ನವದೆಹಲಿ: ಕರೊನಾ ವಿರುದ್ಧ ಮುಂಚೂಣಿಯಲ್ಲಿದ್ದು ಹೋರಾಡುತ್ತಿರುವ ವೈದ್ಯರು ಗಡಿ ಕಾಯುವ ಯೋಧರಂತೆಯೇ ದೇಶಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ. ಈವರೆಗೆ ಅನೇಕರು ಈ ಹೋರಾಟದಲ್ಲಿ ಹುತಾತ್ಮರಾಗಿದ್ದಾರೆ.
ಭಾರತೀಯ ವೈದ್ಯಕೀಯ ಮಂಡಳಿ (ಐಎಂಎ) ನೀಡಿರುವ ಮಾಹಿತಿ ಪ್ರಕಾರ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತ ಈವರೆಗೆ 196 ವೈದ್ಯರು ಪ್ರಾಣ ಕಳೆದುಕೊಂಡಿದ್ದಾರೆ. ಇವರಲ್ಲಿ ಹೆಚ್ಚಿನವರು ಜನರಲ್ ಪ್ರಾಕ್ಟಿಷನರ್ ಆಗಿದ್ದಾರೆ.
ಕೋವಿಡ್ ರೋಗಿಗಳಲ್ಲಿ ಹೆಚ್ಚಿನವರು ಜ್ವರ ಹಾಗೂ ಅದಕ್ಕೆ ಸಂಬಂಧಿಸಿದ ಲಕ್ಷಣಗಳನ್ನು ಹೊಂದಿರುತ್ತಾರೆ. ಸಾಮಾನ್ಯವಾಗಿ ಇಂಥವರಿಗೆ ಜನರಲ್ ಪ್ರಾಕ್ಟಿಷನರ್ಗಳೇ ಚಿಕಿತ್ಸೆ ನೀಡುತ್ತಾರೆ. ಜತೆಗೆ, ಕೋವಿಡ್ ಸಂಪರ್ಕದ ಮೊದಲ ಬಲಿಪಶು ಇವರೇ ಆಗಿರುತ್ತಾರೆ ಎಂದು ಮಂಡಳಿ ಹೇಳಿದೆ.
ಈವರೆಗೆ ಪ್ರಾಣ ತೆತ್ತಿರುವ ವೈದ್ಯರ ಮಾಹಿತಿಯನ್ನು ಬಿಡುಗಡೆ ಮಾಡಿರುವ ಐಎಂಎ ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಗಮನ ಸೆಳೆದಿದೆ. ಮೃತ ವೈದ್ಯರಲ್ಲಿ 50ಕ್ಕೂ ಹೆಚ್ಚು ವಯಸ್ಸಿನವರ ಸಂಖ್ಯೆ 170. ಶೇ.40 ಜನರು ಜನರಲ್ ಪ್ರಾಕ್ಟಿಷನರ್ ಆಗಿದ್ದಾರೆ. ಹೀಗಾಗಿ ವೈದ್ಯರ ಸುರಕ್ಷತೆ ಬಗ್ಗೆ ಐಎಂಎ ಕಳವಳ ವ್ಯಕ್ತಪಡಿಸಿದೆ.ತಮಿಳುನಾಡಿನಲ್ಲಿ ಅತಿ ಹೆಚ್ಚು ವೈದ್ಯರು ಬಲಿಯಾಗಿದ್ದಾರೆ. ಮಹಾರಾಷ್ಟ್ರ, ಗುಜರಾತ್ನಲ್ಲಿ ತಲಾ 23, ಬಿಹಾರ್-19, ಪಶ್ಚಿಮ ಬಂಗಾಳ-16, ದೆಹಲಿಯಲ್ಲಿ ಕೋವಿಡ್ನಿಂದಾಗಿ ಮೃತಪಟ್ಟ ವೈದ್ಯರ ಸಂಖ್ಯೆ 12 ಆಗಿದೆ. ಕೋವಿಡ್ನಿಂದಾಗಿ ಮೃತಪಡುತ್ತಿರುವ ವೈದ್ಯರ ಸಂಖ್ಯೆ ಗಮನಿಸಿದರೆ ನಿಜಕ್ಕೂ ಅಪಾಯಕಾರಿ ಎನಿಸಿದೆ ಎಂದು ಐಎಂಎ ಹೇಳಿದೆ.
Registration For Admission Click Here
Contact For Advertise 9567181417