ತಿರುವನಂತಪುರ: ಕೋವಿಡ್ ಹಿನ್ನೆಲೆಯಲ್ಲಿ ಎಲ್ಲೆಡೆ ವ್ಯಾಪಕ ಅಲ್ಲೋಲಕಲ್ಲೋಲತೆಗಳು ಸೃಷ್ಟಿಯಾಗಿರುವ ಮಧ್ಯೆ ಕೇರಳ ರಾಜ್ಯ ಸರ್ಕಾರಿ ನೌಕರರಿಗೆ ಈ ತಿಂಗಳು ಓಣಂ ಹಬ್ಬ ಆರಂಭಗೊಳ್ಳುವ ಮೊದಲೇ ಸಂಬಳ ಮತ್ತು ಸೌಲಭ್ಯಗಳನ್ನು ವಿತರಿಸಲು ಸರ್ಕಾರ ಮುಂದಾಗಿದೆ. ಸಂಬಳದ ವಿತರಣೆಯನ್ನು 24 ರಿಂದ ಪ್ರಾರಂಭಿಸಲು ಹಣಕಾಸು ಇಲಾಖೆ ನಿರ್ಧರಿಸಿದೆ.
ಕೋವಿಡ್, ಪೂರ್ವ ಮನ್ಸೂನ್ ಹಿನ್ನೆಲೆಯಲ್ಲಿ ದಿಕ್ಕೆಟ್ಟಿರುವ ವ್ಯಾಪಾರ-ಮಾರುಕಟ್ಟೆ ವಲುಯವನ್ನು ಪುನಶ್ಚೇತನಗೊಳಿಸುವ ಆಲೋಚನೆ ಸರ್ಕಾರದ್ದೇ ಎಂಬ ಸಂಶಯ ಇದೀಗ ಮೂಡಿಬಂದಿದೆ. ಓಣಂ ಗಿಂತ ಮೊದಲೇ ವೇತನ ನೀಡಿದರಷ್ಟೇ ಹಣ ಮಾರುಕಟ್ಟೆಗೆ ತಲಪಲು ಸಾಧ್ಯ. ಓಣಂ ದಿನಗಳು ಈ ತಿಂಗಳ ಕೊನೆಯ ವಾರದಲ್ಲಿ ಆರಂಭಗೊಳ್ಳುತ್ತಿದೆ. ಅದಕ್ಕಾಗಿಯೇ ಈ ತಿಂಗಳ ಸಂಬಳವನ್ನು ಮೊದಲೇ ಪಾವತಿಸಲು ನಿರ್ಧರಿಸಲಾಯಿತು ಎಂದು ವಿಶ್ಲೇಶಿಸಲಾಗಿದೆ.
ನಿವೃತ್ತರಿಗೆ ಪಿಂಚಣಿ ವಿತರಣೆ 20 ರಿಂದ ಪ್ರಾರಂಭವಾಗಲಿದೆ. ಇದರೊಂದಿಗೆ, ಕೋವಿಡ್ ಕಾರಣ ರಾಜ್ಯದ ಸಾರ್ವಜನಿಕ ಮಾರುಕಟ್ಟೆಯಲ್ಲಿನ ಪ್ರಸ್ತುತ ಆರ್ಥಿಕ ಹಿಂಜರಿತದಿಂದ ದೂರವಿರುವುದರಿಂದ ಮಾರುಕಟ್ಟೆ ಹೆಚ್ಚು ಸಕ್ರಿಯವಾಗಿರುತ್ತದೆ. ಇದು ಸರ್ಕಾರದ ತೆರಿಗೆ ಆದಾಯವನ್ನೂ ಹೆಚ್ಚಿಸುತ್ತದೆ.
ಸರ್ಕಾರಿ ನೌಕರರಿಗೆ ಸಾಮಾನ್ಯವಾಗಿ ಸೆಪ್ಟೆಂಬರ್ 1 ರಿಂದ ಆಗಸ್ಟ್ ತಿಂಗಳ ವೇತನವನ್ನು ನೀಡಲಾಗುತ್ತದೆ. ಆಗಸ್ಟ್ ಅಂತ್ಯದಲ್ಲಿ ಓಣಂ ಬರುತ್ತಿರುವುದರಿಂದ ಈ ಬಾರಿ ವೇತನವನ್ನು ಮೊದಲೇ ಪಾವತಿಸಲು ನಿರ್ಧರಿಸಲಾಗಿದೆ.
ಸಂಬಳ, ಪಿಂಚಣಿ, 4,000 ರೂ.ಗಳ ಬೋನಸ್, ಹಬ್ಬದ ಭತ್ಯೆ ಮತ್ತು ತಲಾ 15 ಸಾವಿರ ಮುಂಗಡ ವೇತನ ಎರಡು ವಾರಗಳಲ್ಲಿ 6,000 ಕೋಟಿ ರೂ. ಖಜಾನೆಯಿಂದ ಹೊರಬೀಳಲಿದೆ. 2,500 ಕೋಟಿ ರೂ.ವರೆಗೆ ಖಜಾನೆ ಓವರ್‍ಡ್ರಾಫ್ಟ್‍ಗೆ ಹೋಗಬಹುದು. ವೆಚ್ಚವನ್ನು ಆ ವ್ಯಾಪ್ತಿಯಲ್ಲಿ ಇಡಲಾಗುವುದು ಎಂದು ಹಣಕಾಸು ಸಚಿವಾಲಯ ಚಿಂತನೆ ನಡೆಸಿದೆ.