ಕಾಸರಗೋಡು: ಕೇರಳ ಮೋಟಾರು ವಾಹನ ಕಾರ್ಮಿಕರ ಕಲ್ಯಾಣ ನಿಧಿ ಮಂಡಳಿಯ ಕೋವಿಡ್-19 ಆರ್ಥಿಕ ಸಹಾಯದ ದ್ವಿತೀಯ ಹಂತದ ವಿತರಿಸಲಾಗುವುದು. ಕೋವಿಡ್ ಸೋಂಕು ಹಾವಳಿಯ ಪರಿಣಾಮ ಆರ್ಥಿಕ ಮುಗ್ಗಟ್ಟು ಅನುಭವಿಸುತ್ತಿರುವ ಮಂಡಳಿಯ ಸದಸ್ಯರಾಗಿರುವ ಬಸ್, ಗೂಡ್ಸ್, ಟಾಕ್ಸಿ, ಆಟೋರಿಕ್ಷಾ ಕಾರ್ಮಿಕರಿಗೆ ಯಥಾಕ್ರಮ 5 ಸಾವಿರ ರೂ., 3.5 ಸಾವಿರ ರೂ., 2.5 ಸಾವಿರ ರೂ., 2 ಸಾವಿರ ರೂ. ರೂಪದಲ್ಲಿಓಣಂ ಹಬ್ಬಕ್ಕೆ ಮುಂಚಿತವಾಗಿ ವಿತರಣೆ ಗೊಳ್ಳಲಿದೆ.
ಮೊದಲ ಹಂತದಲ್ಲಿ ವಿತರಿಸಲಾದ ಆರ್ಥಿಕ ಸಹಾಯವಲ್ಲದೆ ಹೆಚ್ಚುವರಿ ತಲಾ ಒಂದು ಸಾವಿರ ರೂ. ಮಂಜೂರು ಮಾಡಲೂ ನಿರ್ಧರಿಸಲಾಗಿದೆ. ಮೊದಲ ಹಂತದ ಸಹಾಯ ಪಡೆದವರು ಮತ್ತೆ ಅರ್ಜಿ ಸಲ್ಲಿಸಬೇಕಿಲ್ಲ. ಅವರು ಬ್ಯಾಂಕ್ ಖಾತೆಗೆ ಈ ಮೊಬಲಗು ಪಾವತಿಗೊಳ್ಳಲಿದೆ. ಈ ವರೆಗೆ ಅರ್ಜಿ ಸಲ್ಲಿಸದೇ ಇದ್ದವರು ಮಂಡಳಿಯ ವೆಬ್ ಸೈಟ್ moಣoಡಿತಿoಡಿಞeಡಿ.ಞmಣತಿತಿಜಿb.ಞeಡಿಚಿಟಚಿ.gov.iಟಿಮೂಲಕ ಆ.31 ರ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು.