ಕಾಸರಗೋಡು: ಪೆÇಳಿಯೂರಿನಿಂದ ಕಾಸರಗೋಡು ಜಿಲ್ಲೆಯ ವರೆಗಿನ ಸಮುದ್ರದಲ್ಲಿ ಜು.31ರಂದು ರಾತ್ರಿ 11.30ರ ವರೆಗೆ 3 ರಿಂದ 3.4 ಮೀಟರ್ ವರೆಗಿನ ದೊಡ್ಡ ತೆರೆಗಳು ಅಪ್ಪಳಿಸುವ ಸಾಧ್ಯತೆಯಿದೆ ಎಂದು ರಾಷ್ಟ್ರೀಯ ಸಮುದ್ರ ಸ್ಥಿತಿಗತಿ ಅಧ್ಯಯನ ಕೇಂದ್ರ ವರದಿ ಮಾಡಿದೆ. ಕಡಲತೀರ ನಿವಾಸಿಗಳು ಜಾಗರೂಕತೆ ಪಾಲಿಸುವಂತೆ, ಮೀನುಗಾರಿಕೆ ಉಪಕರಣಗಳನ್ನು ಕಾಪಿಟ್ಟುಕೊಳ್ಳುವಂತೆ. ಬೋಟು, ದೋಣಿ ಇತ್ಯಾದಿಗಳನ್ನು ಹಾರ್ಬರ್ ಗಳಲ್ಲಿ ಭದ್ರವಾಗಿರಿಸುವಂತೆ ಸೂಚನೆ ನೀಡಲಾಗಿದೆ.
ಕಾಸರಗೋಡು ಜಿಲ್ಲೆಯಲ್ಲಿ 3 ದಿನ ಹಳದಿ ಅಲೆರ್ಟ್:
ಆ.1ರಿಂದ 3ನೇ ತಾರೀಕಿನ ವರೆಗೆ ಕಾಸರಗೋಡು ಜಿಲ್ಲೆಯಲ್ಲಿ ಹಳದಿ ಅಲೆರ್ಟ್ ಘೋಷಿಸಲಾಗಿದೆ ಎಂದು ರಾಜ್ಯ ದುರಂತ ನಿವಾರಣೆ ಪ್ರಾಧಿಕಾರ ತಿಳಿಸಿದೆ.