ತಿರುವನಂತಪುರ: ಇಸ್ರೋದ ಮೇಲೆ ಪತ್ತೆದಾರಿಕೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಇಸ್ರೋ ಮಾಜಿ ವಿಜ್ಞಾನಿ ನಂಬಿ ನಾರಾಯಣನ್ ಅವರಿಗೆ ನಷ್ಟ ಪರಿಹಾರವನ್ನು ಹಸ್ತಾಂತರಿಸಿದೆ. ರಾಜ್ಯ ಸರ್ಕಾರ 1.3 ಕೋಟಿ ರೂ. ಈ ಹಿಂದೆ ಹಸ್ತಾಂತರಿಸಿದ್ದು , ಉಳಿvದ 60 ಲಕ್ಷ ರೂ.ಗಳ ಮೊತ್ತವನ್ನು ಸರ್ಕಾರ ಹಸ್ತಾಂತರಿಸಿತು.
ಮಾಜಿ ಮುಖ್ಯ ಕಾರ್ಯದರ್ಶಿ ಕೆ ಜಯಕುಮಾರ್ ನೇತೃತ್ವದ ಸಮಿತಿಯ ಶಿಫಾರಸ್ಸಿನ ಮೇರೆಗೆ ನಂಬಿ ನಾರಾಯಣನ್ ಅವರಿಗೆ ಸರ್ಕಾರ ಪರಿಹಾರವನ್ನು ನೀಡಿತು. ಈ ಪ್ರಕರಣದಲ್ಲಿ 1 ಕೋಟಿ ರೂ.ಗಳಿಗೆ ನಂಬಿ ನಾರಾಯಣನ್ ಅವರೊಂದಿಗೆ ಚರ್ಚಿಸಲು ಮತ್ತು ಪರಿಹಾರದ ಬಗ್ಗೆ ತೀರ್ಮಾನಿಸಲು ಸರ್ಕಾರ ಮಾಜಿ ಮುಖ್ಯ ಕಾರ್ಯದರ್ಶಿಯನ್ನು ನೇಮಿಸಿತ್ತು. ಇದರ ಬೆನ್ನಲ್ಲೇ ತಿರುವನಂತಪುರ ಉಪ ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ಸರ್ಕಾರ 1.3 ಕೋಟಿ ರೂ.ಪಾವತಿಸಿತು. ಇದನ್ನು ಕಳೆದ ವರ್ಷ ಡಿಸೆಂಬರ್‍ನಲ್ಲಿ ಸಂಪುಟ ಅನುಮೋದಿಸಿತ್ತು. ನ್ಯಾಯ ವಿಳಂಬದ ಆಧಾರದ ಮೇಲೆ ಪರಿಹಾರವನ್ನು 1.3 ಕೋಟಿ ರೂ.ಗೆ ಹೆಚ್ಚಿಸಲಾಗಿದೆ.
ಕೆ ಜಯಕುಮಾರ್ ವರದಿಯಲ್ಲಿ ಈ ಮೊತ್ತವು ನಂಬಿ ನಾರಾಯಣನ್ ಅವರಿಗೆ ಸ್ವೀಕಾರಾರ್ಹವಾಗಿರುತ್ತದೆ ಮತ್ತು ಹಗರಣದಿಂದಾಗಿ ಇಸ್ರೊದಿಂದ ನಿರ್ಗಮಿಸಿದ ನಂತರ ತನಗೂ ದೇಶಕ್ಕೂ ನಷ್ಟಗೊಂಡ ಸೇವಾವಕಾಶದ ಮೌಲ್ಯವನ್ನು ನಿರ್ಣಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಸರ್ಕಾರ ನೀಡಿರುವ ಯಾವುದೇ ಮೊತ್ತವನ್ನು ಪರಿಹಾರವಾಗಿ ಸ್ವೀಕರಿಸುವುದಾಗಿ ಮತ್ತು ಪ್ರಕರಣವನ್ನು ತರ್ಕಬದ್ಧವಾಗಿ ತೀರ್ಮಾನಿಸಬೇಕು ಎಂದು ನಂಬಿ ನಾರಾಯಣನ್ ಈ ಹಿಂದೆ ಹೇಳಿದ್ದರು.
ನಂಬಿ ನಾರಾಯಣನ್ ಅವರಿಗೆ ಈ ಹಿಂದೆ ಸುಪ್ರೀಂ ಕೋರ್ಟ್ ತೀರ್ಪಿನ ಆಧಾರದ ಮೇಲೆ 50 ಲಕ್ಷ ರೂ. ಮತ್ತು ಮಾನವ ಹಕ್ಕುಗಳ ಆಯೋಗದ ಶಿಫಾರಸಿನ ಮೇರೆಗೆ 10 ಲಕ್ಷ ರೂ. ಸಂದಾಯವಾಗಿತ್ತು.