ನವದೆಹಲಿ: ಔಷಧ ತಯಾರಿಕ ಸಂಸ್ಧೆ ಗ್ಲೆನ್‍ಮಾರ್ಕ್ ಆಂಟಿವೈರಲ್ ಔಷಧಿ ಫವಿಪಿರಾವಿರ್‍ನ ಹೆಚ್ಚಿನ ಪ್ರಮಾಣದ (400 ಮಿ.ಗ್ರಾಂ) ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
ಕಡಿಮೆ ಮತ್ತು ಮಧ್ಯಮ ಕೋವಿಡ್ -19 ರೋಗಿಗಳ ಚಿಕಿತ್ಸೆಗೆ ತುರ್ತು ಬಳಕೆಯ ಅಧಿಕಾರವನ್ನು ಭಾರತದ ಔಷದ ನಿಯಂತ್ರಕಕ್ಕೆ ಅಧಿಕಾರ ನೀಡಲಾಗಿದೆ. ಫವಿಪಿರಾವೀರ್ ಅನ್ನು ಅವಿಗಾನ್ ಎಂಬ ಬ್ರಾಂಡ್ ಹೆಸರಿನಿಂದ ಫ್ಯೂಜಿಫಿಲ್ಮ್ ತಯಾರಿಸಿದೆ. ಈ ಮಾತ್ರೆಗಳನ್ನು 2014 ರಿಂದ ಜಪಾನ್ ಮಹಾಮಾರಿ ವೈರಸ್ ಗಳ ವಿರುದ್ಧ ಹೋರಾಟಕ್ಕೆ ಬಳಸಲಾಗುತ್ತಿತ್ತು. ಭಾರತದಲ್ಲಿ ಗ್ಲೆನ್‍ಮಾರ್ಕ್ ಜೂನ್‍ನಲ್ಲೇ ಫ್ಯಾಬಿಫ್ಲೂ ಎಂಬ ಬ್ರಾಂಡ್ ಹೆಸರಿನಲ್ಲಿ ಔಷಧದ ಜೆನೆರಿಕ್ ಆವೃತ್ತಿಯನ್ನು ಬಿಡುಗಡೆ ಮಾಡಿತ್ತು. ಇದನ್ನು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಸ್ವೀಕರಿಸಿದೆ.
ಇಲ್ಲಿಯವರೆ ಫವಿಪಿರಾವಿರ್ ಮಾತ್ರೆ 200 ಮಿಗ್ರಾಂ ಡೋಸೇಜ್‍ನಲ್ಲಿ ಲಭ್ಯವಿತ್ತು. ಈ ಮಾತ್ರೆಗಳನ್ನು ರೋಗಿಯೊಬ್ಬರಿಗೆ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕಿತ್ತು. ಅಂದರೆ ಒಟ್ಟಾರೆ 18 ಮಾತ್ರೆಗಳನ್ನು ಸೇವಿಸಬೇಕಿತ್ತು. ಆದರೆ ಇದೀಗ 400 ಮಿ.ಗ್ರಾಂ ಮಾತ್ರೆ ನೀಡುವುದರಿಂದ ಅರ್ಧಕ್ಕೆ ಅರ್ಧ ಮಾತ್ರೆ ಸೇವಿಸುವುದು ಕಡಿಮೆಯಾಗುತ್ತದೆ.