ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 25 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದ ಚೆಮ್ನಾಡ್ ಪಂಚಾಯತ್ ನ 7, ಕಯ್ಯೂರು-ಚೀಮೇನಿ ಪಂಚಾಯತ್ ನ 3, ಪುಲ್ಲೂರು-ಪೆರಿಯ, ತ್ರಿಕರಿಪುರ, ಚೆಂಗಳ ಪಂಚಾಯತ್ ನ ತಲಾ 2, ಪಿಲಿಕೋಡ್, ಕುಂಬಳೆ, ಬದಿಯಡ್ಕ, ಬಳಾಲ್, ಉದುಮಾ, ಕಿನಾನೂರು-ಕರಿಂದಳಂ, ಕಾರಡ್ಕ, ವಲಿಯ ಪರಂಬ ಪಂಚಾಯತ್ ಗಳ, ನೀಲೇಶ್ವರ ನಗರಸಭೆಯ ತಲಾ ಒಬ್ಬರು ಗುಣಮುಖರಾಗಿದ್ದಾರೆ.
4032 ಮಂದಿ ನಿಗಾದಲ್ಲಿ
ಜಿಲ್ಲೆಯಲ್ಲಿ 4032 ಮಂದಿ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆಯ ವರದಿ ತಿಳಿಸಿದೆ.
ಮನೆಗಳಲ್ಲಿ 2888 ಮಂದಿ, ಸಾಂಸ್ಥಿಕವಾಗಿ 1144 ಮಂದಿ ನಿಗಾದಲ್ಲಿರುವವರು. ನೂತನವಾಗಿ 308 ಮಂದಿ ನಿಗಾ ಪ್ರವೇಶ ಮಾಡಿದ್ದಾರೆ. 320 ಮಂದಿ ಮಂಗಳವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ.