ಕಾಸರಗೋಡು: ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದ ತಾಲೂಕು ಮಟ್ಟದ ದೂರು ಪರಿಹಾರ ಅದಾಲತ್ ಗಳ ಅಂಗವಾಗಿ ಕಾಸರಗೋಡು ತಾಲೂಕು ಮಟ್ಟದ ಅದಾಲತ್ ಆ.14ರಂದು ನಡೆಯಲಿದೆ. ಈ ಸಂಬಂಧ ದೂರುಗಳಿದ್ದಲ್ಲಿ ಆ.10ರಂದು ರಾತ್ರಿ 12 ಗಂಟೆ ವರೆಗೆ ಸಲ್ಲಿಸಬಹುದು. ಕುಡಿಯುವ ನೀರು, ವಿದ್ಯುತ್, ಪಿಂಚಣಿ, ಸ್ಥಳೀಯಾಡಳಿತ-ಆರೋಗ್ಯ ಇಲಾಖೆಗಳಿಗೆ ಸಂಬಂಧಪಟ್ಟ ದೂರುಗಳು, ಸಾರ್ವಜನಿಕ ಸಮಸ್ಯೆಗಳು ಇತ್ಯಾದಿ ದೂರುಗಳನ್ನು ಅದಾಲತ್ ಗೆ ಸಲ್ಲಿಸಬಹುದು. ಸಿ.ಎಂ.ಡಿ.ಆರ್.ಎಫ್ ಚಿಕಿತ್ಸಾ ಸಹಾಯ, ಲೈಫ್ ಮಿಷನ್ ಯೋಜನೆ, ಪಡಿತರ ಚೀಟಿ ಸಂಬಂಧ ದೂರುಗಳು, ಎಲ್.ಆರ್.ಎಂ. ಕೇಸಗಳು, ಸ್ಟಾಟಿಯೂಟರಿ ರೂಪದಲ್ಲಿ ಲಭಿಸಬೇಕಿರುವ ಪರಿಹಾರ, ಭೂಹಕ್ಕು ಪತ್ರ ಅರ್ಜಿ ಇತ್ಯಾದಿಗಳ ಸಂಬಂಧ ದೂರುಗಳನ್ನು ಅದಾಲತ್ ನಲ್ಲಿ ಪರಿಶೀಲಿಸುವುದಿಲ್ಲ. ಎಂಬ ವೆಬ್ ಸೈಟ್ ಮೂಲಕ ಆನ್ ಲೈನ್ ಆಗಿ, ಅಕ್ಷಯ ಸೆಂಟರ್ ಗಳ ಮೂಲಕ ದೂರು ಸಲ್ಲಿಸಬಹುದು. ಜೊತೆಗೆ ಸಂಬಂಧ ಪಟ್ಟ ಕಚೇರಿಗಳಲ್ಲೂ, ಗ್ರಾಮ ಕಚೇರಿಗಳಲ್ಲೂ ಆನ್ ಲೈನ್ ಅರ್ಜಿ ಸಲ್ಲಿಕೆಗೆ ಸೌಲಭ್ಯಗಳಿವೆ.