ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಮುಂಬರುವ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಸಂಬಂಧ ಮತದಾರ ಪಟ್ಟಿ ನವೀಕರಣ ಸಂಬಂಧ ಕರಡು ಪಟ್ಟಿ ಬುಧವಾರ ಪ್ರಕಟಗೊಳಿಸಲಾಗಿದೆ. ದೂರು, ಆಕ್ಷೇಪಗಳಿದ್ದಲ್ಲಿ ಆ.26 ವರೆಗೆ ಸಲ್ಲಿಸಲು ಅವಕಾಶವಿದೆ. ಅಹವಾಲು ಸ್ವೀಕಾರ, ನವೀಕರಣ ಸೆ.23ರಂದು ಪೂರ್ಣಗೊಳಿಸಿ, ಮತದಾತರ ಅಂತಿಮ ಪಟ್ಟಿ ಸೆ.26ರಂದು ಪ್ರಕಟಿಸಲಾಗುವುದು ಎಂದು ಚುನಾವಣೆ ವಿಭಾಗ ವರಿಷ್ಠಾಧಿಕಾರಿ ತಿಳಿಸಿರುವರು.