HEALTH TIPS

ಕೋವಿಡ್-19: ದೇಶದಲ್ಲಿ ಒಂದೇ ದಿನ 52,972 ಕೇಸ್ ಪತ್ತೆ; ಸೋಂಕಿತರ ಸಂಖ್ಯೆ 18 ಲಕ್ಷ, 38,135 ಮಂದಿ ಸಾವು

      
           ನವದೆಹಲಿ: ಭಾರತದಲ್ಲಿ ಕೊರೋನಾ ಆರ್ಭಟ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 52,972 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೋಮವಾರ ಮಾಹಿತಿ ನೀಡಿದೆ. 
                ನಿನ್ನೆ ಒಂದೇ ದಿನ 771 ಮಂದಿ ಮಹಾಮಾರಿ ವೈರಸ್'ಗೆ ಬಲಿಯಾಗಿದ್ದು, ಇದರೊಂದಿಗೆ ದೇಶದಲ್ಲಿ ಈ ವರೆಗೂ ಸಾವನ್ನಪ್ಪಿದವರ ಸಂಖ್ಯೆ 38,135ಕ್ಕೆ ಏರಿಕೆಯಾಗಿದೆ. ಒಂದೇ ದಿನ 52,972 ಮಂದಿಯಲ್ಲಿ ಸೋಂಕು ಪತ್ತೆಯಾಗುವುದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 18,03,696 ಕ್ಕೆ ಏರಿಕೆಯಾಗಿದೆ. 18,03,696 ಮಂದಿ ಸೋಂಕಿತರ ಪೈಕಿ 1,186,203 ಮಂದಿ ಗುಣಮುಖರಾಗಿದ್ದು, ದೇಶದಲ್ಲಿನ್ನೂ 5,79,357 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.
         ರಾಜ್ಯವಾರು ನಿನ್ನೆ ಆಂಧ್ರಪ್ರದೇಶದಲ್ಲಿ 8555 ಸೋಂಕು 64 ಸಾವು, ಮಹಾರಾಷ್ಟ್ರದಲ್ಲಿ 9509 ಸೋಂಕು, 260 ಸಾವು, ತಮಿಳುನಾಡಲ್ಲಿ 5875 ಸೋಂಕು 92 ಸಾವು, ಉತ್ತರಪ್ರದೇಶದಲ್ಲಿ 3873 ಸೋಂಕು 53 ಸಾವು ದಾಖಲಾಗಿದೆ. 

Single-day spike of 52,972 positive cases & 771 deaths in India in the last 24 hours. India's COVID19 tally rises to 18,03,696 including 5,79,357active cases, 1,186,203 cured/discharged/migrated & 38,135 deaths: Health Ministry
Image

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries