ತಿರುವನಂತಪುರ: ಕೇರಳದಲ್ಲಿ ಇಂದು ಕೋವಿಡ್ ಸೋಂಕು 1083 ಮಂದಿಯಲ್ಲಿ ಹೊಸತಾಗಿ ಪತ್ತೆಹಚ್ಚಲಾಗಿದೆ. ಇಮದು 1021 ಬಾಧಿತರು ಚೇತರಿಸಿಕೊಂಡಿದ್ದರೆ. ರಾಜ್ಯದಲ್ಲಿ ಮೂರು ಕೋವಿಡ್ ಸಾವುಗಳು ವರದಿಯಾಗಿವೆ. ಇಂದು ರೋಗನಿರ್ಣಯ ಮಾಡಿದವರಲ್ಲಿ 51 ಮಂದಿ ವಿದೇಶಗಳಿಂದ ಮತ್ತು 64 ಇತರ ರಾಜ್ಯಗಳಿಂದ ಬಂದವರು. ಸಂಪರ್ಕದ ಮೂಲಕ 902 ಜನರಿಗೆ ಸೋಂಕು ತಗಲಿದೆ. ಅವರಲ್ಲಿ 71 ಜನರ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಕೋವಿಡ್ ಪರಿಶೀಲನಾ ಸಭೆಯ ನಂತರ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಕೇರಳದ ಮಾಹಿತಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ಜಿಲ್ಲಾವಾರು ಕೋವಿಡ್ ವಿವರಗಳು:
ರಾಜ್ಯದ ರಾಜಧಾನಿಯಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿವೆ. ರಾಜಧಾನಿಯಲ್ಲಿ ಒಟ್ಟು 242 ಜನರಲ್ಲಿ ಕೋವಿಡ್ ಪತ್ತೆಯಾಗಿದೆ. ಇತರ ಜಿಲ್ಲೆಗಳೆಂದರೆ ಎರ್ನಾಕುಳಂ 135, ಆಲಪ್ಪುಳ 126, ತ್ರಿಶೂರ್ 72, ಮಲಪ್ಪುರಂ 131, ಕಾಸರಗೋಡು 91, ಪಾಲಕ್ಕಾಡ್ 50, ಕೊಲ್ಲಂ 30, ಕಣ್ಣೂರು 37, ಪತ್ತನಂತಿಟ್ಟು 32, ಕೊಟ್ಟಾಯಂ 23, ಕೋಝಿಕ್ಕೋಡ್ 97 ಮತ್ತು ವಯನಾಡ್ 17 ಸೋಂಕಿತರನ್ನು ಗುರುತಿಸಲಾಗಿದೆ.
ಎರ್ನಾಕುಳಂನಲ್ಲಿ ಕೋವಿಡ್ ಬಾಧಿತರ ಸಂಖ್ಯೆ ದಾಟಿತು ಸಾವಿರ:
ಕೋವಿಡ್ ಮೂರನೇ ಹಂತದಲ್ಲಿ ಎರ್ನಾಕುಳಂ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಖ್ಯೆ ಒಂದು ಸಾವಿರ ದಾಟಿದೆ. ಸೋಮವಾರ ಮಾತ್ರ ವರದಿಯಾದ 106 ಸಕಾರಾತ್ಮಕ ಪ್ರಕರಣಗಳಿಂದ ಇದು ಹೆಚ್ಚಾಗಿದೆ. ಈ ಪೈಕಿ 89 ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದರು. ಇದು ಕೋವಿಡ್ ರೋಗಿಗಳ ಸಂಖ್ಯೆಯನ್ನು 1045 ಕ್ಕೆರಲು ಕಾರಣವಾಯಿತು. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಏರುಗತಿಯ ಸೋಂಕಿತರು ಕಂಡುಬಂದಿರುವುದು ಕಳವಳಕ್ಕೂ ಕಾರಣವಾಗಿದೆ.
ದೇಶದಲ್ಲಿ 24 ಗಂಟೆಗಳಲ್ಲಿ 800 ಸಾವುಗಳು!!
ಭಾರತದಲ್ಲಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 24 ಗಂಟೆಗಳಲ್ಲಿ 803 ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 52,050 ಜನರಲ್ಲಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಕೋವಿಡ್ ಸಂತ್ರಸ್ತರ ಸಂಖ್ಯೆ 18.55 ಲಕ್ಷ ದಾಟಿದೆ. ಮಹಾರಾಷ್ಟ್ರದ ಹೊರತಾಗಿ, ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿವೆ.