ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 128 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 119 ಮಂದಿಗೆ ಸಂಪರ್ಕದಿಂದ ಸೋಂಕು ಹರಡಿದೆ. 11 ಮಂದಿಯ ಸಂಪರ್ಕ ಮೂಲ ಪತ್ತೆಯಾಗಿಲ್ಲ. 5 ಮಂದಿ ವಿದೇಶದಿಂದ, 4 ಮಂದಿ ಇತರ ರಾಜ್ಯಗಳಿಂದ ಬಂದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ಜಿಲ್ಲೆಯಲ್ಲಿ 113 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ.
4162 ಮಂದಿ ಜಿಲ್ಲೆಯಲ್ಲಿ ನಿಗಾದಲ್ಲಿದ್ದಾರೆ. ಇವರಲ್ಲಿ 2946 ಮಂದಿ ಮನೆಗಳಲ್ಲಿ, 1216 ಮಂದಿ ಸಾಂಸ್ಥಿಕವಾಗಿ ನಿಗಾದಲ್ಲಿದ್ದಾರೆ. ನೂತನವಾಗಿ 296 ಮಂದಿ ನಿಗಾ ಪ್ರವೇಶ ಮಾಡಿದ್ದಾರೆ. 166 ಮಂದಿ ಬುಧವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ.
ಇಂದಿನ ಕೋವಿಡ್ ಸ್ಥೂಲ ಅಂಕೆ-ಸಂಖ್ಯೆ:
ಕಾಸರಗೋಡು-53, ನೀಲೇಶ್ವರ-7, ಕಿನಾನೂರ್ ಕರಿಂದಳ-1, ತೃಕ್ಕರಿಪುರ-1, ಬದಿಯಡ್ಕ-3, ಕುಂಬಳೆ-15, ಮೀಂಜ8, ಮಂಗಲ್ಪಾಡಿ-04, ಮಧೂರು-5, ಮಡಿಕೈ-1, ಕುಂಬ್ಡಾಜೆ-1, ಚೆಂಗಳ-1, ಪಳ್ಳಿಕ್ಕೆರೆ-22, ಉದುಮ-1, ವೆಸ್ಟ್ ಎಳೇರಿ-1, ಅಜಾನೂರ್-2, ಮೊಗ್ರಾಲ್-1, ಬೇಡಡ್ಕ-1. ಮಂದಿಗೆ ಕೋವಿಡ್ ಬಾಧಿಸಿದೆ.
ನೂತನವಾಗಿ 978 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 795 ಮಂದಿಯ ತಪಾಸಣೆ ಫಲಿತಾಂಶ ಲಭಿಸಿಲ್ಲ.
ಮಾಸ್ಕ್ ಧರಿಸದ 338 ವಿರುದ್ಧ ಕೇಸು : ಮಾಸ್ಕ್ ಧರಿಸದೇ ಇದ್ದ ಆರೋಪಕ್ಕೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ 338 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಮೂಲಕ ಈ ಪ್ರಕರಣದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ದಾಖಲಾದ ಕೇಸುಗಳ ಸಂಖ್ಯೆ 17808 ಆಗಿದೆ.
ಲಾಕ್‍ಡೌನ್ ಉಲ್ಲಂಘನೆ: 8 ಕೇಸು ದಾಖಲು : ಲಾಕ್‍ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ 8 ಕೇಸುಗಳನ್ನು ದಾಖಲಿಸಲಾಗಿದೆ. 19 ಮಂದಿಯನ್ನು ಬಂಧಿಸಲಾಗಿದ್ದು, ಒಂದು ವಾಹನವನ್ನು ವಶಪಡಿಸಲಾಗಿದೆ. ಕಾಸರಗೋಡು ನಗರ ಠಾಣೆಯಲ್ಲಿ 1, ವಿದ್ಯಾನಗರ 1, ಆದೂರು 1, ಮೇಲ್ಪರಂಬ 1, ಹೊಸದುರ್ಗ 2, ಚಂದೇರ 1, ಚಿತ್ತಾರಿಕಲ್ 1 ಕೇಸುಗಳು ದಾಖಲಾಗಿವೆ. ಈ ಮೂಲಕ ಈ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ದಾಖಲಾದ ಕೇಸುಗಳ ಸಂಖ್ಯೆ 3343 ಆಗಿದೆ. 4493 ಮಂದಿಯನ್ನು ಬಂಧಿಸಲಾಗಿದ್ದು, 1319 ವಾಹನಗಳನ್ನು ವಶಪಡಿಸಲಾಗಿದೆ.