ಕಾಸರಗೋಡು: ಪೆÇಲೀಸ್ ಕಸ್ಟಡಿಯಿಂದ ನಾಪತ್ತೆಯಾದ ಕಾಳ್ಯಂಗಾಡು ನಿವಾಸಿ ಮಹೇಶ್ ಅವರ ಸಹೋದರಿ ಚಂದ್ರಾವತಿ ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದಾರೆ.
ಮಹೇಶ್ ಅವರ ನಾಪತ್ತೆಯಲ್ಲಿ ನಿಗೂಢತೆಗಳಿವೆ ಎಂದೂ, ಕಾನೂನು ಉಲ್ಲಂಘಿಸಿ ಕೈಕೋಳ ಹಾಕಲಾಗಿದೆ ಎಂದೂ, ನಾಪತ್ತೆಯಾದ ಮಹೇಶ್ ಅವರನ್ನು ಪತ್ತೆಹಚ್ಚಲು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.