ತಿರುವನಂತಪುರ: ರಾಜ್ಯದಲ್ಲಿ ಯಾರೂ ಹಸಿವಿನಿಂದ ಬಳಲಬಾರದೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. 100 ದಿನಗಳ ವಿಶೇಷ ಕ್ರಿಯಾ ಯೋಜನೆಯನ್ನು ಇಂದು ಸಂಜೆ ಮುಖ್ಯಮಂತ್ರಿ ಪ್ರಕಟಿಸಿದ್ದು ಮುಂದಿನ ನಾಲ್ಕು ತಿಂಗಳು ಆಹಾರ ಕಿಟ್ ವಿತರಿಸಲಾಗುವುದು ಎಂದು ಸಿಎಂ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಲಾಕ್ ಡೌನ್ ಓಣಂ ಸಂದರ್ಭದ 'ಆಹಾರ ಕಿಟ್ ವಿತರಣೆಯು ಹೆಚ್ಚು ಪ್ರಶಂಸೆಗೆ ಪಾತ್ರವಾಯಿತು. 86 ಲಕ್ಷ ಕಿಟ್‍ಗಳನ್ನು ವಿತರಿಸಲಾಗಿದೆ. ಕಿಟ್ ಅನ್ನು ಓಣಂ ಸಮಯದಲ್ಲಿ ವಿತರಿಸಲಾಯಿತು. ಮುಂದಿನ ನಾಲ್ಕು ತಿಂಗಳವರೆಗೆ ಕಿಟ್ ವಿತರಿಸಲಾಗುವುದು. ಕಿಟ್‍ಗಳ ವಿತರಣೆಯು ಈಗ ಪಡಿತರ ಅಂಗಡಿಗಳ ಮೂಲಕವೇ ಮುಂದುವರಿಯುತ್ತದೆ 'ಎಂದು ಸಿಎಂ ಹೇಳಿದರು.
ಕಲ್ಯಾಣ ಮತ್ತು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರುವ ಭರವಸೆ ನೀಡಿದ ಅವರು ಅನುಷ್ಠಾನದ ಕುರಿತು ಪ್ರಗತಿ ವರದಿಯನ್ನು ಸಲ್ಲಿಸಲಾಗಿದೆ ಎಂದರು. ಮುಂದಿನ 100 ದಿನಗಳಲ್ಲಿ ಪೂರ್ಣಗೊಳಿಸಬಹುದಾದ ಮತ್ತು ಪ್ರಾರಂಭಿಸಬಹುದಾದ ವಿಷಯಗಳನ್ನು ಪ್ರಸ್ತುತಪಡಿಸಲಾಗುವುದು ಎಂದು ಸಿಎಂ ಹೇಳಿದರು.
ಎಲ್ಲಾ ಮಾನವ ಕುಲಕೋಟಿ ಒಂದೇ ಆಗಿದ್ದ ಕಾಲವಿತ್ತು ಎಂಬ ಕಲ್ಪನೆ ಸರ್ಕಾರದ್ದು. ಅಂತಹ ಸಮಯವನ್ನು ಮತ್ತೆ ಸಾಫಲ್ಯಗೊಳಿಸಲು ಸಾದ್ಯ. ಪ್ರತಿಯೊಬ್ಬರೂ ಸಂತೋಷವಾಗಿರಲು ಪ್ರಾಮಾಣಿಕ ಪ್ರಯತ್ನ ಬೇಕು. ಆಘಾತಗಳಿಂದ ಚೇತರಿಸಿಕೊಳ್ಳಲು ಒಂದಷ್ಟು ಕಾಲಗಳು ಬೇಕಾಗಬಹುದು. ಸಾಂಕ್ರಾಮಿಕ ರೋಗವನ್ನು ದಾಟಲು ಕೋವಿಡ್ 100 ದಿನಗಳ ಕ್ರಿಯಾ ಯೋಜನೆಯನ್ನು ಜಾರಿಗೊಳಿಸುತ್ತಿದೆ ಎಂದು ಆಶಿಸುತ್ತೇವೆ ಎಂದರು.
ಪೆನ್ಶನ್ ಪ್ರಿಶನ್:
ರಾಜ್ಯದ ಎಲ್ಲಾ ಪಿಂಚಣಿದಾರರಿಗೂ 100 ರೂ,.ಗಳ ವರ್ಧಿತ ಪಿಂಚಣಿಯನ್ನು ಪಿಣರಾಯಿ ವಿಜಯನ್ ಘೋಶಿಸಿದರು. ಅಲ್ಲದೆ ಮುಂದಿನ ಪ್ರತಿ ತಿಂಗಳೂ ಇದು ಪಾವತಿಯಾಗಲಿದೆ ಎಂದರು. ಪ್ರಸ್ತುತ ಮೂರು ತಿಂಗಳಿಗೊಮ್ಮೆ ಪಿಂಚಣಿ ಪಾವತಿಯಾಗುತ್ತಿದೆ.