ನವದೆಹಲಿ: ಕಳೆದ 24 ಗಂಟೆಗಳಲ್ಲಿ 57,381 ಕರೋನ ಸೋಂಕಿತ ರೋಗಿಗಳು ಗುಣಮುಖರಾಗಿ ಬಿಡುಗಡೆ ಹೊಂದುವುದರೊಂದಿಗೆ ಒಂದೇ ದಿನ ಭಾರತದಲ್ಲಿ ಅತಿ ಹೆಚ್ಚು ಚೇತರಿಕೆ ಪ್ರಮಾಣ ದಾಖಲಾಗಿದೆ.
ಇದರೊಂದಿಗೆ, ಭಾರತದಲ್ಲಿ ಚೇತರಿಕೆ ಪ್ರಮಾಣ ಶೇ 70 ಕ್ಕೆ ಏರಿಕೆಯಾಗಿದ್ದು, ಇನ್ನೂ ಹೆಚ್ಚು ಸಂಖ್ಯೆಯ ರೋಗಿಗಳು ಚೇತರಿಸಿಕೊಳ್ಳುತ್ತಿದ್ದಾರೆ. 32 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಚೇತರಿಕೆ ಪ್ರಮಾಣ ಶೇ 50 ರ ಗಡಿ ದಾಟಿದ್ದರೆ, 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಚೇತರಿಕೆ ಪ್ರಮಾಣ, ರಾಷ್ಟ್ರೀಯ ಸರಾಸರಿ ಚೇತರಿಕೆ ಪ್ರಮಾಣಕ್ಕಿಂತ ಹೆಚ್ಚಾಗಿದೆ.
ಹೆಚ್ಚಿನ ರೋಗಿಗಳು ಚೇತರಿಸಿಕೊಂಡು ಆಸ್ಪತ್ರೆಗಳಿಂದ ಬಿಡುಗಡೆಯಾಗುವುದರೊಂದಿಗೆ ದೇಶದಲ್ಲಿ ಒಟ್ಟು ಚೇತರಿಕೆ ಪ್ರಮಾಣ ಶನಿವಾರ 18 ಲಕ್ಷ ದಾಟಿದೆ. ಇದುವರೆಗೆ ಒಟ್ಟು 18,08,936.ರೋಗಿಗಳು ಚೇತರಿಸಿಕೊಂಡಿದ್ದು, ಸಕ್ರಿಯ ಕೋವಿಡ್ -19 ಪ್ರಕರಣಗಳು ಮತ್ತು ಚೇತರಿಸಿಕೊಂಡವರ ನಡುವಿನ ಅಂತರ 11 ಲಕ್ಷ ದಾಟಿದೆ. ಸದ್ಯ, ಈ ಪ್ರಮಾಣ 11,40,716 ರಷ್ಟಿದೆ.