HEALTH TIPS

ರಾಷ್ಟ್ರೀಯ ಶಿಕ್ಷಣ ನೀತಿ-2020: 3 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಶಾಲೆಗಳಲ್ಲಿ ಔಪಚಾರಿಕ ಶಿಕ್ಷಣ

          
             ನವದೆಹಲಿ: ಕೇಂದ್ರ ಸರ್ಕಾರ ಅನುಮೋದನೆ ನೀಡಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಬಾಲ್ಯದ ಆರೈಕೆ ಮತ್ತು ಶಿಕ್ಷಣ(ಇಸಿಸಿಇ)ವನ್ನು 3ರಿಂದ 6 ವರ್ಷದೊಳಗಿನ ಮಕ್ಕಳಿಗೆ ಶಾಲಾ ಶಿಕ್ಷಣದ ಮೊದಲ ಭಾಗವಾಗಿ ನೀಡಲಾಗುತ್ತದೆ.
            10+2 ಕಲಿಕೆಯ ಹಂತವನ್ನು ಮರುರಚನೆ ಮಾಡಿರುವ ಕೇಂದ್ರ ಸರ್ಕಾರ, 3ರಿಂದ 18 ವರ್ಷದೊಳಗೆ ಮಕ್ಕಳಿಗೆ 5+3+3+4 ಸೂತ್ರದಡಿ ಇನ್ನು ಮುಂದೆ ಶಿಕ್ಷಣ ನೀಡಲು ನಿಯಮ ರೂಪಿಸಿದೆ. ಪ್ರಸ್ತುತ 3ರಿಂದ 6 ವರ್ಷದೊಳಗಿನ ಮಕ್ಕಳು 10+2 ರಚನೆಯಡಿ ಬರುವುದಿಲ್ಲ ಏಕೆಂದರೆ 6 ವರ್ಷಕ್ಕೆ 1ನೇ ತರಗತಿ ಆರಂಭವಾಗುತ್ತದೆ.
            ಬಾಲ್ಯದ ಕಲಿಕೆ ಮತ್ತು ಶಿಕ್ಷಣವನ್ನು ಸೂತ್ರಗೊಳಿಸಲು ಹಂತಹಂತವಾಗಿ ಪ್ರಕ್ರಿಯೆಯನ್ನು 2030ಕ್ಕೆ ಪೂರ್ಣಗೊಳಿಸಲಿದೆ. ಸರ್ಕಾರದ ಯೋಜನೆ ಪ್ರಕಾರ, 5 ವರ್ಷಕ್ಕಿಂತ ಮೊದಲು ಪ್ರತಿ ಮಗು ಪೂರ್ವ ತರಗತಿಗೆ ಅಥವಾ ಬಾಲವಟಿಕಕ್ಕೆ ಹೋಗಲಿದೆ. 12ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿರುವ ಶಿಕ್ಷಕರಿಗೆ ಇಸಿಸಿಇಯಲ್ಲಿ 6 ತಿಂಗಳು ಪ್ರಮಾಣಪತ್ರ ತರಬೇತಿಯನ್ನು ನೀಡಲಾಗುತ್ತದೆ, ಅದಕ್ಕಿಂತ ಕಡಿಮೆ ಶಿಕ್ಷಣ ಅರ್ಹತೆ ಹೊಂದಿರುವವರಿಗೆ 1 ವರ್ಷದ ಡಿಪೆÇ್ಲಮಾ ತರಬೇತಿ ನೀಡಲಾಗುತ್ತದೆ.
         ಇಸಿಸಿಇಯ ಯೋಜನೆ ಮತ್ತು ಜಾರಿಗೆ ಕೇಂದ್ರ ಶಿಕ್ಷಣ ಸಚಿವಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬುಡಕಟ್ಟು ವ್ಯವಹಾರಗಳ ಇಲಾಖೆ ಜೊತೆಯಾಗಿ ಕೆಲಸ ಮಾಡಲಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries