ತಿರುವನಂತಪುರ: ಕೇರಳದಲ್ಲಿ 1184 ಜನರಿಗೆ ಇಂದು ಕೋವಿಡ್ -19 ದೃಢಪಡಿಸಲಾಗಿದೆ. 784 ಜನರು ರೋಗಮುಕ್ತರಾದರು. ಸಂಪರ್ಕದ ಮೂಲಕ 954 ಜನರಿಗೆ ಸೋಂಕು ತಗುಲಿರುವುದು ಸಾಬೀತಾಗಿದ್ದು ಆತಂಕಮೂಡಿಸಿದೆ. ರಾಜ್ಯದಲ್ಲಿ ಏಳು ಕೋವಿಡ್ ಸಾವುಗಳು ವರದಿಯಾಗಿವೆ. ಕೋವಿಡ್ ಪರಿಶೀಲನಾ ಸಭೆಯ ನಂತರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯದ ಕೋವಿಡ್ ಮಾಹಿತಿ ನೀಡಿದರು.
ಕೋವಿಡ್ ಪಾಸಿಟ್ ಜಿಲ್ಲಾವಾರು ವಿವರ:
ಮಲಪ್ಪುರಂ ಜಿಲ್ಲೆಯಲ್ಲಿ ಇಂದು ರಾಜ್ಯದಲ್ಲಿ ಅತಿ ಹೆಚ್ಚು ಸೋಂಕಿತರನ್ನು ಪತ್ತೆಹಚ್ಚಲಾಗಿದೆ. ಇಲ್ಲಿ ಇಂದು 255 ಮಂದಿಗಳಿಗೆ ಸೋಂಕು ದೃಢಗೊಂಡಿದೆ. ತಿರುವನಂತಪುರ 200, ಪಾಲಕ್ಕಾಡ್ 147, ಕಾಸರಗೋಡು 146, ಎರ್ನಾಕುಳಂ 101, ಕೋಝಿಕ್ಕೋಡ್ 66, ಕಣ್ಣೂರು 63, ಕೊಲ್ಲಂ 41, ತ್ರಿಶೂರ್ 40, ಕೊಟ್ಟಾಯಂ 40, ವಯನಾಡ್ 33, ಆಲಪ್ಪುಳ 30, ಇಡುಕ್ಕಿ 10, ಎರ್ನಾಕುಳಂ 4 ಮಂದಿಯಲ್ಲಿ ಸೋಂಕು ದೃಢಪಡಿಸಲಾಗಿದೆ.
ಏಳು ಮಂದಿ ಸಾವು:
ರಾಜ್ಯದಲ್ಲಿ ಇಂದು ಏಳು ಕೋವಿಡ್ ಸಾವುಗಳನ್ನು ಸರ್ಕಾರ ಖಚಿತಪಡಿಸಿದೆ. ಎರ್ನಾಕುಳಂ ಪಲ್ಲಿಕ್ಕಲ್‍ನ ನಫಿಸಾ (52), ಕೊಯಿಲಾಂಡಿಯಿಂದ ಅಬೂಬಕ್ಕರ್(64), ತಿರುವನಂತಪುರ ಮಾರಣಲ್ಲೂರಿನ ಜಮಾ (50), ಕೊಲ್ಲಂ ಮೈಲಾಕ್ಕಾಡ್ ದೇವದಾಸ್ (45), ಕಾಸರಗೋಡು ನೀಲೇಶ್ವರದ ಮೊಹಮ್ಮದ್ ಕುಂಞÂ(65) ಎಂಬವರು ಮೃತಪಟ್ಟಿದ್ದಾರೆ ಎಂದು ಸರ್ಕಾರ ಸ್ಪಷ್ಟಪಡಿಸಿತು.
ಕೋವಿಡ್ ಚಿಕಿತ್ಸೆಯಲ್ಲಿದ್ದ ವ್ಯಕ್ತಿ ಮೃತ್ಯು:
ಚಿಕಿತ್ಸೆ ಪಡೆಯುತ್ತಿದ್ದ ಅಲುವಾ ನಿವಾಸಿ ಮೃತಪಟ್ಟಿದ್ದು ಕೋವಿಡ್ ಖಚಿತಪಡಿಸಲಾಗಿದೆ. ಕಳಮಸ್ಸೆರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಲುವಾ ಕಡುಂಗಲ್ಲೂರ್ ಕಾಮಿಯಂಪಟ್ಟು ಲೀಲಾಮಣಿಯಮ್ಮ (71) ಇಂದು ಬೆಳಿಗ್ಗೆ ನಿಧನರಾದರು. ಅವರಿಗೆ ಅಧಿಕ ರಕ್ತದೊತ್ತಡ, ಮಧುಮೇಹ, ಹೃದ್ರೋಗ ಮತ್ತು ಶ್ವಾಸಕೋಶದ ಕಾಯಿಲೆಗಳಿದ್ದವು. ಅವರ ಆರೋಗ್ಯವು ಹದಗೆಡುತ್ತಿರುವಂತೆ ನ್ಯುಮೋನಿಯಾದಿಂದ ನಿಧನರಾದರು. ಕೋವಿಡ್ ನಿಂದ ಮೃತಪಟ್ಟಿದ್ದಾರೆಯೇ ಎಂದು ಖಚಿತಪಡಿಸಲು ಲೀಲಾ ಮಣಿಯಮ್ಮ ಅವರ ಗಂಟಲ ದ್ರವ ವನ್ನು ಆಲಪ್ಪುಳ ಲ್ಯಾಬ್‍ಗೆ ಕಳುಹಿಸಲಾಗಿದೆ.
ರಾಜ್ಯದ ಪರಿಸ್ಥಿತಿ ಗಂಭೀರ:
ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ರಾಜ್ಯದಲ್ಲಿ ತೀವ್ರ ಕಳವಳ ಹೆಚ್ಚಿದೆ. ರಾಜ್ಯದಲ್ಲಿ ಪ್ರತಿದಿನ ಸಾವಿರಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಸಂಪರ್ಕದ ಮೂಲಕ ಕೋವಿಡ್ ಪ್ರಕರಣಗಳು ಮತ್ತು ಸಂಪರ್ಕದ ಕಾರಣ ಬಾಧಿತರಾಗುತ್ತಿರುವುದು ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ. ಆರೋಗ್ಯ ಕಾರ್ಯಕರ್ತರಲ್ಲಿ ಕೋವಿಡ್ ಸೋಂಕು ನಿರಂತರವಾಗಿ ದೃಢಗೊಳ್ಳುತ್ತಿರುವುದೂ ಭಯಕ್ಕೆ ಕಾರಣವಾಗುತ್ತಿದೆ. ರೋಗಿಗಳ ಸಂಖ್ಯೆ ಹೆಚ್ಚಾದಂತೆ, ಆಸ್ಪತ್ರೆಗಳಲ್ಲಿ ಮತ್ತು ಮನೆಯಲ್ಲಿ ಚಿಕಿತ್ಸೆ ಪಡೆಯುವ ಮತ್ತು ಕ್ವಾರಂಟೈನ್ ನಲ್ಲಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಕಂಟೈನ್ ಮೆಂಟ್ ವಲಯಗಳು ಮತ್ತು ಹಾಟ್‍ಸ್ಪಾಟ್‍ಗಳ ಸಂಖ್ಯೆಯಲ್ಲಿ ಬದಲಾವಣೆಗಳಾಗಿವೆ.
ತಿರುವನಂತಪುರಂ ಜಿಲ್ಲೆಯಲ್ಲಿ ಹೆಚ್ಚಿನ ಪ್ರಕರಣಗಳು?
ತಿರುವನಂತಪುರಂ ಜಿಲ್ಲೆಯಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣಗಳಿವೆ. ರೋಗದಿಂದ ಚೇತರಿಸಿಕೊಳ್ಳುವವರ ಸಂಖ್ಯೆಯೂ ರಾಜಧಾನಿಯಲ್ಲಿ ಹೆಚ್ಚಾಗಿದೆ. ಸಂಪರ್ಕದ ಮೂಲಕ ಕೋವಿಡ್ ಪ್ರಕರಣಗಳು ತಿರುವನಂತಪುರದಲ್ಲಿ ಅತೀ ಹೆಚ್ಚಿದೆ. ಸಮುದಾಯದ ಹರಡುವಕೆ ಕಂಡುಬರುವ ಪುಲ್ಲುವಿಳ ಪ್ರದೇಶಗಳಲ್ಲಿ ಸಾರ್ವಜನಿಕರ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ಪುಲ್ಲುವಿಳ ಪ್ರದೇಶಕ್ಕೆ ಅನಗತ್ಯ ನಿಬರ್ಂಧ ಹೇರುವುದನ್ನು ವಿರೋಧಿಸಿ ಸ್ಥಳೀಯರು ಇಂದು ಪ್ರತಿಭಟನೆ ನಡೆಸಿದರು. ಎರ್ನಾಕುಲಂ ಜಿಲ್ಲೆಯಲ್ಲಿ ಕೋವಿಡ್ ಬಾಧಿತರ ಸಂಖ್ಯೆಯೂ ಹೆಚ್ಚುತ್ತಿದೆ. ಹೆಚ್ಚಿನ ಕೋವಿಡ್ ಪ್ರಕರಣಗಳು ಸಂಪರ್ಕದ ಮೂಲಕ ಎನ್ನುವುದೂ ಆತಂಕಕಾರಿ ಎಂದು ಉಲ್ಲೇಖಿಸಲಾಗಿದೆ.