ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 49 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಳಿಸಲಾಗಿದೆ. ಇದೇ ಸಂದರ್ಭದಲ್ಲಿ 51 ಮಂದಿ ಗುಣಮುಖರಾಗಿದ್ದಾರೆ. 35 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. ಇತರ ರಾಜ್ಯಗಳಿಂದ ಬಂದ ಐವರು ಹಾಗು ವಿದೇಶದಿಂದ ಬಂದ 9 ಮಂದಿಗೆ ರೋಗ ಬಾಧಿಸಿದೆ.
ಅಜಾನೂರು-2, ಚೆಮ್ನಾಡ್-5, ಮಧೂರು-4, ಕಾಸರಗೋಡು-5, ನೀಲೇಶ್ವರ-1, ಬೇಡಡ್ಕ-1, ಉದುಮ-14, ಚೆರ್ವತ್ತೂರು-2, ಮಡಿಕೈ-1, ಮೊಗ್ರಾಲ್‍ಪುತ್ತೂರು-1, ಮಂಜೇಶ್ವರ-5, ಮಂಗಲ್ಪಾಡಿ-2, ಪಳ್ಳಿಕೆರೆ-2, ಪಡನ್ನ-1, ಕುಂಬ್ಡಾಜೆ-1, ಕಯ್ಯೂರು-ಚೀಮೇನಿ-1, ಕಾಂಞಂಗಾಡ್-1 ಎಂಬಂತೆ ರೋಗ ಬಾಧಿಸಿದೆ.
ಮಹಿಳೆ ಸಾವು : ವರ್ಕಾಡಿ ಬಳಿಯ ಕೋಳ್ಯೂರು ಕೊರ್ಣಕಜೆ ನಿವಾಸಿ 75 ರ ವೃದ್ಧೆ ಕೋವಿಡ್‍ನಿಂದ ಸಾವಿಗೀಡಾದರು.
ಕೇರಳದಲ್ಲಿ 1569 ಮಂದಿಗೆ ಸೋಂಕು : ಕೇರಳ ರಾಜ್ಯದಲ್ಲಿ ಶುಕ್ರವಾರ 1569 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. 1304 ಮಂದಿ ಗುಣಮುಖರಾಗಿದ್ದಾರೆ. 1354 ಮಂದಿಗೆ ಸಂಪರ್ಕದ ಮೂಲಕ ರೋಗ ಬಾ„ಸಿದೆ. 56 ಮಂದಿ ವಿದೇಶದಿಂದ ಹಾಗು 132 ಮಂದಿ ಇತರ ರಾಜ್ಯಗಳಿಂದ ಬಂದ 132 ಮಂದಿಗೆ ರೋಗ ಬಾಧಿಸಿದೆ. 27 ಮಂದಿ ಆರೋಗ್ಯ ಕಾರ್ಯಕರ್ತರಿಗೆ ರೋಗ ಬಾಧಿಸಿದೆ.
ರೋಗ ಬಾಧಿತರು : ತಿರುವನಂತಪುರ-310, ಮಲಪ್ಪುರಂ-198, ಪಾಲ್ಘಾಟ್-180, ಎರ್ನಾಕುಳಂ-114, ಆಲಪ್ಪುಳ-113, ಕೋಟ್ಟಯಂ-101, ಕಲ್ಲಿಕೋಟೆ-99, ಕಣ್ಣೂರು-95, ತೃಶ್ಶೂರು-80, ಕೊಲ್ಲಂ-75, ಇಡುಕ್ಕಿ-58, ವಯನಾಡು-57, ಕಾಸರಗೋಡು-49, ಪತ್ತನಂತಿಟ್ಟ-40 ಎಂಬಂತೆ ರೋಗ ಬಾಧಿಸಿದೆ.
ಗುಣಮುಖ : ಮಲಪ್ಪುರಂ-424, ತಿರುವನಂತಪುರ-199, ಕಲ್ಲಿಕೋಟೆ-111, ಪಾಲ್ಘಾಟ್-91, ಎರ್ನಾಕುಳಂ-87, ಕಣ್ಣೂರು-75, ಆಲಪ್ಪುಳ-66, ತೃಶ್ಶೂರು-53, ಕಾಸರಗೋಡು-51, ಕೋಟ್ಟಯಂ-48, ವಯನಾಡು-33, ಪತ್ತನಂತಿಟ್ಟ-32, ಕೊಲ್ಲಂ-26, ಇಡುಕ್ಕಿ-8 ಎಂಬಂತೆ ಗುಣಮುಖರಾಗಿದ್ದಾರೆ. ವಿವಿಧ ಆಸ್ಪತ್ರೆಗಳಲ್ಲಿ14,094 ಮಂದಿ ಚಿಕಿತ್ಸೆ ಪಡೆಯುತಿದ್ದಾರೆ. ಈ ವರೆಗೆ 26,996 ಮಂದಿ ಗುಣಮುಖರಾಗಿದ್ದಾರೆ.
ಶುಕ್ರವಾರ ರಾಜ್ಯದಲ್ಲಿ 10 ಮಂದಿ ಸಾವಿಗೀಡಾದರು. ರಾಜ್ಯದಲ್ಲಿ ಈ ವರೆಗೆ ಕೊರೊನಾ ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆ 139 ಕ್ಕೇರಿತು.
ಮಾಸ್ಕ್ ಧರಿಸದ 402 ಮಂದಿ ವಿರುದ್ಧ ಕೇಸು : ಮಾಸ್ಕ್ ಧರಿಸದೇ ಇದ್ದದ್ದಕ್ಕೆ ಕಾಸರಗೋಡು ಜಿಲ್ಲೆಯಲ್ಲಿ 402 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಮೂಲಕ ಈ ಪ್ರಕರಣಗಳಿಗೆ ಸಂಬಂ„ಸಿ ಕಾಸರಗೋಡು ಜಿಲ್ಲೆಯಲ್ಲಿ ದಾಖಲಾದ ಕೇಸುಗಳ ಸಂಖ್ಯೆ 21065 ಆಗಿದೆ.
ಲಾಕ್‍ಡೌನ್ ಉಲ್ಲಂಘನೆ : 23 ಕೇಸು : ಲಾಕ್‍ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 23 ಕೇಸುಗಳನ್ನು ದಾಖಲಿಸಲಾಗಿದೆ. 33 ಮಂದಿಯನ್ನು ಬಂಧಿಸಲಾಗಿದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 2 ಕೇಸುಗಳು, ಕುಂಬಳೆ 2, ಕಾಸರಗೋಡು 1, ವಿದ್ಯಾನಗರ 3, ಆದೂರು 1, ಬೇಡಗಂ 3, ಬೇಕಲ 1, ನೀಲೇಶ್ವರ 2, ಚಂದೇರ 2, ಚಿತ್ತಾರಿಕಲ್ 2, ರಾಜಪುರಂ 2 ಕೇಸುಗಳು ದಾಖಲಾಗಿವೆ.
ಕ್ವಾರೆಂಟೈನ್ ಉಲ್ಲಂಘನೆ : 5 ಕೇಸು : ಕ್ವಾರೆಂಟೈನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 5 ಕೇಸುಗಳನ್ನು ದಾಖಲಿಸಲಾಗಿದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 2 ಕೇಸುಗಳು, ಕುಂಬಳೆ 1, ಆದೂರು 1, ಮೇಲ್ಪರಂಬ 1 ಕೇಸುಗಳು ದಾಖಲಾಗಿವೆ.