ಕೋಝಿಕ್ಕೋಡ್: ಕರಿಪ್ಪೂರ್ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ 8 ರ ಸುಮಾರಿಗೆ ದುಬೈನಿಂದ ಕರಿಪ್ಪುರ್ ಗೆ ಆಗಮಿಸಿದ ಏರ್ ಇಂಡಿಯಾ ವಿಮಾನ(ಎಎಕ್ಸ್‍ಬಿ 1344,ಬಿ 737) ಅಪಘಾತಕ್ಕೀಡಾಗಿದ್ದು ಪೈಲಟ್ ಟಿ.ವಿ.ಸಾಥೆ, ಸಹ ಪೈಲಟ್ ಮೃತಪಟ್ಟಿರುವರು(ಹೆಸರು ತಿಳಿದುಬಂದಿಲ್ಲ). ಸ್ಥಳದಲ್ಲಿ ಮೃತಪಟ್ಟಿರುವರೆಂದು ತಿಳಿದುಬಂದಿದೆ.
ಜೊತೆಗೆ ಪ್ರಯಾಣಿಕರಾಗಿದ್ದ ಇಬ್ಬರು ಸ್ತ್ರೀಯರು, ಇಬ್ಬರು ಪುರುಷರು, ಒಂದು ಮಗು ಮೃತಪಟ್ಟಿರುವರೆಂದು ಪ್ರಾಥಮಿಕ ಮಾಹಿತಿಯಿಂದ ತಿಳಿಯಲಾಗಿದೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ 18 ಜನರನ್ನು ದಾಖಲಿಸಲಾಗಿದೆ. ರಾಜೀವನ್, ಶರಪುದ್ದೀನ್ ಮೃತಪಟ್ಟವರೆಂದು ಇದೀಗ ಮಾಹಿತಿ ಲಭ್ಯವಾಗಿದೆ.
ಕರಿಪ್ಪೂರ್ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ವಿಮಾನ ಅಪಘಾತಕ್ಕೀಡಾಗಿದೆ. ವಿಮಾನವು ರನ್ ವೇ ಯಲ್ಲಿ ಇಳಿಯುತ್ತಿರುವಂತೆ ತೀವ್ರ ಮಳೆಯಿಂದ ಜಾರಿತೆಂದು ತಿಳಿಯಲಾಗಿದೆ. 184 ಮಂದಿ ಪ್ರಯಾಣಿಕರೂ, ಏಳು ಮಂದಿ ವಿಮಾನ ಸಿಬ್ಬಂದಿಗಳು ವಿಮಾನದಲ್ಲಿದ್ದರು. 52 ಮಕ್ಕಳು ಈ ಪ್ರಯಾಣಿಕರಲ್ಲಿ ಸೇರಿದ್ದರೆಂದು ಅಂದಾಜಿಸಲಾಗಿದೆ.
ವಿಮಾನ ಜಾರಿ ಬಿದ್ದ ರಭಸಕ್ಕೆ 30 ಅಡಿ ಆಳಕ್ಕೆ ಕುಸಿದಿದ್ದು ಎರಡು ಭಾಗಗಳಾಗಿ ಒಡೆದು ತೀವ್ರತರ ಶಬ್ದ ಕೇಳಿಬಂದಿತೆಂದು ತಿಳಿದುಬಂದಿದೆ.
ಹೆಚ್ಚಿನ ಮಾಹಿತಿಗೆ ಕಂಟ್ರೋಲ್ ರೂಂ ನಂಬ್ರ 0483-2719493, 0495-2376901 ಸಂಖ್ಯೆ ಸಂಪರ್ಕಿಸಬಹುದಾಗಿದೆ.