ತಿರುವನಂತಪುರ: ಹೊಸ ಪರಿಸರ ಪರಿಣಾಮಗಳ ಮೌಲ್ಯಮಾಪನ ಕರಡು ಕುರಿತು ಕೇರಳ ಸರ್ಕಾರ ಕೇಂದ್ರಕ್ಕೆ ತಿಳಿಸಿಕೊಡಬೇಕು ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣ ಹೇಳಿರುವರು.
ದೊಡ್ಡ ಬಂಡವಾಳಶಾಹಿಗಳು ಮತ್ತು ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಎಲ್ಲಾ ಕ್ಷೇತ್ರಗಳನ್ನು ತೆರೆಯಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಕೊಡಿಯೇರಿ ಬಾಲಕೃಷ್ಣನ್ ಭಾನುವಾರ ಪ್ರಕಟಣೆಯಲ್ಲಿ ಆರೋಪಿಸಿದರು.
ದೇಶದಲ್ಲಿ ನಿರ್ಮಾಣ ಕಾರ್ಯಗಳಿಗೆ ಪರಿಸರ ಪರವಾನಗಿ ಅಗತ್ಯವಿಲ್ಲ ಎಂದು ಕೇಂದ್ರ ಹೊಸ ಆದೇಶ ಜಾರಿಗೊಳಿಸುತ್ತಿರುವುದು ಆತಂಕಾರಿ ಎಂದು ಕೊಡಿಯೇರಿ ಗಮನಸೆಳೆದರು. ಕೈಗಾರಿಕಾ ಸಂಸ್ಥೆಗಳನ್ನು ಸ್ಥಾಪಿಸುವಾಗ ಪರಿಸರ ಸಂಬಂಧಿ ಪರಿಣಾಮವನ್ನು ಪರಿಗಣಿಸಬಾರದು ಎಂಬುದು ಕೇಂದ್ರದ ಹೊಸ ನೀತಿಯಾಗಿದ್ದು ಪ್ರತಿಯೊಂದು ನಿರ್ಮಾಣ ಚಟುವಟಿಕೆಯಲ್ಲೂ ಪರಿಸರ ಪರಿಣಾಮದ ಮೌಲ್ಯಮಾಪನ ಮಾಡಬಾರದು ಎಂದು ಕೇಂದ್ರ ಸರ್ಕಾರ ಆದೇಶಿಸಿದೆ. ಬುಡಕಟ್ಟು ಪ್ರದೇಶಗಳಲ್ಲಿನ ಎಸ್‍ಸಿಎಸ್‍ಟಿ ಪಂಚಾಯಿತಿಗಳಿಂದ ಅನುಮತಿ ಪಡೆಯುವ ಅಗತ್ಯವನ್ನು ಕೇಂದ್ರ ಸರ್ಕಾರ ತೆಗೆದುಹಾಕಿದೆ ಎಂದು ಕೊಡಿಯೇರಿ ಆರೋಪಿಸಿದರು. ಈ ಆದೇಶವು ಪರಿಸರ ಸಂರಕ್ಷಣೆಗೆ ಹಾನಿಕಾರಕವಾಗಿದೆ ಎಂದು ಕೊಡಿಯೇರಿ ಗಮನಸೆಳೆದರು.
ಕೋವಿಡ್ ತುರ್ತಿನ ಈ ಸಂದರ್ಭ ಬಳಸಿ ಕೇಂದ್ರವು ಕಾಪೆರ್Çರೇಟ್ ವ್ಯವಹಾರಕ್ಕೆ ಶ್ರಮಿಸುತ್ತಿದೆ. ಕೇಂದ್ರ ಸರ್ಕಾರದ ಇಐಎ ಜಾರಿಗೆ ಬಂದರೆ ಯಾವುದೇ ನಿರ್ಮಾಣಕ್ಕೆ ಪರಿಸರ ಸಚಿವಾಲಯದ ಅನುಮತಿ ಅಗತ್ಯವಿಲ್ಲ. ಖನಿಜವನ್ನು ಸಹ ಕೇಂದ್ರವು ಖಾಸಗಿ ವಲಯಕ್ಕೆ ಹಸ್ತಾಂತರಿಸಲಿದೆ ಎಂದು ಕೊಡಿಯೇರಿ ಆರೋಪಿಸಿದರು.