HEALTH TIPS

ಕಾಸರಗೋಡು : ಇಬ್ಬರ ಸಾವು- 113 ಮಂದಿಗೆ ಕೊರೊನಾ ಸೋಂಕು ದೃಢ

   
           ಕಾಸರಗೋಡು: ಕೊರೊನಾ ಸೋಂಕಿನಿಂದ ಕಾಸರಗೋಡು ಜಿಲ್ಲೆಯಲ್ಲಿ ರವಿವಾರ ಇಬ್ಬರು ಸಾವಿಗೀಡಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾದಿಂದ ಸಾವಿಗೀಡಾದವರ ಸಂಖ್ಯೆ 11 ಕ್ಕೇರಿತು. 
           105 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. ವಿದೇಶದಿಂದ 4 ಮಂದಿ, ಇತರ ರಾಜ್ಯಗಳಿಂದ 4 ಮಂದಿ ಆಗಮಿಸಿದವರಿಗೆ ಸೋಂಕು ಖಚಿತಗೊಂಡಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. 
            ಕಾಸರಗೋಡು ನಗರಸಭೆಯ 29,ಚೆಮ್ನಾಡ್ ಪಂಚಾಯತ್ ನ 19, ಚೆಂಗಳ ಪಂಚಾಯತ್ ನ 6, ಕಾರಡ್ಕ ಪಂಚಾಯತ್ ನ 1, ಮಂಗಲ್ಪಾಡಿ ಪಂಚಾಯತ್ ನ 1, ಮಂಜೇಶ್ವರ ಪಂಚಾಯತ್ ನ 2, ಮೀಂಜ ಪಂಚಾಯತ್ ನ 1, ಮುಳಿಯಾರ್ ಪಂಚಾಯತ್ ನ 2, ಪಳ್ಳಿಕ್ಕರೆ ಪಂಚಾಯತ್ ನ 2, ಅಜಾನೂರು ಗ್ರಾಮಪಂಚಾಯತ್ ನ 2, ಕಳ್ಳಾರ್ ಪಂಚಾಯತ್ನ 1, ಕಾಞಂಗಾಡ್ ನಗರಸಭೆಯ 7, ಕಯ್ಯೂರು-ಚೀಮೇನಿ ಪಂಚಾಯತ್ ನ 2, ಕಿನಾನೂರು-ಕರಿಂದಳಂ ಪಂಚಾಯತ್ ನ 1, ಕೋಡೋಂ-ಬೇಳೂರು ಪಂಚಾಯತ್ ನ 1, ನೀಲೇಶ್ವರ ನಗರಸಭೆಯ 1, ಪಡನ್ನ ಪಂಚಾಯತ್ ನ 3, ಪನತ್ತಡಿ ಪಂಚಾಯತ್ ನ 2, ಪುಲ್ಲೂರು-ಪೆರಿಯ ಪಂಚಾಯತ್ 1, ತ್ರಿಕರಿಪುರ ಪಂಚಾಯತ್ ನ 18, ಉದುಮಾ ಪಂಚಾಯತ್ ನ 8, ವಲಿಯಪರಂಬ 1, ವೆಸ್ಟ್ ಏಳೇರಿ ಪಂಚಾಯತ್ ನ 1, ಕಂಕೋಲ್ ಪಂಚಾಯತ್ ನ (ಕಣ್ಣೂರು) 1 ಮಂದಿಗೆ ಸೋಂಕು ಖಚಿತಗೊಂಡಿದೆ ಎಂದವರು ತಿಳಿಸಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries