ಕೊಚ್ಚಿ: ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 10 ಜನರನ್ನು ಬಂಧಿಸಲಾಗಿದೆ ಎಂದು ಎನ್‍ಐಎ ತಿಳಿಸಿದೆ. ಈ ಪ್ರಕರಣವು ಭಯೋತ್ಪಾದಕ ಸ್ವರೂಪದ್ದಾಗಿದೆ ಎಂದು ಎನ್ ಐ ಎ ಕಂಡುಹಿಡಿದಿದೆ. ಈ ನಿಟ್ಟಿನಲ್ಲಿ ದಾಖಲೆಗಳು ಕಂಡುಬಂದಿವೆ ಎಂದು ಎನ್ ಐ ಎ ಹೇಳಿಕೆಯಲ್ಲಿ ತಿಳಿಸಿದೆ. ಎಂಟು ಮೊಬೈಲ್ ಫೆÇೀನ್ ಗಳು, ಹಾರ್ಡ್ ಡಿಸ್ಕ್ ಗಳು, ಪೆನ್ ಡ್ರೈವ್ ಗಳು ಮತ್ತು ಪ್ರಯಾಣ ದಾಖಲೆಗಳು ಕಂಡುಬಂದಿವೆ. ಕೆ.ಟಿ. ರಮೀಸ್ ಅವರು ರಾಜತಾಂತ್ರಿಕ ಬ್ಯಾಗೇಜ್ ಮೂಲಕ ಚಿನ್ನ ಕಳ್ಳಸಾಗಣೆ ಮಾಡಿದ್ದಾರೆ ಎಂದು ಎನ್ ಐ ಎ ಕಂಡುಹಿಡಿದಿದೆ.
ಚಿನ್ನದ ಕಳ್ಳಸಾಗಣೆ ಪ್ರಕರಣ ಪಾಪ್ಯುಲರ್ ಫ್ರಂಟ್‍ನೊಂದಿಗೆ ಸಂಬಂಧಹೊಂದಿದೆ ಎಂದು ಸಂಶಯಿಸಲಾಗಿದೆ. ಭಾನುವಾರ ಆರು ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ. ಈ ಪ್ರಕರಣದ 24 ನೇ ಆರೋಪಿ ಮುಹಮ್ಮದಲಿ ಪೋರ್ಜರಿ ಪ್ರಕರಣದ ಆರೋಪಿ ಎಂದು ಎನ್‍ಐಎ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಪೋರ್ಜರಿ ಪ್ರಕರಣದಲ್ಲಿ ಸಾಕಷ್ಟು ಪುರಾವೆಗಳಿಲ್ಲದ ಕಾರಣ ನ್ಯಾಯಾಲಯ ಆರೋಪಿಗಳನ್ನು ಖುಲಾಸೆಗೊಳಿಸಿತ್ತು.