HEALTH TIPS

ಈವರೆಗಿನ ಅತ್ಯುಚ್ಚ ಸೋಂಕಿತರು ಇಂದು- ಕೇರಳದಲ್ಲಿ ಇಂದು 1420 ಜನರಿಗೆ ಕೋವಿಡ್ -19

    

         ತಿರುವನಂತಪುರ: ರಾಜ್ಯದಲ್ಲಿ ಮಳೆ, ದುರಂತಗಳ ಮಧ್ಯೆ ಕೋವಿಡ್ ಸೋಂಕು ಬಾಧೆಯೂ ಏರುಗತಿಯಲ್ಲಿದ್ದ ಇಂದು 1420 ಹೊಸ ಸೋಂಕು ಬಾಧಿತರನ್ನು ಪತ್ತೆಹಚ್ಚಲಾಗಿದೆ ಎಂಬ ಅಂಕಿಅಂಶಗಳನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವ್ಯಕ್ತಪಡಿಸಿದರು.

      ಜೊತೆಗೆ ಇಂದು 1715 ಮಂದಿ ಸೋಂಕಿನಿಂದ ಗುಣಮುಖರಾಗಿರುವರು. ಈವರೆಗಿನ ಅತೀ ಹೆಚ್ಚು ಸೋಂಕಿತರು ಪತ್ತೆಯಾಗಿರುವ ದಿನವಾಗಿ ಶನಿವಾರ ದಾಖಲೆಯಾಯಿತು. ಇಂದಿನ ಸೋಂಕಿತರಲ್ಲಿ ಸಂಪರ್ಕದಿಂದ 1216 ಮಂದಿಗೆ ಬಾಧಿಸಲ್ಪಟ್ಟಿದೆ. 

           ರೋಗವನ್ನು ದೃಢಪಟ್ಟ ಜಿಲ್ಲಾವಾರು ಮಾಹಿತಿ: 

     ಇಂದು ತಿರುವನಂತಪುರಂನಲ್ಲಿ 485 ಸೋಂಕು ಬಾಧಿಸಿದ್ದು  ಈ ಪೈಕಿ 435 ಸಂಪರ್ಕದ ಮೂಲಕ ಹರಡಿದೆ. 33 ಜನರ ಮೂಲ ತಿಳಿದಿಲ್ಲ. ಜಿಲ್ಲೆಯ ಏಳು ಆರೋಗ್ಯ ಕಾರ್ಯಕರ್ತರು ಸೋಂಕಿಗೊಳಗಾಗಿದ್ದಾರೆ. ಇತರ ಜಿಲ್ಲೆಗಳೆಂದರೆ ಕೋಝಿಕ್ಕೋಡ್ 173, ಆಲಪ್ಪುಳ 169, ಮಲಪ್ಪುರಂ 114, ಎರ್ನಾಕುಳಂ 101, ಕಾಸರಗೋಡು 73, ತ್ರಿಶೂರ್ 64, ಕಣ್ಣೂರು 57, ಕೊಲ್ಲಂ-ಇಡಕ್ಕಿ 41, ಪಾಲಕ್ಕಾಡ್ 39, ಪತ್ತನಂತಿಟ್ಟು 38, ಕೊಟ್ಟಾಯಂ 15 ಮತ್ತು ವಯನಾಡ್ 10.

                ಸಂಪರ್ಕದ ಮೂಲಕ 1216 ಜನರಿಗೆ ಕೋವಿಡ್!:

      ಇಂದು ಸಂಪರ್ಕದ ಮೂಲಕ 1216 ಜನರಿಗೆ ಸೋಂಕು ತಗಲಿದೆ. ಇವುಗಳಲ್ಲಿ, 92 ಸೋಂಕಿತರಿಗೆ ಸೋಂಕಿನ  ಮೂಲ ಸ್ಪಷ್ಟವಾಗಿಲ್ಲ. ಇದು ಕಳವಳಕಾರಿಯೆಂದು ಆರೋಗ್ಯ ಇಲಾಖೆ ತಿಳಿಸಿದೆ. ಇಂದು ಸೋಂಕು ಪತ್ತೆಯಾದವರಲ್ಲಿ 60 ಮಂದಿ ವಿದೇಶದಿಂದ ಬಂದವರು. 108 ಮಂದಿ ಇತರ ರಾಜ್ಯಗಳಿಂದ ಬಂದವರು. 30 ಆರೋಗ್ಯ ಕಾರ್ಯಕರ್ತರಲ್ಲಿ ಇಂದು ಸೋಂಕು ದೃಢಪಟ್ಟಿದೆ. 24 ಗಂಟೆಗಳ ಒಳಗೆ 27714 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಸಿಎಂ ಹೇಳಿದರು.

                    ನಾಲ್ಕು ಕೋವಿಡ್ ಸಾವು: 

     ರಾಜ್ಯದಲ್ಲಿ ಇಂದು ನಾಲ್ಕು ಕೋವಿಡ್ ಸಾವುಗಳನ್ನು ರಾಜ್ಯ ಸರ್ಕಾರ ಖಚಿತಪಡಿಸಿದೆ. ಮೃತರಲ್ಲಿ ಉಪ್ಪಳದ  ವಿನೋದ್ ಕುಮಾರ್ (41), ವೆಲ್ಲಿಕುಳಂಗರದ ಸುಲೈಖಾ (63), ಕೋಝಿಕ್ಕೋಡ್ ಕಿಲ್ಲಿಮಣ್ಣೂರ್ ನ ಚೆಲ್ಲಪ್ಪನ್ (60), ಕೊಲ್ಲಂ ಪನವಳ್ಳಿಯ ಪುರುಷೋತ್ತಮನ್ (84) ಎಂದು ಗುರುತಿಸಲಾಗಿದೆ.

                ಕ್ವಾರಂಟೈನ್ ಉಲ್ಲಂಘನೆಗೆ ಕಠಿಣ ಕ್ರಮ:

     ಕ್ವಾರಂಟೈನ್ ನಲ್ಲಿರುವವರ ಮೇಲೆ ನಿಗಾ ಇಡಲು ಸಿದ್ಧಪಡಿಸಿದ ಮೊಬೈಲ್ ಅಪ್ಲಿಕೇಶನ್ ನ್ನು ವಿವಿಧೆಡೆಗಳಲ್ಲಿರುವ ಮನೆ ಕ್ಯಾರೆಂಟೈನ್‍ನಲ್ಲಿರುವವರ ಮೊಬೈಲ್‍ಗಳಲ್ಲಿ ಡೌನ್‍ಲೋಡ್ ಮಾಡಲು ಸೂಚಿಸಲಾಗಿದೆ. ಸಂಪರ್ಕ ತಡೆ ಇರುವವರನ್ನು ನೇರವಾಗಿ, ದೂರವಾಣಿ ಮೂಲಕ ಮತ್ತು ನೆರೆಹೊರೆಯವರ ಸಹಯೋಗದೊಂದಿಗೆ ಮೇಲ್ವಿಚಾರಣೆ ಮಾಡಲು ಪ್ರತಿ ಪ್ರದೇಶಗಳಲ್ಲಿ ಸಂಪರ್ಕತಡೆಯನ್ನು ಪರಿಶೀಲಿಸುವ ತಂಡಗಳನ್ನು ಸ್ಥಾಪಿಸಲಾಗುವುದು. ಮನೆ ಸಂಪರ್ಕತಡೆಯನ್ನು ಉಲ್ಲಂಘಿಸಿದರೆ, ಅಂತಹ ವ್ಯಕ್ತಿಗಳ ಮೇಲೆ ಸಾಂಕ್ರಾಮಿಕ ರೋಗಗಳ ಸುಗ್ರೀವಾಜ್ಞೆ ಕಾಯ್ದೆ 2020, ಕೇರಳ ಸಾರ್ವಜನಿಕ ಆರೋಗ್ಯ ಕಾಯ್ದೆ ಮತ್ತು ಐಪಿಸಿ ನಿಬಂಧನೆಗಳ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕಮಿಷನರ್ ಬಲರಾಂ ಕುಮಾರ್ ಉಪಾಧ್ಯಾಯ ಅವರು ಹೇಳಿದರು.

                   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries