ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 103 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ. ಇದೇ ವೇಳೆ 56 ಮಂದಿ ಗುಣಮುಖರಾಗಿದ್ದಾರೆ. 97 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ರೋಗ ಬಾಧಿತರಲ್ಲಿ ಒಬ್ಬರು ಇತರ ರಾಜ್ಯದಿಂದ ಹಾಗು ಐವರು ವಿದೇಶದಿಂದ ಬಂದವರು.
ರೋಗ ಬಾಧಿತರು : ನೀಲೇಶ್ವರ-13, ಚೆಮ್ನಾಡ್-12, ಕಾಸರಗೋಡು-12, ಚೆರ್ವತ್ತೂರು-9, ವಲಿಯಪರಂಬ-8, ಕಾಂಞಂಗಾಡ್-7, ಮಧೂರು-6, ಚೆಂಗಳ-6, ಅಜಾನೂರು-5, ಮಂಗಲ್ಪಾಡಿ-3, ಪಿಲಿಕೋಡ್-3, ಮಂಜೇಶ್ವರ-2, ಪಳ್ಳಿಕೆರೆ-2, ಕುಂಬಳೆ-2, ಪುಲ್ಲೂರು-2, ಮಡಿಕೈ-2, ತೃಕ್ಕರಿಪುರ-1, ಮುಳಿಯಾರು-1, ವರ್ಕಾಡಿ-1, ಮೊಗ್ರಾಲ್‍ಪುತ್ತೂರು-1, ಕೋಡೋಂ ಬೋಳೂರು-1, ಕಯ್ಯೂರು-1, ಕಿನಾನೂರು-1, ಈಸ್ಟ್ ಎಳೇರಿ-1, ಕುತ್ತಿಕ್ಕೋಲ್-1 ಎಂಬಂತೆ ರೋಗ ಬಾಧಿಸಿದೆ.
ಕೇರಳದಲ್ಲಿ 1530 ಮಂದಿಗೆ ಸೋಂಕು :
ರಾಜ್ಯದಲ್ಲಿ ಇಂದು ರಂದು 1530 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ. ರೋಗ ಬಾಧಿತರಲ್ಲಿ 54 ಮಂದಿ ವಿದೇಶದಿಂದ ಹಾಗು 80 ಮಂದಿ ಇತರ ರಾಜ್ಯಗಳಿಂದ ಬಂದವರು. 1367 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿüಸಿದೆ. 29 ಮಂದಿ ಆರೋಗ್ಯ ಕಾರ್ಯಕರ್ತರಿಗೆ ರೋಗ ಬಾಧಿಸಿದೆ. 1693 ಮಂದಿ ಗುಣಮುಖರಾಗಿದ್ದಾರೆ.
ರೋಗ ಬಾಧಿತರು-ಜಿಲ್ಲಾವಾರು ವಿವರ: ತಿರುವನಂತಪುರ-221, ಎರ್ನಾಕುಳಂ-210, ಮಲಪ್ಪುರಂ-177, ಆಲಪ್ಪುಳ-137, ಕೊಲ್ಲಂ-131, ಕಲ್ಲಿಕೋಟೆ-117, ಪತ್ತನಂತಿಟ್ಟ-107, ಕಾಸರಗೋಡು-103, ಕೋಟ್ಟಯಂ-86, ತೃಶ್ಶೂರು-85, ಕಣ್ಣೂರು-74, ಪಾಲ್ಘಾಟ್-42, ವಯನಾಡು-25, ಇಡುಕ್ಕಿ-15 ಎಂಬಂತೆ ಸೋಂಕು ಬಾಧಿಸಿದೆ.
7 ಮಂದಿ ಸಾವಿಗೆ ಕೊರೊನಾ ವೈರಸ್ ಕಾರಣ ಎಂಬುದಾಗಿ ದೃಢೀಕರಿಸಲಾಗಿದೆ. ಇದರೊಂದಿಗೆ ಕೇರಳದಲ್ಲಿ ಒಟ್ಟು ಸಾವಿನ ಸಂಖ್ಯೆ 294 ಕ್ಕೆ ಏರಿದೆ.
ಗುಣಮುಖ : ತಿರುವನಂತಪುರ-374, ಕೊಲ್ಲಂ-108, ಪತ್ತನಂತಿಟ್ಟ-72, ಆಲಪ್ಪುಳ-75, ಕೋಟ್ಟಯಂ-90, ಇಡುಕ್ಕಿ-23, ಎರ್ನಾಕುಳಂ-90, ತೃಶ್ಶೂರು-125, ಪಾಲ್ಘಾಟ್-114, ಮಲಪ್ಪುರಂ-253, ಕಲ್ಲಿಕೋಟೆ-197, ವಯನಾಡು-28, ಕಣ್ಣೂರು-88, ಕಾಸರಗೋಡು-56 ಎಂಬಂತೆ ಗುಣಮುಖರಾಗಿದ್ದಾರೆ. ಪ್ರಸ್ತುತ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 23,488 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವರೆಗೆ 51,542 ಮಂದಿ ಗುಣಮುಖರಾಗಿದ್ದಾರೆ.
ಜಿಲ್ಲೆಯ ಇತರ ವಿವರ ಮಾಹಿತಿಗಳು:
56 ಮಂದಿಗೆ ಕೋವಿಡ್ ನೆಗೆಟಿವ್:
ಜಿಲ್ಲೆಯಲ್ಲಿ ಸೋಮವಾರ 56 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ನೆಗೆಟಿವ್ ಆದವರ ಪಂಚಾಯತಿ ಮಟ್ಟದ ವಿವರ:
ಕಾಸರಗೋಡು ನಗರಸಭೆ 8, ಮಧೂರು ಪಂಚಾಯತ್ 1, ಚೆಮ್ನಾಡ್ ಪಂಚಾಯತ್ 20, ಕಾಞಂಗಾಡ್ ನಗರಸಭೆ 11, ಅಜಾನೂರು, ಕೋಡೋಂ-ಬೇಳೂರು, ಕಿನಾನೂರು-ಕರಿಂದಳಂ ಪಂಚಾಯತ್ ಗಳಲ್ಲಿ ತಲಾ ಒಂದು, ನೀಲೇಶ್ವರ ನಗರಸಭೆ 8 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ.
6324 ಮಂದಿ ನಿಗಾದಲ್ಲಿ:
ಜಿಲ್ಲೆಯಲ್ಲಿ 6324 ಮಂದಿ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ.
ಮನೆಗಳಲ್ಲಿ 5223 ಮಂದಿ, ಸಾಂಸ್ಥಿಕವಾಗಿ 1101 ಮಂದಿ ನಿಗಾದಲ್ಲಿರುವರು. ನೂತನವಾಗಿ 447 ಮಂದಿ ನಿಗಾ ಪ್ರವೇಶ ಮಾಡಿದ್ದಾರೆ. 341 ಮಂದಿ ಸೋಮವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. 307 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ.
ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 5142 ಮಂದಿಗೆ ಕೋವಿಡ್ ಪಾಸಿಟಿವ್
ಕಾಸರಗೋಡು, ಆ.31: ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 5142 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಇವರಲ್ಲಿ 4188 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. 555 ಮಂದಿ ವಿದೇಶಗಳಿಂದ, 399 ಮಂದಿ ಇತರ ರಾಜ್ಯಗಳಿಂದ ಆಗಮಿಸಿದವರು.
ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 3626 ಮಂದಿ ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ಕೋವಿಡ್ ಬಾಧೆಯಿಂದ ಈ ವರೆಗೆ ಮೃತಪಟ್ಟವರ ಸಂಖ್ಯೆ 38 ಆಗಿದೆ.