ದುಬೈ: ದುಬೈನಲ್ಲಿರುವ ಭಾರತೀಯನಿಗೆ 24 ಕೋಟಿ ಬಂಪರ್ ಬಹುಮಾನ ಬಂದಿದ್ದು ಬಹುಮಾನದ ಹಣವನ್ನು ಸಂಬಂಧಿಕರು ಮತ್ತು ಸ್ನೇಹಿತರು ಸೇರಿದಂತೆ 11 ಜನರಲ್ಲಿ ಹಂಚಿಕೊಳ್ಳಲಾಗುವುದು ಎಂದು ಬಂಗಾಳ ಮೂಲದ ದೀಪಂಕರ್ ಡೇ ತಿಳಿಸಿದ್ದಾರೆ.
37 ವರ್ಷದ ಈತ ಒಂಬತ್ತು ವರ್ಷಗಳಿಂದ ಯುಎಇಯಲ್ಲಿ ಕೆಲಸ ಮಾಡುತ್ತಿದ್ದಾನೆ. ಈ ಮೊತ್ತ ತನ್ನ ಪಾಲಿಗೆ ಬಂದಿದ್ದರೂ ಯಾವ ಭಾವನಾತ್ಮಕತೆಗೂ ಒಳಗಾಗದೆ ಬಂದ ಮೊತ್ತವನ್ನು ಸಂಬಂಧಿಕರು ಮತ್ತು ಸ್ನೇಹಿತರಿಗೆ ವಿತರಿಸುವುದಾಗಿ ಪ್ರತಿಕ್ರಿಯಿಸಿದ್ದು ಇದರಂತೆ ಪ್ರತಿಯೊಬ್ಬರಿಗೂ 2 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತ ಸಿಗುತ್ತದೆ ಎಂದು ದೀಪಂಕರ್ ಹೇಳಿರುವರು.
ದುಬೈ ಮೂಲದ ಕಂಪನಿಯೊಂದರಲ್ಲಿ ಕಣ್ಣಿನ ಆರೈಕೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ದೀಪಂಕರ್ ಅವರು ತಿಂಗಳಿಗೆ 1,83,992 ರೂ.ಗಳ ಸಂಬಳ ಹೊಂದಿದ್ದಾರೆ ಮತ್ತು ಇಷ್ಟು ದೊಡ್ಡ ಮೊತ್ತವನ್ನು ಪಡೆಯುತ್ತಾರೆಂದು ಎಂದಿಗೂ ಕನಸು ಕಂಡಿಲ್ಲ ಎಂದು ಹೇಳಿದರು. ಪಡೆಯುವ ಹಣದ ಒಂದು ಭಾಗವನ್ನು ತನ್ನ ಮಗಳ ಶಿಕ್ಷಣಕ್ಕಾಗಿ ಖರ್ಚು ಮಾಡಲಾಗುವುದು. ಮಗಳಿಗೆ ಇದೀಗ ಕೇವಲ ಮೂರು ವರ್ಷ. ಉತ್ತಮ ಭಾಗವನ್ನು ಉಳಿತಾಯ ಮತ್ತು ದಾನಕ್ಕಾಗಿ ಮೀಸಲಿಡಲಾಗುತ್ತದೆ. ತಿಂಗಳ ಹಿಂದೆ, ಅವರ ಪತ್ನಿ ಮತ್ತು ಮಗಳು ಊರಿಗೆ ಹಿಂತಿರುಗಿದ್ದಾರೆ. ಆದರೆ ಇದೀಗ ಕೋವಿಡ್ ಹಿನ್ನೆಲೆಯಲ್ಲಿಅವರಿತ್ತ ಬರುವಂತಿಲ್ಲ. ಅಲ್ಲದಿದ್ದರೆ ಇಲ್ಲಿ ಉತ್ಸವ-ಸಂಭ್ರಮಾಚರಣೆ ಮಾಡಬಹುದಿತ್ತೆಂದು ದೀಪಂಕರ್ ಹೇಳಿರುವರು.
ಅಬುಧಾಬಿ ಬಂಪರ್ ಟಿಕೆಟ್ ನಲ್ಲಿ ಈ ಬಹುಮಾನ ಲಭ್ಯವಾಗಿ, ಭಾಗ್ಯತೆರೆದುಕೊಂಡಿತು. ಡ್ರಾ ಸೋಮವಾರ ನಡೆದಿತ್ತು. ವಿಜೇತ ಲಕ್ಕಿ ಸಂಖ್ಯೆ 041486 ಆಗಿದೆ. ಜುಲೈ 14 ರಂದು ದೀಪಂಕರ್ ಟಿಕೆಟ್ ಖರೀದಿಸಿದ್ದರು. ಇದು ಅಬುಧಾಬಿ ಬಂಪರ್‍ನ 218 ನೇ ಡ್ರಾ. ಮುಂದಿನ ತಿಂಗಳ ಡ್ರಾ ಅಭಿಯಾನ ಪ್ರಾರಂಭವಾಗಿದೆ. ಅನುದಾನದ ಮೌಲ್ಯ `20 ಕೋಟಿ 47 ಲಕ್ಷ. ಮುಂದಿನ ಡ್ರಾ ಸೆಪ್ಟೆಂಬರ್ 3 ರಂದು ನಡೆಯಲಿದೆ. ಹೊಸ ಟಿಕೆಟ್ ಖರೀದಿಸಲು ಅವರು ಇನ್ನೂ ನಿರ್ಧರಿಸಿಲ್ಲ ಮತ್ತು ಬಂಪರ್ ಬಹುಮಾನವನ್ನು ಏರ್ಪಡಿಸುವಲ್ಲಿ ತಂಡ ಮತ್ತು ಅವರ ಶ್ರಮಕ್ಕೆ ಧನ್ಯವಾದಗಳು ಎಂದು ದೀಪಂಕರ್ ಹೇಳಿದರು.