ಕಾಸರಗೋಡು: ಕಾಸರಗೋಡು-ಕರ್ನಾಟಕ ಪ್ರತಿನಿತ್ಯ ( ರಾಜ್ಯ ಸರಕಾರ ಅನುಮತಿ ನೀಡಿರುವ ರೆಗ್ಯುಲರ್ ಪಾಸ್)ಸಂಚಾರಕ್ಕಾಗಿ ಆರ್.ಟಿ.-ಪಿ.ಸಿ.ಆರ್. ತಪಾಸಣೆ ನಡೆಸಿ 21 ದಿನಗಳ ಅವಧಿಗೆ ಪಾಸ್ ಮಂಜೂರು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್‍ಬಾಬು ತಿಳಿಸಿರುವರು.
ಗುರುವಾರ ಆನ್‍ಲೈನ್ ಮೂಲಕ ನಡೆದ ಕೊರೊನಾ ಕೋರ್ ಸಮಿತಿ ಸಭೆಯಲ್ಲಿ ಅವರು ಈ ವಿಚಾರ ಪ್ರಕಟಿಸಿದರು.
ಈ ಪಾಸ್ ಪಡೆದುಕೊಂಡು ಸಂಚಾರ ನಡೆಸುವವರು ಕಡ್ಡಾಯವಾಗಿ 7 ದಿನಗಳಿಗೊಮ್ಮೆ ಆಂಟಿಜೆನ್ ಟೆಸ್ಟ್‍ಗೆ ಒಳಗಾಗಿ ಸರ್ಟಿಫಿಕೆಟ್ ಹಾಜರುಪಡಿಸಬೇಕು ಎಂಬ ಹಿಂದಿನ ಸಭೆಗಳ ತೀರ್ಮಾನಕ್ಕೆ ಜಿಲ್ಲಾ ವೈದ್ಯಾಧಿಕಾರಿಗಳ ಆದೇಶ ಪ್ರಕಾರ ಬದಲಾವಣೆ ತರಲಾಗಿದ್ದು, ಇನ್ನು ಮುಂದೆ ಆರ್.ಟಿ-ಪಿ.ಸಿ.ಆರ್. ಟೆಸ್ಟ್ ನಡೆಸಿ, ಆ ಮೂಲಕ ಲಭಿಸುವ ಸರ್ಟಿಫಿಕೆಟ್ ಹಿನ್ನೆಲೆಯಲ್ಲಿ 21 ದಿನಗಳ ಅವ„ಯ ಪಾಸ್ ಮಂಜೂರು ಮಾಡಲು ಸಭೆ ನಿರ್ಧರಿಸಿದೆ. 21 ದಿನಗಳ ನಂತರ ಮರಳಿ ಆರ್.ಟಿ.-ಪಿ.ಸಿ.ಆರ್. ಟೆಸ್ಟ್‍ಗೆ ಒಳಗಾಗಬೇಕಿದ್ದು, ಅಲ್ಲಿ ಲಭಿಸುವ ಸರ್ಟಿಫಿಕೆಟ್ ಹಾಜರುಪಡಿಸಬೇಕು ಎಂದು ಸಭೆ ತಿಳಿಸಿದೆ.
ಬಿ.ಪಿ.ಎಲ್. ಪಟ್ಟಿಯಲ್ಲಿರುವವರಿಗೆ ಆರ್.ಟಿ.-ಪಿ.ಸಿ.ಆರ್. ಟೆಸ್ಟ್ ಉಚಿತ : ಈ ನಿಟ್ಟಿನಲ್ಲಿ ಪ್ರಯಾಣ ನಡೆಸುವ ಕಾಸರಗೋಡು ಜಿಲ್ಲೆಯ ನಿವಾಸಿಗಳಾದ ಬಿ.ಪಿ.ಎಲ್.ಪಟ್ಟಿಯಲ್ಲಿ ಸೇರಿರುವವರಿಗೆ ಆರ್.ಟಿ.-ಪಿ.ಸಿ.ಆರ್. ತಪಾಸಣೆ ಉಚಿತವಾಗಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಸಭೆಯಲ್ಲಿ ತಿಳಿಸಿರುವರು.
ಇತರರು ಸ್ವಂತ ವೆಚ್ಚದಲ್ಲಿ, ಜಿಲ್ಲೆಯಲ್ಲಿ ಯಾ ಕರ್ನಾಟಕದ ಆಸ್ಪತ್ರೆಗಳಲ್ಲಿ ಈ ತಪಾಸಣೆ ನಡೆಸಬೇಕು. ಸರ್ಕಾರಿ ವ್ಯವಸ್ಥೆಯಲ್ಲಿ ಈ ತಪಾಸಣೆ ನಡೆಸುವ ನಿಟ್ಟಿನಲ್ಲಿ ಮಂಜೇಶ್ವರ, ಕಾಸರಗೋಡು, ಕಾಂಞಂಗಾಡು ಪ್ರದೇಶಗಳಲ್ಲಿ ತಪಾಸಣೆ ಸೌಲಭ್ಯಗಳ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಆದೇಶ ನೀಡಿದರು. ಈ ಮೂಲಕ ಲಭಿಸುವ ಸರ್ಟಿಫಿಕೆಟ್‍ನೊಂದಿಗೆ ಆಗಮಿಸುವ ಪ್ರಯಾಣಿಕರಿಗೆ ಅಗತ್ಯವಿರುವ ಆಂಟಿಜೆನ್ ಟೆಸ್ಟ್ ತಲಪ್ಪಾಡಿಯಲ್ಲಿ ಸಜ್ಜುಗೊಳಿಸಬೇಕು. ಸರ್ಟಿಫಿಕೆಟ್ ಇಲ್ಲದೆ ಆಗಮಿಸಿದ ಮಂದಿಗೆ ಟೆಸ್ಟ್‍ನಲ್ಲಿ ಕೋವಿಡ್ ಪಾಸಿಟಿವ್ ಆಗಿರುವುದು ಪತ್ತೆಯಾದಲ್ಲಿ ಅವರನ್ನು ಸಿ.ಎಫ್.ಎಲ್.ಟಿ.ಸಿ. ಗೆ ದಾಖಲಿಸಲಾಗುವುದು. ನೆಗೆಟಿವ್ ಆಗಿದ್ದಲ್ಲಿ ಪ್ರಯಾಣಕ್ಕೆ ಅನುಮತಿ ನೀಡಲಾಗುವುದು ಎಂದವರು ಹೇಳಿದರು.
ವಾಹನಗಳಿಗೆ ಸ್ಟಿಕ್ಕರ್ : ಪ್ರತಿನಿತ್ಯ ಕಾಸರಗೋಡು ಜಿಲ್ಲೆಯಿಂದ ಕರ್ನಾಟಕಕ್ಕೆ ತೆರಳುವವರು ಖಾಸಗಿ ವಾಹನಗಳಲ್ಲಿ ಸಂಚಾರ ನಡೆಸುವುದಿದ್ದರೆ, ಆ ವಾಹನಗಳಲ್ಲಿ ಈ ಸಂಬಂಧ ಸ್ಟಿಕ್ಕರ್ ಲಗತ್ತಿಸಬೇಕು ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ಅವರು ತಿಳಿಸಿರುವ ಹಿನ್ನೆಲೆಯಲ್ಲಿ, ಪೆÇಲೀಸರು ಈ ಬಗ್ಗೆ ಹೆಚ್ಚುವರಿ ತಪಾಸಣೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಆದೇಶಿಸಿದರು.