ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ ಕೋವಿಡ್ ಸೋಂಕು ಖಚಿತಗೊಂಡವರ ಸಂಖ್ಯೆ 100 ಕ್ಕಿಂತ ಅಧಿಕಗೊಂಡಿದ್ದು, ಈ ಮೂಲಕ 10ನೇ ಬಾರಿ ಕೋವಿಡ್ ಸೋಂಕಿತರ ಸಂಖ್ಯೆ ಶತಕ ದಾಟಿದೆ.
ಸೋಮವಾರ(ಇಂದು) ಕೋವಿಡ್ ಪಾಸಿಟವ್ ಆದವರ ಸಂಖ್ಯೆ 146 ಆಗಿದೆ. ಜು.22ರಂದು ಪ್ರಥಮ ಬಾರಿಗೆ ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಸೋಂಕು ಬಾಧಿತರ ಸಂಖ್ಯೆ 100 ದಾಟಿತ್ತು. ಅಂದು 101 ಮಂದಿಗೆ ಸೋಂಕು ಬಾಧೆ ಖಚಿತಗೊಂಡಿತ್ತು. ನಂತರ ಜು.24ರಂದು 106, ಜು.25ರಂದು 105, ಜು.26ರಂದು 107, ಆ.1ರಂದು 153, ಆ.2ರಂದು 113, ಆ.5ರಂದು 128, ಆ.6ರಂದು 152, ಆ.7ರಂದು 168 ಮಂದಿಗೆ ಕೋವಿಡ್ ಪಾಸಿಟಿವ್ ಆಗಿತ್ತು.
ಕೋವಿಡ್ ಸೋಂಕು ಬಾಧಿತರ ಪಂಚಾಯತಿವಾರು ವಿವರ:
ಜಿಲ್ಲೆಯಲ್ಲಿ ಸೋಮವಾರ ಕೋವಿಡ್ ಸೋಂಕು ಬಾಧಿತರ ಪಂಚಾಯತಿವಾರು ವಿರಗಳು ಲಭ್ಯವಾದಂತೆ:
ಕಾಸರಗೋಡು ನಗರಸಭೆ 28, ಮಧೂರು ಪಂಚಾಯತ್ 1, ಮೊಗ್ರಾಲ್ ಪುತ್ತೂರು ಪಂಚಾಯತ್ 2, ಕಾರಡ್ಕ ಪಂಚಾಯತ್ 1, ಮಂಗಲ್ಪಾಡಿ ಪಂಚಾಯತ್ 11, ಮಂಜೇಶ್ವರ ಪಂಚಾಯತ್ 6, ಚೆಮ್ನಾಡ್ ಪಂಚಾಯತ್ 14, ಕುಂಬ್ಡಾಜೆ ಪಂಚಾಯತ್ 1, ಮೀಂಜ ಪಂಚಾಯತ್ 1, ಚೆಂಗಳ ಪಂಚಾಯತ್ 4, ದೇಲಂಪಾಡಿ ಪಂಚಾಯತ್ 1, ಪೈವಳಿಕೆ ಪಂಚಾಯತ್ 1, ಕಾಞಂಗಾಡ್ ನಗರಸಭೆ 2, ಬಳಾಲ್ ಪಂಚಾಯತ್ 2, ಕುತ್ತಿಕೋಲ್ ಪಂಚಾಯತ್ 1,ಕಳ್ಳಾರ್ ಪಂಚಾಯತ್ 2, ನೀಲೇಶ್ವರ ನಗರಸಭೆ 8, ಕಿನಾನೂರು-ಕರಿಂದಳಂ ಪಂಚಾಯತ್ 3, ಪಳ್ಳಿಕ್ಕೆರೆ ಪಂಚಾಯತ್ 9, ಉದುಮಾ ಪಂಚಾಯತ್ 8, ಚೆರುವತ್ತೂರು 1, ವೆಸ್ಟ್ ಏಳೇರಿ ಪಂಚಾಯತ್ 3, ಅಜಾನೂರು ಪಂಚಾಯತ್ 7, ತ್ರಿಕರಿಪುರ ಪಂಚಾಯತ್ 16, ಪಿಲಿಕೋಡ್ ಪಂಚಾಯತ್ 2, ವಲಿಯಪರಂಬ ಪಂಚಾಯತ್ 2, ಪಡನ್ನ ಪಂಚಾಯತ್ 2, ಕಯ್ಯೂರು-ಚೀಮೇನಿ ಪಂಚಾಯತ್ 1, ಕೋಡೋಂ-ಬೇಳೂರು ಪಂಚಾಯತ್ 4, ಪುಲ್ಲೂರು-ಪೆರಿಯ ಪಂಚಾಯತ್ 1, ಪಯ್ಯನ್ನೂರು ಪಂಚಾಯತ್ 1 ಮಂದಿ ಸೋಂಕು ಖಚಿತಗೊಂಡವರಿದ್ದಾರೆ.
ಜಿಲ್ಲೆಯಲ್ಲಿ ಸೋಮವಾರ 146 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 122 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. ಇವರಲ್ಲಿ 19 ಮಂದಿಯ ಸಂಪರ್ಕ ಮೂಲ ಪತ್ತೆಯಾಗಿಲ್ಲ. 17 ಮಂದಿ ವಿದೇಶದಿಂದ, 7 ಮಂದಿ ಇತರ ರಾಜ್ಯಗಳಿಂದ ಬಂದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿರುವರು.
ಕಾಸರಗೋಡು ಜಿಲ್ಲೆಯಲ್ಲಿ 4701 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 3375 ಮಂದಿ ಮನೆಗಳಲ್ಲಿ, 1326 ಮಂದಿ ಸಾಂಸ್ಥಿಕವಾಗಿ ನಿಗಾದಲ್ಲಿರುವರು. ನೂತನವಾಗಿ 441 ಮಂದಿ ನಿಗಾ ಪ್ರವೇಶ ಮಾಡಿದ್ದಾರೆ. 314 ಮಂದಿ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ.
518 ಮಂದಿಯ ಸ್ಯಾಂಪಲ್ ನೂತನವಾಗಿ ತಪಾಸಣೆಗೆ ಕಳುಹಿಸಲಾಗಿದೆ.586 ಮಂದಿಯ ಫಲಿತಾಂಶ ಕಭಿಸಲು ಬಾಕಿಯಿದೆ.
ಮಾಸ್ಕ್ ಧರಿಸದೇ ಇದ್ದದ್ದಕ್ಕೆ 289 ಮಂದಿಗೆ ಕೇಸು:
ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಆ.9ರಂದು ಕಾಸರಗೋಡು ಜಿಲ್ಲೆಯಲ್ಲಿ 289 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಮೂಲಕ ಈ ಪ್ರಕರಣಗಳಿಗೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ದಾಖಲಾಗುವ ಕೇಸುಗಳ ಸಂಖ್ಯೆ 19576 ಆಗಿದೆ.
ಲಾಕ್ ಡೌನ್ ಉಲ್ಲಂಘನೆ: 5 ಕೇಸು ದಾಖಲು:
ಲಾಕ್ ಡೌನ್ ಆದೇಶ ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿ ಆ.9ರಂದು ಕಾಸರಗೋಡು ಜಿಲ್ಲೆಯಲ್ಲಿ 5 ಕೇಸುಗಳನ್ನು ದಾಖಲಿಸಲಾಗಿದೆ. 13 ಮಂದಿಯನ್ನು ಬಂಧಿಸಲಾಗಿದೆ. ಕಾಸರಗೋಡು ನಗರಠಾಣೆಯಲ್ಲಿ 1, ಆದೂರು 1, ನೀಲೇಶ್ವರ 1, ಬೇಕಲ 1, ಚಿತ್ತಾರಿಕಲ್ಲ್ 1 ಕೇಸುಗಳು ದಾಖಲಾಗಿವೆ.
ಈ ಮೂಲಕ ಈ ಪ್ರಕರಣಗಳಿಗೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ದಾಖಲಾಗುವ ಕೇಸುಗಳ ಸಂಖ್ಯೆ 3359 ಆಗಿದೆ. 4522 ಮಂದಿಯನ್ನು ಬಂಧಿಸಲಾಗಿದೆ. 1319 ವಾಹನಗಳನ್ನು ವಶಪಡಿಸಲಾಗಿದೆ.