ಕಾಸರಗೋಡು: ದಿನೇ ದಿನೇ ಸೋಂಕು ಹೆಚ್ಚಳ ಅನುಭವಿಸುತ್ತಿದ್ದ ಕಾಸರಗೋಡು ಜಿಲ್ಲೆಗೆ ಮಂಗಳವಾರ ಸಮಾಧಾನಕರ ದಿನ. ನಿನ್ನೆ 266 ಮಂದಿ ಜಿಲ್ಲೆಯಲ್ಲಿ ಕೋವಿಡ್ ನಿಂದ ಗುಣಮುಖರಾದರು.
ಜೊತೆಗೆ ರೋಗಮುಕ್ತರಾದವರ ಸಂಖ್ಯೆ 200ಕ್ಕಿಂತ ಅಧಿಕಗೊಂಡಿರುವುದೂ ಇದೇ ಪ್ರಥಮ. ಈ ಹಿಂದೆ ಆ.7ರಂದು 123 ಮಂದಿ ಗುಣಮುಖರಾಗಿದ್ದರು.
ಈ ನಿಟ್ಟಿನಲ್ಲಿ ಕುಂಬಳೆ ಗ್ರಾಮಪಂಚಾಯತ್ ನ 33 ಮಂದಿ ಗುಣಹೊಂದಿದ್ದು, ಈ ಪಂಚಾಯತ್ ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ.
ಮಂಗಳವಾರ ಕೋವಿಡ್ ಗುಣಮುಖರಾದ 266 ಮಂದಿಗಳ ಸಮಗ್ರ ಮಾಹಿತಿ:
ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದ ಕಾಸರಗೋಡು ನಗರಸಭೆ ವ್ಯಾಪ್ತಿಯ 15, ಬದಿಯಡ್ಕ ಪಂಚಾಯತ್ ನ 8, ಕುಂಬಳೆ ಪಂಚಾಯತ್ ನ 33, ಚೆಂಗಳ ಪಂಚಾಯತ್ ನ 22, ಕುತ್ತಿಕೋಲು ಪಂಚಾಯತ್ ನ 3, ಪುತ್ತಿಗೆ ಪಂಚಾಯತ್ ನ 3, ಕಾರಡ್ಕ ಪಂಚಾಯತ್ 1, ದೇಲಂಪಾಡಿ ಪಂಚಾಯತ್ 1, ಮುಳಿಯಾರು ಪಂಚಾಯತ್ 1, ಮಧೂರು ಪಂಚಾಯತ್ 13, ಚೆಮ್ನಾಡ್ ಪಂಚಾಯತ್ 12, ಕುಂಬಡಾಜೆ 7, ಮಂಗಲ್ಪಾಡಿ ಪಂಚಾಯತ್ 28, ಮೀಂಜ ಪಂಚಾಯತ್ 7, ಮಂಜೇಶ್ವರ ಪಂಚಾಯತ್ 20, ಬದಿಯಡ್ಕ ಪಂಚಾಯತ್ 8, ಕಾಞಂಗಾಡ್ ನಗರಸಭೆ ವ್ಯಾಪ್ತಿಯ 5, ತ್ರಿಕರಿಪುರ ಪಂಚಾಯತ್ 11, ಕೋಡೋಂ-ಬೇಳೂರು ಪಂಚಾಯತ್ 4, ಪುಲ್ಲೂರು-ಪೆರಿಯ ಪಂಚಾಯತ್ 6, ವಲಿಯಪರಂಬ ಪಂಚಾಯತ್ 1, ಪಳ್ಳಿಕ್ಕೆರೆ ಪಂಚಾಯತ್ 4, ಕಯ್ಯೂರು ಚೀಮೇನಿ ಪಂಚಾಯತ್ 2, ವೆಸ್ಟ್ ಏಳೇರಿ ಪಂಚಾಯತ್ 1, ಚೆರುವತ್ತೂರು ಪಂಚಾಯತ್ 1, ಪಿಲಿಕೋಡ್ ಪಂಚಾಯತ್ 1, ಉದುಮಾ ಪಂಚಾಯತ್ 11, ಅಜಾನೂರು ಪಂಚಾಯತ್ 8, ಮಡಿಕೈ 3, ಕಿನಾನೂರು-ಕರಿಂದಳಂ ಪಂಚಾಯತ್ 3, ಪೆರಿuಟಿಜeಜಿiಟಿeಜಂ ಪಂಚಾಯತ್ 1, ಕಳ್ಳಾರ್ ಪಂಚಾಯತ್ 1 ಮಂದಿ ಗುಣಮುಖರಾದವರು.
ಜಿಲ್ಲೆಯಲ್ಲಿ 4844 ಮಂದಿ ನಿಗಾದಲ್ಲಿ:
ಜಿಲ್ಲೆಯಲ್ಲಿ 4844 ಮಂದಿ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆಯ ವರದಿ ತಿಳಿಸಿದೆ.
ಮನೆಗಳಲ್ಲಿ 3486 ಮಂದಿ, ಸಾಂಸ್ಥಿಕವಾಗಿ 1358 ಮಂದಿ ನಿಗಾದಲ್ಲಿರುವರು. ನೂತನವಾಗಿ 493 ಮಂದಿ ನಿಗಾ ಪ್ರವೇಶ ಮಾಡಿದ್ದಾರೆ. 350 ಮಂದಿ ಮಂಗಳವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ.
ಜಿಲ್ಲೆಯಲ್ಲಿ ನೂತನವಾಗಿ 794 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 575 ಮಂದಿಯ ಫಲಿತಾಂಶ ಲಭಿಸಿಲ್ಲ.