ಅಕ್ಲಂಡ್: 102 ದಿನಗಳ ನಂತರ ನ್ಯೂಜಿಲೆಂಡ್ ನಲ್ಲೂ ಮೊದಲ ಬಾರಿಗೆ ಕೊರೋನಾ ವೈರಸ್ ಸೋಂಕು ಕಾಣಿಸಿಕೊಂಡಿದ್ದು,
ಪ್ರಧಾನಿ ಜಸಿಂಡಾ ಅರ್ಡೆರ್ನ್, ಮನೆಯಲ್ಲಿಯೇ ಉಳಿಯುವ ಲಾಕ್ ಡೌನ್ ಆದೇಶ ಮಾಡಿದ್ದಾರೆ.
ಅಕ್ಲಂಡ್ ನಲ್ಲಿ ಒಂದೇ ಕುಟುಂಬದಲ್ಲಿ ನಾಲ್ವರಿಗೆ ಕೊರೋನಾ ಸೋಂಕು ತಗುಲಿದೆ. ಆದರೆ, ಇದು ಏಲ್ಲಿಂದ ಬಂದಿತು ಎಂಬುದರ ಬಗ್ಗೆ ಗೊತ್ತಾಗಿಲ್ಲ ಎಂದು ಜಸಿಂಡಾ ಅರ್ಡೆರ್ನ್ ತಿಳಿಸಿದ್ದಾರೆ.
102 ದಿನಗಳ ನಂತರ ಮೊದಲ ಕೊವೀಡ್-19 ಪ್ರಕರಣ ಕಂಡುಬಂದಿದ್ದು, ಐಸೋಲೇಷನ್, ಕ್ವಾರಂಟೈನ್ ಸೌಕರ್ಯಗಳ ನಿರ್ವಹಣೆ ಮಾಡಲಾಗಿದೆ. ಪರಿಸ್ಥಿತಿಯನ್ನು ತೀವ್ರಗತಿಯಲ್ಲಿ ತಡೆಯಲು ನಾವೆಲ್ಲರೂ ಕಾರ್ಯೋನ್ಮುಖರಾಗಿದ್ದೇವೆ. ಅದಕ್ಕಾಗಿ ಯೋಜನೆಯೊಂದಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.