ಕಾಸರಗೋಡು: ಕೇರಳ ಪೆÇೀಸ್ಟಲ್ ಸರ್ಕಲ್ ಉತ್ತರ ವಲಯ ಆ.14 ರಂದು ಬೆಳಗ್ಗೆ 11 ಗಂಟೆಗೆ ವೀಡಿಯೋ ಕಾನರೆನ್ಸ್ ಮೂಲಕ ಟಪ್ಪಾಲು ಅದಾಲತ್ ನಡೆಸಲಿದೆ. ಟಪ್ಪಾಲು ಇಲಾಖೆಯ ಸೇವೆಗಳಾಗಿರುವ ಮನಿ ಆರ್ಡರ್, ಪಾರ್ಸೆಲ್, ಸ್ಪೀಡ್ ಪೆÇೀಸ್ಟ್, ಸೇವಿಂಗ್ಸ್ ಬ್ಯಾಂಕ್, ಪತ್ರ ಇತ್ಯಾದಿ ಸಂಬಂಧ ದೂರುಗಳಿದ್ದಲ್ಲಿ, ಮಿನಿ ರಾಜನ್ ಎಂ.,ಲಿಂಕ್ ಆಫೀಸರ್ ಟು ಅಸಿಸ್ಟೆಂಟ್ ಡೈರೆಕ್ಟರ್, ಪೆÇೀಸ್ಟ್ ಮಾಸ್ಟರ್ ಜನರಲ್ ಕಾರ್ಯಾಲಯ, ವಡಕ್ಕನ್ ವಲಯ, ನಡಕ್ಕಾವ್, ಕಲ್ಲಿಕೋಟೆ -673011 ಎಂಬ ವಿಳಾಸಕ್ಕೆ ಆ.7ರ ಮುಂಚಿತವಾಗಿ ಸಲ್ಲಿಸಬೇಕು. ಲಕೋಟೆಯ ಹೊರಬದಿ ಟಪ್ಪಾಲು ಅದಾಲತ್ ಎಂದು ನಮೂದಿಸಬೇಕು.