಿಯನ್ನು ಜಿಲ್ಲಾಧಿಕಾರಿ ಕಚೇರಿ ಸಮುಚ್ಚಯದಲ್ಲಿರುವ ಮಹಿಳಾ ಸಂರಕ್ಷಣೆ ಕಚೇರಿಗೆ ಅಂಚೆ ಮೂಲಕ ಯಾ ಇ-ಮೇಲ್ ಮೂಲಕ ಜು.4ರ ಮುಂಚಿತವಾಗಿ ಸಲ್ಲಿಸಬೇಕು. ವಿಳಾಸ: ಮಹಿಳಾ ಸಂರಕ್ಷಣೆ ಕಚೇರಿ, ಸಿವಿಲ್ ಸ್ಟೇಷನ್ ಮೂರನೇ ಅಂತಸ್ತು, ಕಾಸರಗೋಡು. ಈ-ಮೇಲ್ :wpoksgd@gmail.com. ದೂರವಾಣಿ ಸಂಖ್ಯೆ: 04994256266, 9446494919.