ಕಾಸರಗೋಡು: ಕೋವಿಡ್ ಸೋಂಕು ಅಧಿಕ ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬಕ್ರೀದ್ ಹಬ್ಬ ದ ಆಚರಣೆ ಕಾಸರಗೋಡು ಜಿಲ್ಲೆಯಲ್ಲಿ ಸರ್ಕಾರದ ಕೋವಿಡ್ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ನಡೆಸಬೇಕು. ಕಂಟೈನ್ಮೆಂಟ್ ಝೋನ್‍ಗಳಲ್ಲಿ ಬಕ್ರೀದ್ ಸಂಬಂಧ ಸಾಮೂಹಿಕ ನಮಾಜು ಕೈ ಬಿಡಬೇಕು. ಈ ಸಂಬಂಧ ಅಧಿಕಾರಿಗಳು ನಡೆಸುವ ಯತ್ನಗಳಿಗೆ ಸಾರ್ವಜನಿಕರು ಪೂರ್ಣ ರೂಪದಲ್ಲಿ ಸಹಕಾರ ನೀಡಬೇಕು ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ತಿಳಿಸಿರುವರು.
ಕಂಟೈನ್ಮೆಂಟ್ ಝೋನ್‍ಗಳಲ್ಲಿ ಈಗ ಎಲ್ಲ ವಿಚಾರಗಳಲ್ಲಿ ಇರುವ ಕಟ್ಟುನಿಟ್ಟುಗಳು ನಮಾಜು ಸಂಬಂಧ ವಿಚಾರಗಳಿಗೂ ಅನ್ವಯವಾಗಿವೆ. 144 ಕಾಯಿದೆ ಪ್ರಕಾರ ಜಾರಿಗೊಳಿಸಲಾದ ನಿಷೇಧಾಜ್ಞೆ ಜಾರಿಯಲ್ಲಿರುವ ವಲಯಗಳಲ್ಲಿ ಮಸೀದಿಗಳಲ್ಲಿ, ಅವುಗಳ ಹೊರಬದಿ ನಮಾಜು ನಡೆಸಕೂಡದು. ಈದ್ಗಾ ನಮಾಜು ನಡೆಸಕೂಡದು ಎಂದು ರಾಜ್ಯ ಸರ್ಕಾರ ಈಗಾಗಲೇ ಆದೇಶ ಪ್ರಕಟಿಸಲಾಗಿದೆ. ಗರಿಷ್ಠ ನೂರು ಮಂದಿ ಮಸೀದಿಗಳಲ್ಲಿ ನಮಾಜು ನಡೆಸಲು ಅನುಮತಿ ಇದೆಯಾದರೂ, 2 ಮೀಟರ್ ಅಂತರ ಕಾಯ್ದುಕೊಳ್ಳಬೇಕು. ಈ ಆದೇಶವನ್ನು ಯಾವ ಕಾರಣಕ್ಕೂ ಉಲ್ಲಂಘಿಸಕೂಡದು. ಒಂದೊಮ್ಮೆ ನೂರು ಮಂದಿಗೆ ಸ್ಥಳಾವಕಾಶ ಇಲ್ಲದೇ ಇರುವ ಮಸೀದಿಗಳಲ್ಲಿ ನೂರು ಮಂದಿಯನ್ನು ಸೇರಿಸುವ ಯತ್ನ ನಡೆಸಕೂಡದು. ಮಸೀದಿಗಳಲ್ಲಿ ಆಹಾರ ವಿತರಣೆ ಇತ್ಯಾದಿ ನಡೆಸಕೂಡದು. ಮಸೀದಿಗಳಲ್ಲಿ ರೆಜಿಸ್ಟರ್ ಕಡ್ಡಾಯವಾಗಿ ವ್ಯವಸ್ಥೆಗೊಳಿಸಿರಬೇಕು. ಸಾನಿಟೈಸರ್, ಮಾಸ್ಕ್ ಬಳಕೆ ಕಡ್ಡಾಯವೆಂದು ಅವರು ತುರ್ತು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.