HEALTH TIPS

ಕೊರೋನಾ ವಿರುದ್ಧ ಹೋರಾಡಲು ಭಾರತಕ್ಕೆ 1.5 ಲಕ್ಷ ನರ್ಸ್'ಗಳು, 50,000 ವೈದ್ಯರ ಅಗತ್ಯವಿದೆ: ಡಾ.ದೇವಿ ಶೆಟ್ಟಿ

     ಬೆಂಗಳೂರು: ಕೋವಿಡ್ ಕೇರ್ ಕೇಂದ್ರಗಳಲ್ಲಿ ಮುಂದಿನ ಒಂದು ವರ್ಷ ಕೆಲಸ ಮಾಡಲು ದೇಶಕ್ಕೆ 1.5 ಲಕ್ಷ ನರ್ಸ್'ಗಳು ಹಾಗೂ ಐಸಿಯುವಿನಲ್ಲಿ ಕಾರ್ಯನಿರ್ವಹಿಸಲು 50,000 ಯುವ ಹಾಗೂ ನುರಿತ ವೈದ್ಯರ ಅಗತ್ಯವಿದೆ ಎಂದು ಖ್ಯಾತ ಹೃದ್ರೋಗ ತಜ್ಞ ಡಾ.ದೇವಿ ಶೆಟ್ಟಿ ಸೋಮವಾರ ಹೇಳಿದ್ದಾರೆ. 

       ಕೋವಿಡ್ ಹೆಲ್ತ್‌ಕೇರ್ ಪ್ರೊಫೆಷನಲ್ಸ್ (ಸಿಎಚ್‌ಪಿ) ಯ ವರ್ಚುವಲ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಎಸ್ಸಿ ನರ್ಸಿಂಗ್‌ನ ಅಂತಿಮ ವರ್ಷದ ವಿದ್ಯಾರ್ಥಿಗಳು, ಅಂತಿಮ ವರ್ಷದ ಪಿಜಿ, ಎಂಬಿ ಅಥವಾ ಡಿಎನ್‌ಬಿ ಕೋರ್ಸ್‌ಗಳ ವಿದ್ಯಾರ್ಥಿಗಳು ಮುಂದಿನ ಒಂದು ವರ್ಷ ಕೋವಿಡ್ ಕೇರ್ ಕೇಂದ್ರಗಳಲ್ಲಿ ಕೆಲಸ ಮಾಡಿದರೆ ಪರೀಕ್ಷೆಯನ್ನು ಬರೆಸದೆಯೇ ಉತ್ತೀರ್ಣರಾಗಿದ್ದಾರೆಂದು ಪರಿಗಣಿಸಬೇಕು. ಕೊರೋನಾ ರೋಗಿಗಳನ್ನು ನರ್ಸ್ ಗಳು ಸ್ಪರ್ಶಿಸದೆಯೇ ಪರಿಶೀಲಿಸಲು ಅಂತರೆ, ಬಿಪಿ, ಉಸಿರಾಟ, ನಾಡಿ ಮಿಡಿತ, ಇಸಿಜಿ, ಆಮ್ಲಜನಕ ಪ್ರಮಾಣ ಪರಿಶೀಲಿಸಲು ಟೆಲಿಮೆಟ್ರಿಕ್ ಸಾಧನಗಳ ಅಗತ್ಯವಿದೆ ಎಂದು ಹೇಳಿದ್ದಾರೆ. 

      ಸಾಧನಗಳ ಮೂಲಕ ಐಸಿಯುವಿಗೆ ಬರಲು ಸಾಧ್ಯವಾಗದ ಹಿರಿಯ ವೈದ್ಯರಿಗೆ ವರದಿಗಳನ್ನು ಕಳುಹಿಸಲು ಇದು ಸಹಾಯ ಮಾಡುತ್ತದೆ. ಖಾಸಗಿ ವೈದ್ಯಕೀಯ ಕಾಲೇಜುಗಳು 740 ಸರ್ಕಾರಿ ಜಿಲ್ಲಾ ಆಸ್ಪತ್ರೆಗಳನ್ನು ದತ್ತು ತೆಗೆದುಕೊಂಡು ವೈದ್ಯಕೀಯ ಕಾಲೇಜುಗಳಾಗಿ ಪರಿವರ್ತಿಸಬೇಕು. ಖಾಸಗಿ ಆಸ್ಪತ್ರೆಗಳಿಗೆ ಮಾರುಕಟ್ಟೆ ದರಗಳ ಪ್ರಕಾರ ಶುಲ್ಕ ವಿಧಿಸಲು ಸರ್ಕಾರ ಅವಕಾಶ ನೀಡಬೇಕು, ಇದರಿಂದ ಖಾಸಗಿ ಆಸ್ಪತ್ರೆಗಳು ಅಗತ್ಯವಿರುವ ರೋಗಿಗಳಿಗೆ ಸಬ್ಸಿಡಿ ದರ ಚಿಕಿತ್ಸೆ ನೀಡಲು ಅವಕಾಶ ಮಾಡಿಕೊಡುತ್ತದೆ. 

   ವೈದ್ಯರು, ನರ್ಸ್'ಗಳು ಮತ್ತು ಅರೆಕಾಲಿಕ ವೈದ್ಯರು ಸಿಹೆಚ್'ಪಿ ವೇದಿಕೆಯಲ್ಲಿ ನೋಂದಾಯಿಸಿಕೊಳ್ಳಬಹುದಾಗಿದ್ದು, ಇದರಿಂದ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಲು ಬಯಸುವ ಆಸ್ಪತ್ರೆಗಳು ಈ ಮೂಲಕ ಆರೋಗ್ಯ ಸಿಬ್ಬಂದಿಗಳನ್ನು ಸುಲಭವಾಗಿ ಹುಡುಕಲು ಸಾಧ್ಯವಾಗುತ್ತದೆ. ಸಿಎಚ್‌ಪಿಯಲ್ಲಿ ಈ ವರೆಗೂ 1,4000 ಮಂದಿ ನೋಂದಾಯಿಸಿಕೊಂಡಿದ್ದು, ಇದರಲ್ಲಿರುವ 51 ಆರೋಗ್ಯ ಕಾರ್ಯಕರ್ತರು ಮತ್ತು ನಾಲ್ಕು ಆಸ್ಪತ್ರೆಗಳು ಕರ್ನಾಟಕ ರಾಜ್ಯಕ್ಕೆ ಸೇರಿದ್ದಾಗಿದೆ. 

     ಈ ವೇದಿಕೆಯನ್ನು ನೌಕ್ರಿ ಡಾಟ್ ಕಾಮ್ ಸಹಯೋಗದೊಂದಿಗೆ ಇಕೋ ಇಂಡಿಯಾ ನಿರ್ಮಿಸಿದ್ದು, ಈ ವೇದಿಕೆ ವೈದ್ಯಕೀಯ ಕೌಶಲ್ಯಗಳನ್ನು ವಿವರಿಸುತ್ತದೆ ಮತ್ತು ಅವುಗಳನ್ನು ಆಸ್ಪತ್ರೆಗಳೊಂದಿಗೆ ಹೊಂದಿಸುತ್ತದೆ ಎಂದು ತಿಳಿಸಿದ್ದಾರೆ. 

    ಈಗಾಗಲೇ ನೋಂದಾವಣಿ ಮಾಡಿಕೊಂಡಿರುವ 60 ಆಸ್ಪತ್ರೆಗಳು 10,000 ಆರೋಗ್ಯ ಸಿಬ್ಬಂದಿಗಳನ್ನು ನಿಯೋಜನೆ ಮಾಡಿಕೊಂಡಿದ್ದು, 1 ಲಕ್ಷ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿವೆ ಎಂದು ಡಾ.ಲಾಲ್ ಪಾತ್ ಲ್ಯಾಬ್ಸ್ ಮುಖ್ಯಸ್ಥ ಡಾ.ಅರವಿಂದ್ ಲಾಲ್ ಅವರು ಗೇಳಿದ್ದಾರೆ. 

     ಆರೋಗ್ಯ ಸಿಬ್ಬಂದಿಗಳ ಕೊರತೆ ದೇಶದಲ್ಲಿ ಎದ್ದು ಕಾಣುತ್ತಿದ್ದು, ಭಾರತಕ್ಕೆ ಪ್ರಸ್ತುತ 10 ಲಕ್ಷ ವೈದ್ಯರು, 20 ಲಕ್ಷ ನರ್ಸ್ ಗಳು ಹಾಗೂ 30 ಲಕ್ಷ ಪ್ಯಾರಾಮೆಡಿಕ್ಸ್'ಗಳ ಅಗತ್ಯವಿದೆ ಎಂದು ಹೇಳಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries