ಕಾಸರಗೋಡು: ಇಂದು(ಶನಿವಾರ) ರಾಜ್ಯ ಹಾಗೂ ಜಿಲ್ಲೆಗೆ ಏಕಕಾಲದಲ್ಲಿ ಕೊರೊನಾ ಮಹಾಘಾತ ನೀಡಿದೆ. ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 153 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ಸಂದರ್ಭದಲ್ಲಿ 28 ಮಂದಿ ಗುಣಮುಖರಾಗಿದ್ದಾರೆ. 151 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ.
ಕೇರಳದಲ್ಲಿ 1129ಮಂದಿಗೆ ಸೋಂಕು : ಕೇರಳ ರಾಜ್ಯದಲ್ಲಿ ಶನಿವಾರ 1129 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ವೇಳೆ 752 ಮಂದಿ ಗುಣಮುಖರಾಗಿದ್ದಾರೆ.
ರೋಗ ಬಾಧಿತರು : ತಿರುವನಂತಪುರ-259, ಕಾಸರಗೋಡು-153, ಮಲಪ್ಪುರಂ-141, ಕಲ್ಲಿಕೋಟೆ-95, ಪತ್ತನಂತಿಟ್ಟ-85, ತೃಶ್ಶೂರು-76, ಆಲಪ್ಪುಳ-67, ಎರ್ನಾಕುಳಂ-59, ಕೋಟ್ಟಯಂ-47, ಪಾಲ್ಘಾಟ್-47, ವಯನಾಡು-46, ಕೊಲ್ಲಂ-35, ಇಡುಕ್ಕಿ-14, ಕಣ್ಣೂರು-5 ಎಂಬಂತೆ ರೋಗ ಬಾಧಿಸಿದೆ.
82 ವರ್ಷದ ಮಲಪ್ಪುರ ಕೊಂಡೋಟಿ ನಿವಾಸಿ, 52 ವರ್ಷದ ಎರ್ನಾಕುಳಂ ಆಲುವಾ ನಿವಾಸಿ, 81 ವರ್ಷದ ಎರ್ನಾಕುಳಂ ನಿವಾಸಿ, 72 ವರ್ಷದ ಕಾಸರಗೋಡು ತೃಕ್ಕರಿಪುರ ನಿವಾಸಿ, 62 ವರ್ಷದ ತಿರುವನಂತಪುರ ನೆಡುಮಂಗಾಡ್ ನಿವಾಸಿ, 49 ವರ್ಷದ ಕಲ್ಲಿಕೋಟೆ ಬೀಚ್ ನಿವಾಸಿ, 73 ವರ್ಷದ ಕೊಲ್ಲಂ ಜಿಲ್ಲೆಯ ನಿವಾಸಿ, 59 ವರ್ಷದ ತೃಶ್ಶೂರು ಇರಿಂಗಾಲಕುಡ ನಿವಾಸಿ ಸಾವಿಗೀಡಾದರು. ಇದರೊಂದಿಗೆ ಕೇರಳದಲ್ಲಿ ಸಾವಿಗೀಡಾದರ ಸಂಖ್ಯೆ 81 ಕ್ಕೇರಿತು.
ಶನಿವಾರ ರೋಗ ಬಾಧಿತರಲ್ಲಿ 89 ಮಂದಿ ವಿದೇಶದಿಂದ ಹಾಗು 114 ಮಂದಿ ಇತರ ರಾಜ್ಯಗಳಿಂದ ಬಂದವರು. 880 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. 24 ಮಂದಿ ಆರೋಗ್ಯ ಕಾರ್ಯಕರ್ತರಿಗೆ, 11 ಮಂದಿ ಕೆಎಸ್‍ಇ ಸಿಬ್ಬಂದಿಗಳಿಗೆ, 5 ಮಂದಿ ಕೆಎಲ್‍ಎಫ್ ಸಿಬ್ಬಂದಿಗಳಿಗೆ, 4 ಮಂದಿ ಐಎನ್‍ಎಚ್‍ಎಸ್ ಸಿಬ್ಬಂದಿಗಳಿಗೆ ರೋಗ ಬಾಧಿಸಿದೆ.
ರೋಗ ಮುಕ್ತ : ತಿರುವನಂತಪುರ-168, ಆಲಪ್ಪುಳ-100, ಪತ್ತನಂತಿಟ್ಟ-58, ಕೋಟ್ಟಯಂ-57, ತೃಶ್ಶೂರು-54, ಕೊಲ್ಲಂ-53, ಕಲ್ಲಿಕೋಟೆ-49, ಪಾಲ್ಘಾಟ್-42, ಮಲಪ್ಪುರಂ-36, ಎರ್ನಾಕುಳಂ-35, ಕಣ್ಣೂರು-35, ಇಡುಕ್ಕಿ-32, ಕಾಸರಗೋಡು-28, ವಯನಾಡು-5 ಎಂಬಂತೆ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 10862 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 13779 ಮಂದಿ ಗುಣಮುಖರಾಗಿದ್ದಾರೆ.
ಮಾಸ್ಕ್ ಧರಿಸದ 292 ಮಂದಿ ವಿರುದ್ಧ ಕೇಸು : ಕಾಸರಗೋಡು ಜಿಲ್ಲೆಯಲ್ಲಿ ಮಾಸ್ಕ್ ಧರಿಸದ 292 ಮಂದಿ ವಿರುದ್ಧ ಪೆÇಲೀಸರು ಕೇಸು ದಾಖಲಿಸಿದ್ದಾರೆ.
ಲಾಕ್‍ಡೌನ್ ಉಲ್ಲಂಘನೆ ಆರೋಪದಲ್ಲಿ ಮೇಲ್ಪರಂಬ ಠಾಣೆ-1, ಚಂದೇರ-2, ವೆಳ್ಳರಿಕುಂಡು-1, ಬೇಕಲ-2, ಹೊಸದುರ್ಗ-1 ಎಂಬಂತೆ 7 ಕೇಸುಗಳನ್ನು ದಾಖಲಿಸಲಾಗಿದೆ. ವಿವಿಧ ಕೇಸುಗಳಿಗೆ ಸಂಬಂಧಿಸಿ 9 ಮಂದಿಯನ್ನು ಬಂಧಿಸಿದ್ದು, 9 ವಾಹನಗಳನ್ನು ವಶಪಡಿಸಲಾಗಿದೆ. ಕ್ವಾರಂಟೈನ್ ಉಲ್ಲಂಘನೆ ಸಂಬಂಧ ತೆಕ್ಕಿಲ್‍ನ ಅಬ್ದುಲ್ ಖಾದರ್ ವಿರುದ್ಧ ಮೇಲ್ಪರಂಬ ಪೆÇಲೀಸರು ಕೇಸು ದಾಖಲಿಸಿದ್ದಾರೆ.
ಜಿಲ್ಲೆಯಲ್ಲಿ 28 ಮಂದಿಗೆ ಕೋವಿಡ್ ನೆಗೆಟಿವ್:
ಜಿಲ್ಲೆಯಲ್ಲಿ ಶನಿವಾರ 28 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಪರವನಡ್ಕ ಸಿ.ಎಫ್.ಎಲ್.ಟಿ.ಸಿ.ಯಲ್ಲಿ ದಾಖಲಾಗಿದ್ದ 3, ಪಡನ್ನಕ್ಕಾಡ್ ಕೃಷಿ ಕಾಲೇಜಿನ ಸಿ.ಎಫ್.ಎಲ್.ಟಿ.ಸಿ.ಯಲ್ಲಿ ದಾಖಲಾಗಿದ್ದ 4, ಸಿ.ಯು.ಕೆ.ಹಳೆಯ ಕ್ಯಾಂಪಸ್ ಸಿ.ಎಫ್.ಎಲ್.ಟಿ.ಸಿ.ಯಲ್ಲಿ ದಾಖಲಾಗಿದ್ದ 11, ವಿದ್ಯಾನಗರ ಸಿ.ಎಫ್.ಎಲ್.ಟಿ.ಸಿ.ಯಲ್ಲಿ ದಾಖಲಾಗಿದ್ದ 10 ಮಂದಿ ಕೋವಿಡ್ ನಿಂದ ಗುಣಮುಖರಾದರು.
ಜಿಲ್ಲೆಯಲ್ಲಿ 3613 ಮಂದಿ ನಿಗಾದಲ್ಲಿ:
ಜಿಲ್ಲೆಯಲ್ಲಿ 3613 ಮಂದಿ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಮನೆಗಳಲ್ಲಿ 2662 ಮಂದಿ, ಸಾಂಸ್ಥಿಕವಾಗಿ 951 ಮಂದಿ ನಿಗಾದಲ್ಲಿರುವರು. ನೂತನವಾಗಿ 261 ಮಂದಿ ನಿಗಾ ಪ್ರವೇಶ ಮಾಡಿದ್ದಾರೆ. 169 ಮಂದಿ ಶನಿವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ.
ಈ ವರೆಗೆ 29655 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಲಾಗಿದೆ. ನೂತನವಾಗಿ 1374 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 877 ಮಂದಿಯ ಫಲಿತಾಂಶ ಲಭಿಸಿಲ್ಲ.
ಕೋವಿಡ್ ಸೋಂಕು ಹೆಚ್ಚಳ : ಹಾಟ್ ಸ್ಪಾಟ್ಗಳು
ಕೋವಿಡ್ 19 ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 17 ನೂತನ ಹಾಟ್ ಸ್ಪಾಟ್ (ಕಂಟೈ ನ್ಮೆಂಟ್ ಝೋನ್ ಗಳು)ಗಳಾಗಿವೆ.
ಪುಲ್ಲೂರು-ಪೆರಿಯ ಗ್ರಾಮಪಂಚಾಯತ್ ನ 1,7,8,9,11,13,14,17 ವಾರ್ಡ್ ಗಳು, ಪುತ್ತಿಗೆ ಗ್ರಾಮಪಂಚಾಯತ್ ನ 6,10ನೇ ವಾರ್ಡ್ ಗಳು ತ್ರಿಕರಿಪುರ ಗ್ರಾಮಪಂಚಾಯತ್ ನ 1,3,4,5,7,11,13,14,15,16 ನೇ ವಾರ್ಡ್ ಗಳು, ಉದುಮಾ ಗ್ರಾಮಪಂಚಾಯತ್ ನ 2,6,11,16,18 ನೇ ವಾರ್ಡ್ ಗಳು, ವರ್ಕಾಡಿ ಗ್ರಾಮ ಪಂಚಾಯತ್ ನ 1,2,3,5,7,8,9,10 ನೇ ವಾರ್ಡ್ ಗಳು, ವೆಸ್ಟ್ ಏಳೇರಿ ಪಂಚಾಯತ್ 14ನೇ ವಾರ್ಡ್ ನೂತನ ಹಾಟ್ ಸ್ಪಾಟ್ ಗಳಾಗಿವೆ.