HEALTH TIPS

ಕರಿಪ್ಪೂರ್ ವಿಮಾನ ದುರಂತ-ಪೈಲಟ್ ಸಹಿತ 17 ಮಂದಿ ಮೃತ್ಯು?

      

            ಮಲಪ್ಪುರಂ: ಕರಿಪುರ ವಿಮಾನ ನಿಲ್ದಾಣದಲ್ಲಿ ಬಂದಿಳಿಯುವ ವೇಳೆ ಅಪಘಾತಕ್ಕೀಡಾದ ದುಬೈ-ಕರಿಪ್ಪೂರ್ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಪೈಲಟ್ ಸಹಿತ ಕನಿಷ್ಠ 17 ಮಂದಿ ಮೃತಪಟ್ಟಿರುವರೆಂದು ಶುಕ್ರವಾರ ಮಧ್ಯರಾತ್ರಿಯ 12.30ಯ ವರೆಗಿನ ವರದಿಯಲ್ಲಿ ಸಮರಸ ಸುದ್ದಿ ದೃಢೀಕರಿಸಿದೆ. ವಿಮಾನದಲ್ಲಿ 190 ಜನರಿದ್ದರೆಂಬ ಮಾಹಿತಿ ಲಭ್ಯವಾಗಿದೆ. 

          ಭಾರಿ ಮಳೆಯಿಂದ ಅಪಘಾತ ಸಂಭವಿಸಲು ಕಾರಣವಾಯಿತು ಎನ್ನಲಾಗಿದೆ. ಮಳೆ ರಕ್ಷಣಾ ಕಾರ್ಯಕ್ಕೂ ಅಡ್ಡಿಯಾಯಿತು.

      ಘಟನೆಯಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ. ವಿಮಾನ ಅಪಘಾತದ ಶಬ್ದ ಕೇಳಿದ ಸ್ಥಳೀಯರು ಪೆÇಲೀಸರಿಗೆ ಮಾಹಿತಿ ನೀಡಿದರು. ವಿಮಾನದ ಕ್ಯಾಪ್ಟನ್ ನ ಮುಂಭಾಗದ ಸೀಟು ಸಂಪೂರ್ಣವಾಗಿ ನಾಶವಾಗಿದೆ. ಅಗ್ನಿಶಾಮಕ ದಳ ಮತ್ತು ಪೆÇಲೀಸರು ವಿಮಾನ ನಿಲ್ದಾಣಕ್ಕೆ ಬಂದು ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡರು. 

        ಏರ್ ಇಂಡಿಯಾ ಎಕ್ಸ್‍ಪ್ರೆಸ್ ಎಎಕ್ಸ್‍ಬಿ 1344- ಬಿ 737 ದುಬೈ-ಕರಿಪ್ಪೂರ್(ಕೋಝಿಕ್ಕೋಡ್) ವಿಮಾನಗಳು ಅಪಘಾತಕ್ಕೊಳಗಾಯಿತು. ವಿಮಾನದಲ್ಲಿ 190 ಪ್ರಯಾಣಿಕರು ಇದ್ದರೆನ್ನಲಾಗಿದೆ. ಭಾರಿ ಮಳೆಯಿಂದಾಗಿ ಸ್ಪಷ್ಟ ಮಾಹಿತಿಗೆ ತೊಡಕಾಗಿದೆ. ಅವಘಡದಲ್ಲಿ ವಿಮಾನ ಎರಡು ಭಾಗಗಳಾಗಿ ಕಳಚಿ ಬಿದ್ದಿದೆ. ವಿಮಾನ ರನ್ ವೇ ಗೆ ಇಳಿದ ಸ್ವಲ್ಪ ಸಮಯದಲ್ಲೇ ಈ ಅಪಘಾತ ಸಂಭವಿಸಿದೆ ಎಂದು ಸುದ್ದಿಸಂಸ್ಥೆಗಳು ವರದಿಮಾಡಿವೆ. 

         ಕೂಡಲೇ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಂದ ನಿರ್ದೇಶನ:

    ಕರಿಪ್ಪೂರ್ ವಿಮಾನ ಅಪಘಾತದ ಕಾರ್ಯಾಚರಣೆಗಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಕ್ಷಣದ ಪರಿಹಾರ ಕ್ರಮಗಳನ್ನು ನಿರ್ದೇಶಿಸಿದರು. ಕೂಡಲೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸುವಂತೆ ಮುಖ್ಯಮಂತ್ರಿ ಸ್ಥಳೀಯಾಡಳಿತ ಸಚಿವ ಎ.ಸಿ.ಮೊೈಯ್ದೀನ್ ಅವರಿಗೆ ನಿರ್ದೇಶಿಸಿದರು. ಐಜಿ ನೇತೃತ್ವದ ಪೆÇಲೀಸ್ ತಂಡ ಮತ್ತು ಎರಡು ಜಿಲ್ಲೆಗಳ ಅಗ್ನಿಶಾಮಕ ಮತ್ತು ರಕ್ಷಣಾ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿವೆ. ಅಗತ್ಯ ಚಿಕಿತ್ಸಾ ವ್ಯವಸ್ಥೆಯನ್ನು ಕಲ್ಪಿಸಲು ಸರ್ಕಾರ ಸಮರೋಪಾದಿಯಲ್ಲಿ ಮುನ್ನುಗ್ಗಿದೆ. ವಿಪತ್ತು ಪರಿಹಾರಕ್ಕಾಗಿ ರಾಜ್ಯ ಸರ್ಕಾರದ ಎಲ್ಲಾ ಕಾರ್ಯವಿಧಾನಗಳನ್ನು ಬಳಸಬೇಕೆಂದು ಸೂಚಿಸಲಾಯಿತು.

     ಪ್ರಧಾನಿ ಸಹಿತ ಕೇಂದ್ರ ಸಚಿವರಿಂದ ನೆರವು:

   ಘಟನೆತಿಳಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಆತಂಕ ವ್ಯಕ್ತಪಡಿಸಿ ಆಸ್ಪತ್ರೆಯಲ್ಲಿರುವವರು ಗುಣಮುಖರಾಗುವಂತೆ ಹಾರೈಸಿದರು. ಜೊತೆಗೆ ನೆರವಿನ ಭರವಸೆ ನೀಡಿದರು. ಈ ಸಂದರ್ಭ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಧಾನಿಗಳೊಂದಿಗೆ ಪೋನ್ ಮೂಲಕ ಮಾತುಕತೆ ನಡೆಸಿ ಘಟನೆಯ ವಿವರ ನೀಡಿದರು.

     ಗೃಹ ಸಚಿವ ಅಮಿತ್ ಶಾ ಸಹಿತ ರಾಷ್ಟ್ರ ನಾಯಕರು ಸಂತಾಪ ಸೂಚಿಸಿ ಕೇರಳದ ಜನತೆಗೆ ಧೈರ್ಯ ತುಂಬಿದರು. ಕೇಂದ್ರ ಸಹ ಸಚಿವ ವಿ.ಮುರಳೀಧರನ್, ವಿಮಾನಯಾನ ಸಚಿವರು, ವಿದೇಶಾಂಗ ವಿಭಾಗ ನಿರಂತರ ಅವಲೋಕನ ನಡೆಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries