ತಿರುವನಂತಪುರ: ರಾಜ್ಯ ವ್ಯಾಪಕ ಕಳವಳಕಾರಿಯಾಗುವಂತೆ ಇಂದು ಒಂದೇ ದಿನ ಒಂದೂವರೆ ಸಾವಿರದ ಸನಿಹ ಕೋವಿಡ್ ಬಾಧಿತರ ಸಂಖ್ಯೆ ತಲಪಿದ್ದು ಇಂದು 1417 ಮಂದಿಗೆ ಹೊಸತಾಗಿ ಸೋಂಕು ಪತ್ತೆಹಚ್ಚಲಾಗಿದೆ. ರಾಜ್ಯದಲ್ಲಿ 1426 ಕೋವಿಡ್ ಪರೀಕ್ಷೆ ನೆಗೆಟಿವ್ ಆಗಿದೆ.
ಮಲಪ್ಪುರಂನಲ್ಲಿ ಭಾನುವಾರ ಸಂಪೂರ್ಣ ಲಾಕ್‍ಡೌನ್:
ಕೋವಿಡ್ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಮಲಪ್ಪುರಂ ಜಿಲ್ಲೆಯಲ್ಲಿ ನಿರ್ಬಂಧಗಳನ್ನು ಬಿಗಿಗೊಳಿಸುವ ನಿರ್ಧಾರ ಪ್ರಕಟಿಸಲಾಗಿದೆ. ಇದರ ಭಾಗವಾಗಿ ಭಾನುವಾರ ಸಂಪೂರ್ಣ ಲಾಕ್‍ಡೌನ್ ಘೋಷಿಸಲಾಯಿತು. ಜೊತೆಗೆ ಮದುವೆ, ಮರಣ, ಆಸ್ಪತ್ರೆ, ಆರೋಗ್ಯ ರಕ್ಷಣೆ ಮತ್ತು ಪೆಟ್ರೋಲ್ ಪಂಪ್‍ಗಳಿಗೆ ಲಾಕ್‍ಡೌನ್‍ಗಳಲ್ಲಿ ರಿಯಾಯಿತಿಗಳಿವೆ. ಆದಾಗ್ಯೂ, ಮದುವೆ ಮತ್ತು ಮರಣೋತ್ತರ ಸಮಾರಂಭಗಳಲ್ಲಿ ಭಾಗವಹಿಸಲು ಗರಿಷ್ಠ 20 ಜನರಿಗೆ ಮಾತ್ರ ಅವಕಾಶವಿದೆ. ಖಾಸಗಿ ಚಿಕಿತ್ಸಾಲಯಗಳು ಮತ್ತು ಆಸ್ಪತ್ರೆಗಳು ಸೇರಿದಂತೆ ರೋಗಿಗಳು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಪೆÇಲೀಸ್ ನಿಬರ್ಂಧ ಮುಂದುವರಿಯಲಿದೆ:
ರಾಜ್ಯದಲ್ಲಿ ಕೋವಿಡ್ ರಕ್ಷಣೆಗೆ ಪೆÇಲೀಸ್ ನಿರ್ಬಂಧಗಳು ಯಥಾ ಸ್ಥಿತಿ ಮುಂದುವರಿಯಲಿದೆ. ಸಂಪರ್ಕ ಪಟ್ಟಿಗಳು, ನಿಯಂತ್ರಣ ವಲಯಗಳು ಮತ್ತು ನಿಯಂತ್ರಣವನ್ನು ಪೆÇಲೀಸರ ಮೇಲ್ವಿಚಾರಣೆಯಲ್ಲಿ ಮಾಡಲಾಗುವುದು ಎಂದು ಉನ್ನತ ಮಟ್ಟದ ಸಭೆಯಲ್ಲಿ ನಿರ್ಧರಿಸಲಾಯಿತು. ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಸಂಪರ್ಕ ಪಟ್ಟಿಯನ್ನು ಈಗ ಸಿದ್ಧಪಡಿಸಲಾಗುವುದು.
ರಾಜ್ಯದಲ್ಲಿ ಇಂದು ಐದು ಕೋವಿಡ್ ಸಾವು:
ಕೇರಳದಲ್ಲಿ ಇಂದು ಇನ್ನೂ ಐದು ಜನರು ಕೋವಿಡ್ ಬಾಧೆಗೊಳಗಾಗಿ ಸಾವನ್ನಪ್ಪಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು. ದೈನಂದಿನ ಕೋವಿಡ್ ಪರಿಶೀಲನಾ ಸಭೆಯ ನಂತರ ನಿಯಮಿತ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಈ ವಿಷಯವನ್ನು ಸ್ಪಷ್ಟಪಡಿಸಿದರು.
ಮೃತರನ್ನು ವರ್ಕಲಾದ ಚೆಲ್ಲಯ್ಯ (68), ತಿರುವನಂತಪುರಂ, ಮಣಿಯನ್ (80), ವಲ್ಲಿಯಾಥುರಾ, ತಿರುವನಂತಪುರಂ, ಪ್ರೇಮಾ, (52), ವೆಲ್ಲನಾಡ್, ತಿರುವನಂತಪುರಂ, ಕುಂಬಾ ಮರಡಿ, (75), ಕೋಲಾಯತ್, ಕಣ್ಣೂರು, ಎರ್ನಾಕುಳಂ ಚೆಲ್ಲಾನತ್ತಿನ ರೀತಾ ಚೆಲ್ಸ (87), ಅವರ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ ಸೂಚಿಸಿದ್ದಾರೆ.
ಇಂದಿನ ಕೋವಿಡ್ ಬಾಧಿತರ ಪೈಕಿ 1242 ಮಂದಿ ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. ಇವುಗಳಲ್ಲಿ 105 ಮಂದಿಗಳ ಮೂಲ ಸ್ಪಷ್ಟವಾಗಿಲ್ಲ. ಏತನ್ಮಧ್ಯೆ, 24 ಗಂಟೆಗಳ ಒಳಗೆ 1,426 ಜನರನ್ನು ಕೋವಿಡ್ ರೋಗದಿಂದ ಗುಣಪಡಿಸಲಾಗಿದೆ ಎಂದು ಸಿಎಂ ಹೇಳಿದರು.
ಇಂದಿನ ಸೋಂಕು ಬಾಧಿತರಾದವರಲ್ಲಿ ಮಲಪ್ಪುರಂ(242), ತಿರುವನಂತಪುರ(297), ಪಾಲಕ್ಕಾಡ್(141), ಕಾಸರಗೋಡು(147), ಎರ್ನಾಕುಳಂ(133), ಕೋಝಿಕ್ಕೋಡ್(158), ಕಣ್ಣೂರು(30), ಕೊಲ್ಲಂ(25), ತೃಶೂರ್(32)ಕೋಟ್ಟಯಂ(24), ವಯನಾಡ್(18), ಆಲಪ್ಪುಳ(146), ಇಡುಕ್ಕಿ(4), ಪತ್ತನಂತಿಟ್ಟು(20) ಎಂಬಂತೆ ಜಿಲ್ಲಾವಾರು ಬಾಧಿತರ ವಿವರಗಳಾಗಿವೆ.