HEALTH TIPS

ರಾಜ್ಯದಲ್ಲಿ ಕೋವಿಡ್ ಗಂಭೀರತೆ ಮುಂದುವರಿಕೆ-1298 ಸೋಂಕಿತರು ಮತ್ತೆ ದೃಢ- ಕಾಸರಗೋಡು : 153 ಮಂದಿಗೆ ಸೋಂಕು

ು ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 153 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ಸಂದರ್ಭದಲ್ಲಿ 61 ಮಂದಿ ಗುಣಮುಖರಾಗಿದ್ದಾರೆ. 139 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. ಕೇರಳದಲ್ಲಿ 1298 ಮಂದಿಗೆ ಸೋಂಕು : ಕೇರಳದಲ್ಲಿ ಗುರುವಾರ 1298 ಮಂದಿಗೆ ಕೊರೊನಾ ಸೋಂಕು ದೃಢೀಕರಿಸಲಾಗಿದೆ. ಇದೇ ಸಂದರ್ಭದಲ್ಲಿ 800 ಮಂದಿ ಗುಣಮುಖರಾಗಿದ್ದಾರೆ. ರೋಗ ಬಾಧಿತರು : ತಿರುವನಂತಪುರ-219, ಕಲ್ಲಿಕೋಟೆ-174, ಕಾಸರಗೋಡು-153, ಪಾಲ್ಘಾಟ್-136. ಮಲಪ್ಪುರಂ-129, ಆಲಪ್ಪುಳ-99, ತೃಶ್ಶೂರು-74, ಎರ್ನಾಕುಳಂ-73, ಇಡುಕ್ಕಿ-58, ವಯನಾಡು-46, ಕೋಟ್ಟಯಂ-40, ಪತ್ತನಂತಿಟ್ಟ-33, ಕಣ್ಣೂರು-33, ಕೊಲ್ಲಂ-31 ಎಂಬಂತೆ ರೋಗ ಬಾಧಿಸಿದೆ. ಕೇರಳದಲ್ಲಿ ಒಟ್ಟು ಸತ್ತವರ ಸಂಖ್ಯೆ 97. ಸೋಂಕು ಬಾಧಿತರಲ್ಲಿ 78 ಮಂದಿ ವಿದೇಶದಿಂದ, 170 ಮಂದಿ ಇತರ ರಾಜ್ಯಗಳಿಂದ ಬಂದವರು. 1017 ಮಂದಿಗೆ ಸಂಪರ್ಕ ಮೂಲಕ ರೋಗ ಬಾಧಿಸಿದೆ. 29 ಮಂದಿ ಆರೋಗ್ಯ ಕಾರ್ಯಕರ್ತರಿಗೆ, 3 ಮಂದಿ ಕೆಎಸ್‍ಇ ಸಿಬ್ಬಂದಿಗಳಿಗೆ, 1 ಐಎನ್‍ಎಚ್‍ಎಸ್ ಸಿಬ್ಬಂದಿಗೆ ರೋಗ ಬಾಧಿಸಿದೆ. ರೋಗ ಮುಕ್ತ : ಎರ್ನಾಕುಳಂ-146, ತಿರುವನಂತಪುರ-137, ಮಲಪ್ಪುರಂ-114, ಕಾಸರಗೋಡು-61, ಕೋಟ್ಟಯಂ-54, ಕೊಲ್ಲಂ-49. ತೃಶ್ಶೂರು-48, ಪತ್ತನಂತಿಟ್ಟ-46, ಪಾಲ್ಘಾಟ್-41, ಆಲಪ್ಪುಳ-30, ಇಡುಕ್ಕಿ-20, ವಯನಾಡು-20, ಕಣ್ಣೂರು-18, ಕಲ್ಲಿಕೋಟೆ-16 ಎಂಬಂತೆ ಗುಣಮುಖರಾಗಿದ್ದಾರೆ. ಪ್ರಸ್ತುತ ಆಸ್ಪತ್ರೆಗಳಲ್ಲಿ 11983 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 18337 ಮಂದಿ ಗುಣಮುಖರಾಗಿದ್ದಾರೆ. ಮಾಸ್ಕ್ ಧರಿಸದ 362 ಮಂದಿ ವಿರುದ್ಧ ಕೇಸು : ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 362 ಮಂದಿ ವಿರುದ್ಧ ಪೆÇಲೀಸರು ಕೇಸು ದಾಖಲಿಸಿದ್ದಾರೆ. ಈ ಮೂಲಕ ಕಾಸರಗೋಡು ಜಿಲ್ಲೆಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿ ದಾಖಲಾದ ಕೇಸುಗಳ ಸಂಖ್ಯೆ 18170 ಆಗಿದೆ. ಲಾಕ್ ಡೌನ್ ಉಲ್ಲಂಘನೆ : 5 ಕೇಸುಗಳು : ಲಾಕ್‍ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 5 ಕೇಸುಗಳನ್ನು ದಾಖಲಿಸಲಾಗಿದೆ. 9 ಮಂದಿಯನ್ನು ಬಂಧಿಸಲಾಗಿದೆ. ಕುಂಬಳೆ ಪೆÇಲೀಸ್ ಠಾಣೆಯಲ್ಲಿ 1 ಕೇಸು, ಹೊಸದುರ್ಗ 1, ಚಂದೇರ 1, ಚಿತ್ತಾರಿಕಲ್ 1, ರಾಜಪುರಂ 1 ಕೇಸುಗಳು ದಾಖಲಾಗಿವೆ. ಈ ಮೂಲಕ ಈ ಪ್ರಕರಣಗಳಿಗೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ದಾಖಲಾದ ಕೇಸುಗಳ ಸಂಖ್ಯೆ 3348 ಆಗಿದೆ. 4501 ಮಂದಿಯನ್ನು ಬಂಧಿಸಲಾಗಿದೆ. 1319 ವಾಹನಗಳನ್ನು ವಶಪಡಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries