ನವದೆಹಲಿ: ಪತಂಜಲಿ ಸಂಸ್ಥೆಯ ಕೊರೋನಿಲ್ ನ್ನು ರೋಗನಿರೋಧಕ ಉತ್ತೇಜಕವನ್ನಾಗಿ ಮಾತ್ರ ಮಾರಾಟ ಮಾಡಲು ಕೇಂದ್ರ ಆಯುಷ್ ಸಚಿವಾಲಯ ಅನುಮತಿ ನೀಡಿದೆ.
ಕೊರೋನಿಲ್ ನ್ನು ಕೋವಿಡ್-19 ಕ್ಕೆ ಔಷಧ ಎಂದು ಕೆಲವು ದಿನಗಳ ಪತಂಜಲಿ ಸಂಸ್ಥೆ ಬಿಡುಗಡೆ ಮಾಡಿತ್ತು. ಆದರೆ ಈಗ ಅದನ್ನು ರೋಗ ನಿರ್ವಹಣೆಗಾಗಿ ಇರುವ ರೋಗನಿರೋಧಕ ಉತ್ತೇಜಕ ಔಷಧ ಎಂಬುದಾಗಿ ಪತಂಜಲಿ ಸಂಸ್ಥೆ ಸ್ಪಷ್ಟಪಡಿಸಿದೆ.ತಮ್ಮ ಸಂಸ್ಥೆ ಹಾಗೂ ಆಯುಷ್ ಸಚಿವಾಲಯದ ನಡುವೆ ಯಾವುದೇ ಕೊರೋನಿಲ್ ಗೆ ಸಂಬಂಧಿಸಿದಂತೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಪತಂಜಲಿ ಸಂಸ್ಥೆ ಸ್ಪಷ್ಟಪಡಿಸಿದೆ. ಇದಕ್ಕೂ ಮುನ್ನ ಆಯುಷ್ ಸಚಿವಾಲಯ ಕೊರೋನಿಲ್ ನ್ನು ಕೋವಿಡ್-19 ಗುಣಪಡಿಸುವುದಕ್ಕಾಗಿ ಇರುವ ಆಯುವರ್ವೇದ ಔಷಧ ಎಂದು ತಾನು ಪ್ರಮಾಣೀಕರಿಸುವವರೆಗೂ ಅದನ್ನು ಮಾರಾಟ ಮಾಡಬಾರದೆಂದು ಹೇಳಿತ್ತು.
ಕೊರೋನಿಲ್ ಬಿಡುಗಡೆಗೆ ಸಂಬಂಧಿಸಿದಂತೆ ಎದುರಾಗಿದ್ದ ಟೀಕೆಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಬಾಬಾ ರಾಮ್ ದೇವ್, ಕೆಲವು ಜನರಿಗೆ ಭಾರತೀಯ ಸಂಸ್ಕøತಿಯ ಪುನರುತ್ಥಾನದಿಂದ ನೋವಾಗಿದೆ ಎಂದು ಹೇಳಿದ್ದರು. ಕೊರೋನಿಲ್ ನ ಮಾರಾಟಕ್ಕೆ ಯಾವುದೇ ನಿಬರ್ಂಧವಿಲ್ಲ. ಇಂದಿನಿಂದ ದೇಶಾದ್ಯಂತ ಈ ಕಿಟ್ ಲಭ್ಯವಿರಲಿದೆ ಎಂದು ಬಾಬಾ ರಾಮ್ ದೇವ್ ಹೇಳಿದ್ದಾರೆ.