ನವದೆಹಲಿ: ದೇಶದಲ್ಲಿ ಒಂದೇ ದಿನ 52,509 ಮಂದಿಯಲ್ಲಿ ಹೊಸದಾಗಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಇದರೊಂದಿಗೆ ದೇಶದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 19,08,255ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರ ಮಾಹಿತಿ ನೀಡಿದೆ.
ಕಳೆದ 24 ಗಂಟೆಗಳಲ್ಲಿ ಮಹಾಮಾರಿ ವೈರಸ್ 857 ಮಂದಿಯನನು ಬಲಿ ಪಡೆದುಕೊಂಡಿದ್ದು, ಇದರೊಂದಿಗೆ ಸಾವನ್ನಪ್ಪಿದವರ ಸಂಖ್ಯೆ 39,795ಕ್ಕೆ ಏರಿಕೆಯಾಗಿದೆ. ಜೊತೆಗೆ 19,08,255 ಮಂದಿ ಸೋಂಕಿತರ ಪೈಕಿ ಈ ವರೆಗೂ 12,82,216 ಮಂದಿ ಗುಣಮುಖರಾಗಿದ್ದು, ಇನ್ನೂ ದೇಶದಲ್ಲಿ 5,86,244 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆಂದು ವರದಿಗಳು ತಿಳಿಸಿವೆ. ರಾಜ್ಯವಾರು ಸೋಂಕಿತರ ಸಂಖ್ಯೆಗೆ ಬಂದರೆ, ಆಂಧ್ರಕಪ್ರದೇಶದಲ್ಲಿ ನಿನ್ನೆ ಇತರೆ ರಾಜ್ಯಗಳಿಗಿಂತ ಅತೀ ಹೆಚ್ಚು ಮಂದಿಗೆ ಅಂದರೆ 9747 ಮಂದಿಯಲ್ಲಿ ಕೊರೋನಾ ದೃಢಪಟ್ಟಿದ್ದು, 67 ಮಂದಿ ಸಾವನ್ನಪ್ಪಿದ್ದಾರೆ.