ನವದೆಹಲಿ: ಕೆಲವು ದಿನಗಳಿಂದ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದ ಕೊರೋನಾ ಪ್ರಕರಣಗಳು ಕೊಂಚ ಇಳಿಮುಖಗೊಂಡಿದೆ. ಮಂಗಳವಾರ 53,601 ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 22,68,676ಕ್ಕೆ ಏರಿಕೆಯಾಗಿದೆ.
ಇದೇ ವೇಳೆ ಕಳೆದ 24 ಗಂಟೆಗಳಲ್ಲಿ 870 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ 45,257ಕ್ಕೆ ಹೆಚ್ಚಳವಾಗಿದೆ. ಈ ನಡುವೆ ಒಂದೇ ದಿನ 48,931 ಮಂದಿ ಚೇತರಿಸಿಕೊಂಡಿದ್ದು, ಗುಣಮುಖರಾದವರ ಸಂಖ್ಯೆ 15,83,490ಕ್ಕೆ ತಲುಪಿದೆ. ಪ್ರಸ್ತುತ ದೇಶದಲ್ಲಿನ್ನೂ 6,39,929 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.
ರಾಜ್ಯವಾರು ಸೋಂಕಿತ ಪ್ರಕರಣಗಳಿಗೆ ಬಂದರೆ, ಮಹಾರಾಷ್ಟ್ರದಲ್ಲಿ 9,181 ಕೇಸ್, 293 ಸಾವು, ದೆಹಲಿಯಲ್ಲಿ 707 ಕೇಸ್, 20 ಸಾವು, ಆಂಧ್ರಪ್ರದೇಶದಲ್ಲಿ 7,665 ಕೇಸ್ ಹಾಗೂ 80 ಸಾವು ಸಂಭವಿಸಿದೆ.