HEALTH TIPS

ರಾಜ್ಯದಲ್ಲಿ ಇಂದು 1195 ಕೋವಿಡ್ ಸೋಂಕಿತರು-ಕಾಸರಗೋಡು-128 ಬಾಧಿತರು

              ತಿರುವನಂತಪುರ: ಕೇರಳದಲ್ಲಿ ಇಂದು ಕೋವಿಡ್ ಸೋಂಕು 1195 ಮಂದಿಯಲ್ಲಿ ಹೊಸತಾಗಿ ಪತ್ತೆಹಚ್ಚಲಾಗಿದೆ. ಇಂದು 1234 ಬಾಧಿತರು ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಏಳು ಕೋವಿಡ್ ಸಾವುಗಳು ವರದಿಯಾಗಿವೆ. 13 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಇಂದು ಕೋವಿಡ್ ಬಾಧಿಸಿದೆ.  ಇಂದು ರೋಗನಿರ್ಣಯ ಮಾಡಿದವರಲ್ಲಿ 125 ಇತರ ರಾಜ್ಯಗಳಿಂದ ಬಂದವರು. ಸಂಪರ್ಕದ ಮೂಲಕ 971 ಜನರಿಗೆ ಸೋಂಕು ತಗಲಿದೆ. ಅವರಲ್ಲಿ 79 ಜನರ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ ಎಂದು ಮುಖ್ಯಮಂತ್ರಿ ತಿಳಿಸಿದರು. 
                   ಜಿಲ್ಲಾವಾರು ಕೋವಿಡ್ ವಿವರಗಳು: 
         ರಾಜ್ಯದ ರಾಜಧಾನಿಯಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿವೆ. ರಾಜಧಾನಿಯಲ್ಲಿ ಒಟ್ಟು 274 ಜನರಲ್ಲಿ ಕೋವಿಡ್ ಪತ್ತೆಯಾಗಿದೆ. ಇತರ ಜಿಲ್ಲೆಗಳೆಂದರೆ ಎರ್ನಾಕುಳಂ 120, ಆಲಪ್ಪುಳ 108, ತ್ರಿಶೂರ್ 86, ಮಲಪ್ಪುರಂ 167,  ಕಾಸರಗೋಡು 128, ಪಾಲಕ್ಕಾಡ್ 41, ಕೊಲ್ಲಂ 30, ಕಣ್ಣೂರು 61, ಪತ್ತನಂತಿಟ್ಟು 37, ಕೊಟ್ಟಾಯಂ 51, ಕೋಝಿಕ್ಕೋಡ್ 39,  ಮತ್ತು ವಯನಾಡ್ 14 ಸೋಂಕಿತರನ್ನು ಗುರುತಿಸಲಾಗಿದೆ.
           ಗುಣಮುಖರಾದವರ ವಿವರ:
    ರಾಜ್ಯದಲ್ಲಿ ಇಂದು 1234 ಮಂದಿರೋಗಮುಕ್ತರಾದರು. ತಿರುವನಂತಪುರ-528, ಕೊಲ್ಲಂ-49, ಪತ್ತನಂತಿಟ್ಟು 46, ಆಲಪ್ಪುಳ 60, ಕೋಟ್ಟಯಂ-47, ಇಡುಕ್ಕಿ-58, ಎರ್ನಾಕುಳಂ-35, ತೃಶೂರ್-51, ಪಾಲಕ್ಕಾಡ್-13, ಮಲಪ್ಪುರಂ-77, ಕೋಝಿಕ್ಕೋಡ್-72, ವಯನಾಡ್-40, ಕಣ್ಣೂರು-53 ಹಾಗೂ ಕಾಸರಗೋಡಲ್ಲಿ 105 ಮಂದಿ ರೋಗ ಮುಕ್ತರಾದರು.
          ಪೆÇಲೀಸರಿಗೆ ಎರಡು ವಾರಗಳ ಕಾಲಾವಧಿ:
     ತಿರುವನಂತಪುರದಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳ ಕಾರ್ಯಾಚರಣೆಗೆ ನಗರ ಪೆÇಲೀಸ್ ಆಯುಕ್ತ ಬಲರಾಮ್ ಕುಮಾರ್ ಉಪಾಧ್ಯಾಯ ಅವರು ಪೆÇಲೀಸರಿಗೆ ಎರಡು ವಾರಗಳ ಗಡುವನ್ನು ನಿಗದಿಪಡಿಸಿದ್ದಾರೆ. ಎರಡು ವಾರಗಳವರೆಗೆ ಸಂಪರ್ಕದ ಮೂಲಕ ರೋಗ ಹರಡದಂತೆ ತಡೆಯಲು ಕಠಿಣ ಕ್ರಮ ಕೈಗೊಳ್ಳುವಂತೆ ಆಯುಕ್ತರು ಪೆÇಲೀಸರಿಗೆ ನಿರ್ದೇಶನ ನೀಡಿದ್ದಾರೆ. ಇದಕ್ಕಾಗಿ ಯಾವುದೇ ಕ್ರಮ ಕೈಗೊಳ್ಳಲು ನಗರ ಸಂಪೂರ್ಣ ಪೆÇಲೀಸ್ ಪಡೆ ಸನ್ನದ್ದವಾಗಿರಲು ಆದೇಶಿಸಲಾಗಿದೆ. ನಗರದ 22 ಪೆÇಲೀಸ್ ಠಾಣೆಗಳು, ಎರಡು ಸಂಚಾರ ಕೇಂದ್ರಗಳು ಮತ್ತು ಎಆರ್ ಶಿಬಿರದ ಎಲ್ಲ ಪೆÇಲೀಸ್ ಅಧಿಕಾರಿಗಳು ತಕ್ಷಣ ವರದಿ ಮಾಡಲು ಸೂಚಿಸಲಾಗಿದೆ. ಯಾವುದೇ ಸಮಯದಲ್ಲಿ ಕರೆ ಮಾಡಿದರೆ ಎಲ್ಲರೂ ಕರ್ತವ್ಯಕ್ಕೆ ಸಿದ್ಧರಾಗಿರಬೇಕು ಎಂದು ಸೂಚಿಸಲಾಗಿದೆ.
              ರಾಜ್ಯದಲ್ಲಿ ಕೋವಿಡ್ ಕಾಳಜಿಗಳಿಗೆ ಯಾವುದೇ ಕೊರತೆಯಿಲ್ಲ
      ಕೋವಿಡ್ ಬಾಧಿತರ  ಸಂಖ್ಯೆ ಹೆಚ್ಚುತ್ತಿರುವುದರಿಂದ ರಾಜ್ಯದಲ್ಲಿ ನಿಯಂತ್ರಣ ಕ್ರಮಗಳು ಸಮರೋಪಾದಿಯಲ್ಲಿದೆ. ಆದರೆ ಸೋಂಕು ಮೂಲಗಳಿಲ್ಲದ ಬಾಧಿತರು ಮತ್ತು ಸಂಪರ್ಕ-ಸಂಬಂಧಿತ ಕೋವಿಡ್ ಪ್ರಕರಣಗಳು ಹಿನ್ನಡೆಯಾಗಿದೆ. ಕೋವಿಡ್ ಆರೋಗ್ಯ ಕಾರ್ಯಕರ್ತರಿಗೂ ದೃಢಗೊಳ್ಳುತ್ತಿದೆ. ತಡೆಗಟ್ಟುವ ಕ್ರಮಗಳಲ್ಲಿ ಇದು ಹೊಡೆತವಾಗಿದೆ.  ಕೋವಿಡ್ ಪೆÇಲೀಸ್ ಅಧಿಕಾರಿಗಳು ಮತ್ತು ಆರೋಗ್ಯ ಕಾರ್ಯಕರ್ತರಲ್ಲಿ ದೃಢಪಡುತ್ತಿರುವುದು ಮತ್ತಷ್ಟು ಭೀತಿಗೆ ಕಾರಣವಾಗುತ್ತಿದೆ. ರೋಗಿಗಳ ಸಂಖ್ಯೆ ಹೆಚ್ಚಾದಂತೆ, ಆಸ್ಪತ್ರೆಗಳಲ್ಲಿ ಮತ್ತು ಮನೆಯಲ್ಲಿ ಚಿಕಿತ್ಸೆ ಪಡೆಯುವ ಮತ್ತು ಕ್ವಾರಂಟೈನ್ ನಲ್ಲಿರುವವರ ಸಂಖ್ಯೆ ಹೆಚ್ಚಿದೆ. ಹಾಟ್‍ಸ್ಪಾಟ್‍ಗಳು ಮತ್ತು ಕಂಟೈನ್ಮೆಂಟ್ ವಲಯಗಳ ಸಂಖ್ಯೆಯಲ್ಲಿ ಹೆಚ್ಚಳವಿದೆ.
             ಹೋಮಿಯೋಪತಿ ಚಿಕಿತ್ಸೆಗೆ ಕೋರಿ ಅರ್ಜಿ:
      ದೇಶದಲ್ಲಿ ಕೋವಿಡ್ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವುದರಿಂದ ಕೋವಿಡ್ ರೋಗಲಕ್ಷಣಗಳೊಂದಿಗೆ ಆಸ್ಪತ್ರೆಗೆ ದಾಖಲಾದವರಿಗೆ ಹೋಮಿಯೋಪತಿ ಔಷಧಿಗಳ ಅಗತ್ಯ ಕೋರಿ ಸುಪ್ರೀಂ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಕೋವಿಡ್ ರೋಗಿಗಳಿಗೆ ಹೋಮಿಯೋಪತಿ .ಔಷಧಿಗಳೊಂದಿಗೆ ಚಿಕಿತ್ಸೆ ನೀಡಲು ಬಯಸಿದರೆ ಗಂಭೀರ ಅನಾರೋಗ್ಯದ ಅಲೋಪತಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಅವಕಾಶ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಅರ್ಜಿದಾರರು ಸುಪ್ರೀಂ ಕೋರ್ಟ್‍ಗೆ ನಿರ್ದೇಶನ ನೀಡಿದ್ದರು. ಹೋಮಿಯೋಪತಿ ವೈದ್ಯರುಗಳಾದ ಡಾ.ರವಿ ಎಂ ನಾಯರ್ ಮತ್ತು ಡಾ.ಅಶೋಕ್ ಕುಮಾರ್ ದಾಸ್ ಅವರು ಸುಪ್ರೀಂ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries