ಮೂನಾರ್(ಇಡುಕ್ಕಿ): ಮೂನಾರ್ ರಾಜಮಲ ಪೆಟ್ಟುಮುಡಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ 15 ಜನರ ಶವಗಳನ್ನು ಪತ್ತೆಹಚ್ಚಲಾಗಿದೆ. ಮಣ್ಣಿನಲ್ಲಿ 4 ಪದರುಗಳಲ್ಲಿ ಬೃಹತ್ ಪ್ರಮಾಣದ ಮಣ್ಣು ಕುಸಿದಿದ್ದು ಒಟ್ಟು 78 ಜನರಿದ್ದರು. ಹನ್ನೆರಡು ಜನರು ಗಾಯಗಳೊಂದಿಗೆ ಪಾರಾಗಿದ್ದಾರೆ. 15 ಜನರ ಶವಗಳು ಪತ್ತೆಯಾಗಿವೆ. 56 ಮಂದಿ ನಾಪತ್ತೆ ಎಮದು ತಿಳಿದುಬಂದಿದೆ.
ಮೃತರನ್ನು ಗಾಂಧಿರಾಜ್ (48), ಶಿವಕಾಮಿ (38), ವಿಶಾಲ್ (12), ರಾಮಲಕ್ಷ್ಮಿ (40), ಮುರುಗನ್ (46), ಮಾಯಿಲ್ ಸ್ವಾಮಿ (48), ಕಣ್ಣನ್ (40), ಅಣ್ಣಾದುರೈ (44) ಮತ್ತು ರಾಜೇಶ್ವರಿ (43) ಎಂದು ಗುರುತಿಸಲಾಗಿದೆ. ಬದುಕುಳಿದ 12 ಜನರಲ್ಲಿ ನಾಲ್ವರನ್ನು ಮುನ್ನಾರ್ ಟಾಟಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆಯೊಬ್ಬರು ಐಸಿಯುವಿನ ತೀವ್ರ ನಿಗಾ ಘಟಕದಲ್ಲಿದ್ದಾರೆ.
ಘಟನೆಗೆ ಸಂಬಂಧಿಸಿ ನಾಪತ್ತೆಯಾಗಿರುವ 56 ಮಂದಿಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಪೆಟ್ಟಿಮುಡಿಯಿಂದ 2 ಕಿ.ಮೀ ದೂರದಲ್ಲಿರುವ ಬೆಟ್ಟದ ಮೇಲೆ ಭೂಕುಸಿತ ಸಂಭವಿಸಿ ಈ ದುರಂತಕ್ಕೆ ಕಾರಣವಾಗಿದೆ. 3 ಕಿ.ಮೀ ವ್ಯಾಪ್ತಿಯು ಬಂಡೆಗಳಿಂದ ಕೂಡಿದ ಪ್ರದೇಶ ಮಣ್ಣುಗಳ ಹೊರತು ಬೇರೇನೂ ಕಾಣದ ಸ್ಥಿತಿ ನಿರ್ಮಾಣವಾಗಿದೆ. ಎನ್‍ಡಿಆರ್‍ಎಫ್ ತಂಡ ಎಲಪ್ಪರದಿಂದ ರಾಜಮಲೆಗೆ ತೆರಳಿದ್ದು ಕಾರ್ಯಾಚರಣೆಗಿಳಿದಿದೆ.