ಕಾಸರಗೋಡು: ಜಿಲ್ಲೆಯಲ್ಲಿ ಶನಿವಾರ ಈ ವರೆಗಿನ ಸೋಂಕು ಬಾಧಿತರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವುಂಟಾಗಿದೆ. 153 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 151 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. ಇವರಲ್ಲಿ 19 ಮಂದಿಯ ಸಂಪರ್ಕ ಮೂಲ ಪತ್ತೆಯಾಗಿಲ್ಲ. ಇದೇ ವೇಳೆ ತ್ರಿಕರಿಪುರ ಗ್ರಾಮ ಪಂಚಾಯತ್ ನಿವಾಸಿ ಅಬ್ದುಲ್ ರಹಮಾನ್ (72) ಎಂಬವರು ಮೃತಪಟ್ಟಿರುವುದು ಕೋವಿಡ್ ಸೋಂಕಿನಿಂದ ಎಂಬುದು ತಪಾಸಣೆಯಲ್ಲಿ ಖಚಿತಗೊಂಡಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಮಂಗಲ್ಪಾಡಿ ಗ್ರಾಮಪಂಚಾಯತ್ ನ 18, ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್ ನ 10, ಕಾಸರಗೋಡು ನಗರಸಭೆಯ 7, ಮಂಜೇಶ್ವರ ಗ್ರಾಮಪಂಚಾಯತ್ ನ 10, ವರ್ಕಾಡಿ ಗ್ರಾಮ ಪಂಚಾಯತ್ ನ 6, ಮೀಂಜ ಗ್ರಾಮ ಪಂಚಾಯತ್ ನ 4, ಕುಂಬಳೆ ಗ್ರಾಮಪಂಚಾಯತ್ ನ 18, ಚೆಂಗಳ ಗ್ರಾಮ ಪಂಚಾಯತ್ ನ 12, ಮಧೂರು ಗ್ರಾಮ ಪಂಚಾಯತ್ ನ 23, ಚೆಮ್ನಾಡ್ ಗ್ರಾಮ ಪಂಚಾಯತ್ ನ 8, ಬದಿಯಡ್ಕ ಗ್ರಾಮ ಪಂಚಾಯತ್ ನ 4, ಎಣ್ಮಕಜೆ ಗ್ರಾಮ ಪಂಚಾಯತ್ ನ 1, ಪೈವಳಿಕೆ ಗ್ರಾಮಪಂಚಾಯತ್ ನ 2, ಪುತ್ತಿಗೆ ಗ್ರಾಮ ಪಂಚಾಯತ್ ನ 4, ಬೇಡಡ್ಕ ಗ್ರಾಮ ಪಂಚಾಯತ್ ನ 2, ಉದುಮಾ ಗ್ರಾಮ ಪಂಚಾಯತ್ ನ 10, ಕುತ್ತಿಕೋಲು ಗ್ರಾಮ ಪಂಚಾಯತ್ ನ 1, ಕಾಞಂಗಾಡ್ ನಗರಸಭೆಯ 1, ಅಜಾನೂರು ಗ್ರಾಮ ಪಂಚಾಯತ್ ನ 1, ಪುಲ್ಲೂರು-ಪೆರಿಯ ಗ್ರಾಮ ಪಂಚಾಯತ್ ನ 1, ತ್ರಿಕರಿಪುರ ಗ್ರಾಮ ಪಂಚಾಯತ್ ನ 3, ಚೆರುವತ್ತೂರು ಗ್ರಾಮ ಪಂಚಾಯತ್ ನ 1, ನೀಲೇಶ್ವರ ನಗರಸಭೆಯ 3, ಪಡನ್ನ ಗ್ರಾಮ ಪಂಚಾಯತ್ ನ 1, ಕಯ್ಯೂರು-ಚೀಮೇನಿ ಗ್ರಾಮ ಪಂಚಾಯತ್ ನ 2 ಮಂದಿಗೆ ಸೋಂಕು ತಗುಲಿರುವುದು ಖಚಿತವಾಗಿದೆ ಎಂದು ಅವರು ತಿಳಿಸಿದರು.
28 ಮಂದಿಗೆ ಕೋವಿಡ್ ನೆಗೆಟಿವ್:
ಜಿಲ್ಲೆಯಲ್ಲಿ ಶನಿವಾರ 28 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ. ಪರವನಡ್ಕ ಸಿ.ಎಫ್.ಎಲ್.ಟಿ.ಸಿ.ಯಲ್ಲಿ ದಾಖಲಾಗಿದ್ದ 3, ಪಡನ್ನಕ್ಕಾಡ್ ಕೃಷಿ ಕಾಲೇಜಿನ ಸಿ.ಎಫ್.ಎಲ್.ಟಿ.ಸಿ.ಯಲ್ಲಿ ದಾಖಲಾಗಿದ್ದ 4, ಸಿ.ಯು.ಕೆ.ಹಳೆಯ ಕ್ಯಾಂಪಸ್ ಸಿ.ಎಫ್.ಎಲ್.ಟಿ.ಸಿ.ಯಲ್ಲಿ ದಾಖಲಾಗಿದ್ದ 11, ವಿದ್ಯಾನಗರ ಸಿ.ಎಫ್.ಎಲ್.ಟಿ.ಸಿ.ಯಲ್ಲಿ ದಾಖಲಾಗಿದ್ದ 10 ಮಂದಿ ಕೋವಿಡ್ ನಿಂದ ಗುಣಮುಖರಾದರು.
3613 ಮಂದಿ ನಿಗಾದಲ್ಲಿ:
ಜಿಲ್ಲೆಯಲ್ಲಿ 3613 ಮಂದಿ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಈ ಪೈಕಿ ಮನೆಗಳಲ್ಲಿ 2662 ಮಂದಿ, ಸಾಂಸ್ಥಿಕವಾಗಿ 951 ಮಂದಿ ನಿಗಾದಲ್ಲಿರುವರು. ನೂತನವಾಗಿ 261 ಮಂದಿ ನಿಗಾ ಪ್ರವೇಶ ಮಾಡಿದ್ದಾರೆ. 169 ಮಂದಿ ಶನಿವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ.
ಈ ವರೆಗೆ 29655 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಲಾಗಿದೆ. ನೂತನವಾಗಿ 1374 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 877 ಮಂದಿಯ ಫಲಿತಾಂಶ ಲಭಿಸಿಲ್ಲ.
ಕೋವಿಡ್ ಸೋಂಕು ಹೆಚ್ಚಳ : ಕಾಸರಗೋಡು ಜಿಲ್ಲೆಯಲ್ಲಿ 17 ನೂತನ ಹಾಟ್ ಸ್ಪಾಟ್ ಗಳು:
ಕೋವಿಡ್ 19 ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 17 ನೂತನ ಹಾಟ್ ಸ್ಪಾಟ್ (ಕಂಟೈ ನ್ಮೆಂಟ್ ಝೋನ್ ಗಳು)ಗಳಾಗಿವೆ.
ಪುಲ್ಲೂರು-ಪೆರಿಯ ಗ್ರಾಮಪಂಚಾಯತ್ ನ 1,7,8,9,11,13,14,17 ವಾರ್ಡ್ ಗಳು, ಪುತ್ತಿಗೆ ಗ್ರಾಮಪಂಚಾಯತ್ ನ 6,10ನೇ ವಾರ್ಡ್ ಗಳು ತ್ರಿಕರಿಪುರ ಗ್ರಾಮಪಂಚಾಯತ್ ನ 1,3,4,5,7,11,13,14,15,16 ನೇ ವಾರ್ಡ್ ಗಳು, ಉದುಮಾ ಗ್ರಾಮಪಂಚಾಯತ್ ನ 2,6,11,16,18 ನೇ ವಾರ್ಡ್ ಗಳು, ವರ್ಕಾಡಿ ಗ್ರಾಮ ಪಂಚಾಯತ್ ನ 1,2,3,5,7,8,9,10 ನೇ ವಾರ್ಡ್ ಗಳು, ವೆಸ್ಟ್ ಏಳೇರಿ ಪಂಚಾಯತ್ 14ನೇ ವಾರ್ಡ್ ನೂತನ ಹಾಟ್ ಸ್ಪಾಟ್ ಗಳಾಗಿವೆ.