ಬದಿಯಡ್ಕ: ಕೇರಳದ ದಲಿತ ವರ್ಗಗಳ ವಿರುದ್ದ ನಡೆಯುತ್ತಿದ್ದ ಅಮಾನುಷ ಕೃತ್ಯಗಳಿಗೆ ಕ್ರಾಂತಿಕಾರಿ ಹೋರಾಟದ ಮೂಲಕ ಸ್ಪಂದಿಸಿ ದಲಿತರು ಶತಮಾನಗಳಿಂದ ಕಳೆದು ಕೊಂಡಿದ್ದ ಮಾನವ ಹಕ್ಕುಗಳು ಮತ್ತು ನಾಗರಿಕ ಹಕ್ಕುಗಳಿಗಾಗಿ ಪಣತೊಟ್ಟು ಹೋರಾಡಿದ ನಿಜಾರ್ಥದ ಮಹಾತ್ಮ, ಕ್ರಾಂತಿಕಾರಿ ಅಯ್ಯಂಕಾಳಿಯವರ 157ನೇ ಜನ್ಮದಿನಾಚರಣೆಯನ್ನು ಬಾರಡ್ಕದ ಅಂಬೇಡ್ಕರ್ ನಗರದಲ್ಲಿ ಆಚರಿಸಲಾಯಿತು.
ಅಂಬೇಡ್ಕರ್ ವಿಚಾರ ವೇದಿಕೆಯ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಿಕೆಯ ಅಧ್ಯಕ್ಷ ರಾಮ ಪಟ್ಟಾಜೆ ಅಧ್ಯಕ್ಷತೆ ವಹಿಸಿದ್ದರು. ನಾರಾಯಣ ಬಾರಡ್ಕ ಅಯ್ಯಂಕಾಳಿಯವರ ಭಾವಚಿತ್ರಕ್ಕೆ ಹಾರಾರ್ಪಣೆಗೈದರು. ಸುಂದರ ಬಾರಡ್ಕ, ವಿಜಯಕುಮಾರ್ ಬಾರಡ್ಕ ಉಪಸ್ಥಿತರಿದ್ದರು.