ತಿರುವನಂತಪುರ: ಕೋವಿಡ್ ವ್ಯಾಪಕತೆ ಗರಿಷ್ಠ ಮಟ್ಟದಲ್ಲೇ ಮುಂದುವರಿದಿದ್ದು ಭಾನುವಾರ ರಾಜ್ಯಾದ್ಯಂತ ಒಟ್ಟು 1530 ಸೋಂಕಿತರನ್ನು ಗುರುತಿಸಲಾಗಿದೆ. ಸಂಪರ್ಕದ ಮೂಲಕ ರೋಗ ಹರಡುವುದು ಕಳವಳಕಾರಿಯಾಗಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಫೇಸ್‍ಬುಕ್ ಪೆÇೀಸ್ಟ್‍ನಲ್ಲಿ ಕೋವಿಡ್ ಬಾಧಿತರ ವಿವರಗಳನ್ನು ಹಂಚಿದ್ದು 1099 ಬಾಧಿತರು ಇಂದು ಗುಣಮುಖರಾಗಿರುವರು. ಇಂದು ರೋಗನಿರ್ಣಯ ಮಾಡಿದವರಲ್ಲಿ 37 ವಿದೇಶಗಳಿಂದ ಮತ್ತು 89 ಇತರ ರಾಜ್ಯಗಳಿಂದ ಬಂದವರು. ಸಂಪರ್ಕದ ಮೂಲಕ 1351 ಜನರಿಗೆ ಸೋಂಕು ತಗಲಿತು. ಅವುಗಳಲ್ಲಿ 100 ಮಂದಿಗಳ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ.
ತಿರುವನಂತಪುರ ಜಿಲ್ಲೆಯ 519, ಮಲಪ್ಪುರಂ 221, ಎರ್ನಾಕುಳಂ 123, ಕೋಝಿಕ್ಕೋಡ್ 118, ಕೊಟ್ಟಾಯಂ 100, ಆಲಪ್ಪುಳ 86, ಕೊಲ್ಲಂ 81, ಕಣ್ಣೂರು 52, ವಯನಾಡ್ 52, ಕಾಸರಗೋಡು 49, ಪತ್ತನಂತಿಟ್ಟು 48, ಇಡುಕ್ಕಿ ಮತ್ತು ತ್ರಿಶೂರ್ ಜಿಲ್ಲೆಗಳಿಂದ ತಲಾ 30 ಮತ್ತು ಪಾಲಕ್ಕಾಡ್ 29 ಪ್ರಕರಣಗಳು ವರದಿಯಾಗಿವೆ.
ಸಂಪರ್ಕದಿಂದ ಸೋಂಕು:
ಸಂಪರ್ಕದ ಮೂಲಕ 1351 ಜನರಿಗೆ ಸೋಂಕು ತಗಲಿದೆ. ಅವುಗಳಲ್ಲಿ 100 ಮಂದಿಗಳ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ತಿರುವನಂತಪುರ ಜಿಲ್ಲೆಯಲ್ಲಿ 487 , ಮಲಪ್ಪುರಂ 200, ಎರ್ನಾಕುಳಂ 110 , ಕೋಝಿಕ್ಕೋಡ್ 106, ಕೊಟ್ಟಾಯಂ 91, ಆಲಪ್ಪುಳ 73 , ಕೊಲ್ಲಂ 70, ಕಣ್ಣೂರು 38, ಕಾಸರಗೋಡು 37, ವಯನಾಡ್ 36, ತ್ರಿಶೂರ್ 27, ಪಾಲಕ್ಕಾಡ್ ಜಿಲ್ಲೆಯಲ್ಲಿ 24 ಮತ್ತು ಇಡುಕ್ಕಿ ಜಿಲ್ಲೆಯಲ್ಲಿ 19 ಜನರು ಇಂದು ಸಂಪರ್ಕದಿಂದ ಸೋಂಕಿಗೊಳಗಾಗಿದ್ದಾರೆ.
ಚೇತರಿಸಿಕೊಂಡವರು:
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 1099 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ಕಾಸರಗೋಡು ಜಿಲ್ಲೆಯಲ್ಲಿ 203, ತಿರುವನಂತಪುರ ಜಿಲ್ಲೆಯಲ್ಲಿ 190, ಎರ್ನಾಕುಳಂ ಜಿಲ್ಲೆಯಲ್ಲಿ 120, ಪಾಲಕ್ಕಾಡ್ ಜಿಲ್ಲೆಯಲ್ಲಿ 107, ಮಲಪ್ಪುರಂ ಜಿಲ್ಲೆಯಲ್ಲಿ 82, ತ್ರಿಶೂರ್ ಜಿಲ್ಲೆಯಲ್ಲಿ 64, ಕೊಟ್ಟಾಯಂ ಮತ್ತು ವಯನಾಡ್ ಜಿಲ್ಲೆಗಳಲ್ಲಿ ತಲಾ 61, ಕೊಲ್ಲಂ ಜಿಲ್ಲೆಯಲ್ಲಿ 55, ಕೊಝಿಕ್ಕೋಡ್ ಜಿಲ್ಲೆ ಮತ್ತು ಇಡುಕಿ ಜಿಲ್ಲೆಯಲ್ಲಿ 43, ಮತ್ತು 39 ಜನರು, ಆಲಪ್ಪುಳ ಜಿಲ್ಲೆಯ 30 , ಪತ್ತನಂತಿಟ್ಟು ಜಿಲ್ಲೆಯ 24 ಜನರು ಮತ್ತು ಕಣ್ಣೂರು ಜಿಲ್ಲೆಯ 20 ಜನರ ಪರೀಕ್ಷಾ ಫಲಿತಾಂಶಗಳು ಇಂದು ನಕಾರಾತ್ಮಕವಾಗಿವೆ. ಇದರೊಂದಿಗೆ, 15,310 ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 28,878 ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.