ಕಾಸರಗೋಡು: ಕಾಸರಗೋಡು ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಪೆÇಲೀಸ್ ನಿಗಾ ಏರ್ಪಡಿಸಲು ನಿನ್ನೆ ನಡೆದ ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿ ಸಭೆ ನಿರ್ಧರಿಸಿದೆ.
ಜಿಲ್ಲೆಗೆ ತಲಪ್ಪಾಡಿ ಚೆಕ್ ಪೆÇೀಸ್ಟ್ ಮೂಲಕ ಮಾತ್ರ ಬರಲು ಅನುಮತಿ ನೀಡಲಾಗಿದೆ. ಆದರೆ ಕರಾಟಕದಿಂದ ಜಿಲ್ಲೆಗೆ ಬರುವ ಕೆಲವರು ಆದೂರು ಪೆÇಲೀಸ್ ಠಾಣೆ ವ್ಯಾಪ್ತಿಯ ಮೀಂಜ, ಈಶ್ವರಮಂಗಲ ಸಹಿತ ಗಡಿಪ್ರದೇಶಗಳ ಮೂಲಕ ಅಕ್ರಮವಾಗಿ ಪ್ರವೇಶಿಸಲು ಯತ್ನ ನಡೆಸುತ್ತಿರುವ ವಿಚಾರ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಅಕ್ರಮ ಪ್ರವೇಶ ಕೊರೋನಾ ಪ್ರತಿರೋಧ ಚಟುವಟಿಕೆಗಳಿಗೆ ಪ್ರತಿಕೂಲ ಪರಿಣಾಮನೀಡಲಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ನಡೆಸುವ ಕ್ರಮಕ್ಕೆ ರಾಜಕೀಯ ಪಕ್ಷಗಳೂ, ಯುವಜನ ಸಂಘಟನೆಗಳೂ, ಸ್ವಯಂ ಸೇವಾ ಸಂಘಟನೆಗಳೂ ಮುಂದೆ ಬರಬೇಕು ಎಂದು ಸಭೆ ವಿನಂತಿಸಿದೆ.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಾಲ್ಸೂರು, ತಲಪ್ಪಾಡಿ, ಪಾಣತ್ತೂರು ಗಡಿಗಳಲ್ಲಿ ಪೆÇಲೀಸರ ಜೊತೆಗೆ ಸಮವಸ್ತ್ರಧಾರಿ ಅರಣ್ಯ ಇಲಾಖೆ ಸಿಬ್ಬಂದಿಯನ್ನೂ ಕರ್ತವ್ಯಕ್ಕೆ ನೇಮಿಸಲಾಗುವುದು. ಈ ಸಂಬಂಧ ವರದಿ ನೀಡುವಂತೆ ಡಿವಿಝನಲ್ ಅರಣ್ಯ ಅಧಿಕಾರಿಗೆ ಜಿಲ್ಲಾಧಿಕಾರಿ ಆದೇಶ ನೀಡಿದರು. ಪ್ರತಿ ಠಾಣೆಗಳಲ್ಲಿ ಕನಿಷ್ಠ 10 ಮಂದಿ ಸ್ವಯಂಸೇವಾ ಪೆÇಲೀಸರ ಅಗತ್ಯವಿದ್ದು, ಕಾಲೇಜು ಮಟ್ಟದ ಎನ್.ಸಿ.ಸಿ. ಕೆಡೆಟ್ ಗಳನ್ನು ಈ ನಿಟ್ಟಿನಲ್ಲಿ ಬಳಸಲು ಸಭೆ ತೀರ್ಮಾನಿಸಿದೆ. ಗಡಿ ಚೆಕ್ ಪೆÇೀಸ್ಟ್, ಪೇಟೆಗಳಲ್ಲಿ ಸೇವೆಗೆ ನೇಮಕಗೊಳಿಸಲು 200 ಎನ್.ಸಿ.ಸಿ. ಕೆಡೆಟ್ ಗಳ(ಹುಡುಗರಿಗೆ ಆದ್ಯತೆ) ಪಟ್ಟಿ ಸಲ್ಲಿಸುವಂತೆ ಡಿ.ಡಿ.ಇ.ಗೆ ಆದೇಶ ನೀಡಲಾಗಿದೆ.