ತಿರುವನಂತಪುರ: ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ ಈವರೆಗಿನ ಅತ್ಯಧಿಕ ಕೋವಿಡ್ ಬಾಧಿತರ ಪಟ್ಟಿ ಹೊರಬಂದಿರುವುದರೊಂದಿಗೆ ಗಡಿನಾಡು ತೀವ್ರ ಸಂಕಷ್ಟಕ್ಕೊಳಗಾಗುವತ್ತ ಸಾಗಿದೆ. ಇಂದು ಜಿಲ್ಲೆಯಲ್ಲಿ 168 ಮಂದಿಗಳಲ್ಲಿ ಸೋಂಕು ಪತ್ತೆಹಚ್ಚಲಾಗಿದೆ. 61 ಮಂದಿ ಗುಣಮುಖರಾಗಿದ್ದಾರೆ. 139 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ.
ಕೇರಳದಲ್ಲಿ 1251 ಮಂದಿಗೆ ಇಂದು ಸೋಂಕು ದೃಢೀಕರಿಸಲಾಗಿದೆ. 716 ಮಂದಿ ರೋಗಮುಕ್ತರಾದರು. ಇಂದಿನ ಸೋಂಕಿತರಲ್ಲಿ 1061 ಮಂದಿಗೆ ಸಂಪರ್ಕ ಕಾರಣ ಸೋಂಕು ಬಾಧಿಸಿದೆ. ಈ ಪೈಕಿ 73 ಬಾಧಿತರಿಗೆ ಸೋಂಕು ಪತ್ತೆಯಾದ ಮೂಲ ಸದೃಢೀಕರಿಸಲಾಗಿಲ್ಲ. ಇಂದಿನ ಬಾಧಿತರಲ್ಲಿ 77 ಮಂದಿ ವಿದೇಶದಿಂದಲೂ 94 ಮಂದಿ ಅನ್ಯ ರಾಜ್ಯಗಳಿಂದಲೂ ಬಂದವರಾಗಿದ್ದಾರೆ. ಇಂದಿನ ಬಾಧಿತರಲ್ಲಿ 18 ಮಂದಿ ಆರೋಗ್ಯ ಕಾರ್ಯಕರ್ತರಾಗಿದ್ದಾರೆ. ಅಲ್ಲದೆ ಇಂದಿನ ವರದಿಯಲ್ಲಿ ಐವರ ಮರಣಕ್ಕೆ ಕೋವಿಡ್ ಕಾರಣ ಎಂದು ಘೋಶಿಸಲಾಗಿದೆ. ಮಲಪ್ಪುರಂ ಇಂಬಿಚ್ಚಿಕೋಯ, ಕಣ್ಣೂರಿನ ಸಜಿತ್, ಪತ್ತನಂತಿಟ್ಟಿನ ಗೋಪಕುಮಾರ್, ಎರ್ನಾಕುಳಂನ ಬಾಬು, ಆಲಪ್ಪುಳದ ಸುಧೀರ್ ಎಂಬವರು ಮರಣಹೊಂದಿದವರಾಗಿದ್ದಾರೆ.
ಇಂದು ಐದು ಜಿಲ್ಲೆಗಳಲ್ಲಿ ನೂರು ಮೀರಿದ ಬಾಧಿತರು:
ಇಂದು ರಾಜ್ಯದ ಐದು ಜಿಲ್ಲೆಗಳಲ್ಲಿ ನೂರಕ್ಕೂ ಮಿಕ್ಕಿದ ಸೋಂಕು ಬಾಧಿತರು ಪತ್ತೆಯಾಗಿರುವುದು ಕಳವಳಕಾರಿಯಾದುದು. ತಿರುವನಂತಪುರ-289, ಕಾಸರಗೋಡು-168, ಕೋಝಿಕ್ಕೋಡ್-149, ಮಲಪ್ಪುರಂ-142, ಪಾಲಕ್ಕಾಡ್-123 ಸೋಂಕಿತರು ಪತ್ತೆಯಾಗಿರುವರು. ತಿರುವನಂತಪುರ ಜಿಲ್ಲೆಯೊಂದರಲ್ಲಿ 150 ಮಂದಿ ರೋಗಮುಕ್ತರಾದರು. ಕಳೆದ 24 ಗಂಟೆಗಳಲ್ಲಿ 27,608 ಮಂದಿಗಳ ಗಂಟಲ ದ್ರವ ಮಾದರಿ ಪರೀಕ್ಷಿಸಲಾಗಿದೆ ಎಂದು ಮುಖ್ಯಮಂತ್ರಿ ಇದೀಗ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.