ತಿರುವನಂತಪುರ: ರಾಜ್ಯದಲ್ಲಿ ನಡೆಯುತ್ತಿರುವ ಕೋವಿಡ್ ನಿಯಂತ್ರಣ ಕ್ರಮಗಳ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಕೋವಿಡ್‍ನ ದೈನಂದಿನ ಸಾವು ಮತ್ತು ಸಂಪರ್ಕದ ಮೂಲಕ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದ ತೀವ್ರ ಕಳವಳಗಳು ವ್ಯಕ್ತವಾಗಿದೆ. ರಾಜ್ಯದಲ್ಲಿ ಪತ್ತೆಯಾಗದ ಮೂಲಗಳಿಂದ ಸೋಂಕು ಹಬ್ಬುತ್ತಿರುವುದೂ ಹೆಚ್ಚು ಚಿಂತೆಗೆ ಕಾರಣವಾಗುತ್ತಿದೆ. ರೋಗಿಗಳ ಸಂಖ್ಯೆ ಹೆಚ್ಚಾದಂತೆ, ಆಸ್ಪತ್ರೆಗಳಲ್ಲಿ ಮತ್ತು ಮನೆಯಲ್ಲಿ ಚಿಕಿತ್ಸೆ ಪಡೆಯುವ ಮತ್ತು ಕ್ವಾರಂಟೈನ್ ಗೊಳಗಾಗುವವರ ಸಂಖ್ಯೆಯೂ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಕಂಟೈನ್ಮೆಂಟ್ ವಲಯಗಳು ಮತ್ತು ಹಾಟ್ ಸ್ಪಾಟ್‍ಗಳ ಸಂಖ್ಯೆಯೂ ಬದಲಾಗಿದೆ.
ರಾಜ್ಯದ ಪ್ರಸ್ತುತ ಕೋವಿಡ್ ಮಾಹಿತಿ:
ಕೋವಿಡ್ ನಿನ್ನೆ ರಾಜ್ಯದಲ್ಲಿ 1083 ಪ್ರಕರಣಗಳನ್ನು ದೃಢಪಡಿಸಲಾಗಿದೆ. 1021 ಸೋಂಕಿತರು ಗುಣಮುಖರಾಗಿದ್ದಾರೆ. ಮೂರುಮಂದಿ ಸಾವನ್ನಪ್ಪಿದ್ದಾರೆ. ಕಳ್ಳಿಯೂರ್, ತಿರುವನಂತಪುರದ ಜಯಾನಂದನ್ (53), ಪೆರುವಾಯಲ್ ಮೂಲದ ರಾಜೇಶ್ (45), ಕೋಝಿಕ್ಕೋಡ್ ಕುಟ್ಟಮಸ್ಸೆರಿಯ ಗೋಪಿ (69) ಆಗಸ್ಟ್ 1 ರಂದು ನಿಧನರಾದವರಾಗಿದ್ದಿ ಅವರಿಗೆ ಕೋವಿಡ್ ಸೋಂಕಿರುವುದು ದೃಢಪಟ್ಟಿದೆ.
ಆಘಾತಕಾರಿ ಸಂಪರ್ಕದ ಪ್ರಕರಣಗಳು:
ಸಂಪರ್ಕದ ಮೂಲಕ ಕೋವಿಡ್ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚುತ್ತಿರುವುದು ಭೀತಿಗೊಳಿಸುತ್ತಿದೆ. ನಿನ್ನೆಯ ಸೋಂಕಿತರಲ್ಲಿ 902 ಜನರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. ಈ ಪೈಕಿ 71 ಸೋಂಕಿತರ ಸಂಪರ್ಕ ವಿವರದ ಮೂಲ ಸ್ಪಷ್ಟವಾಗಿಲ್ಲ ಎಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹದಿನಾರು ಆರೋಗ್ಯ ಕಾರ್ಯಕರ್ತರಿಗೆ ನಿನ್ನೆ ಸೋಂಕು ಪತ್ತೆಯಾಗಿದೆ. ಆರೋಗ್ಯ ಕಾರ್ಯಕರ್ತರು ಮತ್ತು ಪೆÇಲೀಸ್ ಅಧಿಕಾರಿಗಳಲ್ಲಿ ಕೋವಿಡ್ ಸೋಂಕು ನಿಯಂತ್ರಣ ಪ್ರಕ್ರಿಯೆಗಳಿಗೆ ಹಿನ್ನಡೆಯಾಗುತ್ತಿದೆ.
ರಾಜ್ಯದ ಹಾಟ್‍ಸ್ಪಾಟ್‍ಗಳ ಮಾಹಿತಿ:
ಕೋವಿಡ್ ಪ್ರಕರಣಗಳ ಹೆಚ್ಚಳದೊಂದಿಗೆ, ಹಾಟ್‍ಸ್ಪಾಟ್‍ಗಳಲ್ಲಿ ಬದಲಾವಣೆ ಕಂಡುಬಂದಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 509 ಹಾಟ್‍ಸ್ಪಾಟ್‍ಗಳಿವೆ. ನಿನ್ನೆ 13 ಹೊಸ ಪ್ರದೇಶಗಳನ್ನು ಹಾಟ್‍ಸ್ಪಾಟ್ ಪಟ್ಟಿಗೆ ಸೇರಿಸಲಾಗಿದೆ. ತ್ರಿಶೂರ್ ಜಿಲ್ಲೆಯ ತ್ರಿಕ್ಕೂರ್, (ಧಾರಕ ವಲಯ: ವಾರ್ಡ್ 13), ತಿರುವಿಲ್ವಾಮಲಾ (15), ಕೊಂಡಾಟಿ (1), ಅವಿನಿಸ್ಸೆರಿ (2), ಕೈಪ್ಪರಂಬು (3), ಕಾಂಜುರ್ (5), ಉತ್ತರ ಪರವೂರ್ (15) ಮತ್ತು ನಾರಕ್ಕಲ್ (9, 10)ಹಾಟ್ ಸ್ಪೋಟ್ ಗಳಾಗಿದ್ದರೆ ನಿನ್ನೆ ಹೊಸ ಪ್ರದೇಶಗಳಾದ ಪತ್ತನಂತಿಟ್ಟು ಜಿಲ್ಲೆಯ ಎರಾವಿಪೂರ್ (8), ನಿರನಂ (3), ಕೋಝಿಕ್ಕೋಡ್ ಜಿಲ್ಲೆಯ ಕುನ್ನುಮ್ಮಲ್ (11), ಪಾಲಕ್ಕಾಡ್ ಜಿಲ್ಲೆಯ ಮದವೂರ್ (8) ಮತ್ತು ಮನ್ನಾರ್ಕಡ್ (7, 13) ನ್ನು ಸೇರಿಸಲಾಗಿದೆ.
ಪಟ್ಟಿಯಿಂದ ಹೊರಕ್ಕೆ:
ಹಾಟ್‍ಸ್ಪಾಟ್‍ಗಳ ಸಂಖ್ಯೆಯಲ್ಲಿ ಬದಲಾವಣೆಗಳ ಹೊರತಾಗಿಯೂ ಹತ್ತು ಪ್ರದೇಶಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಕೊಲ್ಲಂ ಜಿಲ್ಲೆಯ ಮೆಲಿಲಾ (ವಾರ್ಡ್‍ಗಳು 5, 7, 8, 9, 10, 11), ಪಟ್ಟಾಜಿ ವಡಕ್ಕೇಕರ (ಎಲ್ಲಾ ವಾರ್ಡ್‍ಗಳು), ಪೆÇರುವಾ (14, 17), ಸೂರನಾಡ್ ಉತ್ತರ (ಎಲ್ಲಾ ವಾರ್ಡ್‍ಗಳು), ಮಲಪ್ಪುರಂ ಜಿಲ್ಲೆಯ ಪೆÇನ್ನಾನಿ ಪುರಸಭೆ (ಎಲ್ಲಾ ವಾರ್ಡ್‍ಗಳು), ನೀಲಂಬೂರು ಪುರಸಭೆ (ಎಲ್ಲಾ ವಾರ್ಡ್‍ಗಳು), ಪತ್ತನಂತಿಟ್ಟಿನ ಜಿಲ್ಲೆಯ ಎದಮ್‍ಕುಲಂ (13), ವೆಚೂಚಿರಾ (11), ತ್ರಿಶೂರ್ ಜಿಲ್ಲೆಯ ಚೆರ್ಪು (11) ಮತ್ತು ಇಡುಕಿ ಜಿಲ್ಲೆಯ ಕಾಂಜಿಕು (2, 3, 7, 13, 14) ಗಳನ್ನು ಕಂಟೈನ್ಮೆಂಟ್ ವಲಯದಿಂದ ಹೊರಗಿಡಲಾಗಿದೆ.