ಇಡುಕ್ಕಿ:ಇಡುಕ್ಕಿಯ ಪೆಟ್ಟಿಮುಡಿಯಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತದಲ್ಲಿ ಅನೇಕಮಂದಿ ಈಗಾಗಲೇ ಮಣ್ಣಿನಡಿ ಸಿಲುಕಿ ಇಹಲೋಕ ತ್ಯಜಿಸಿದ್ದರೆ ಇದೇ ಪ್ರದೇಶದ ಇನ್ನೂ ಅನೇಕ ಮಂದಿ ಕೂದಳೆಳೆಯ ಅಂತರದಲ್ಲಿ ಪಾರಾದ ವವರಗಳೂ ಈಗ ಹೊರಬರುತ್ತಿದೆ. ಇಲ್ಲಿಯ ನಿವಾಸಿಗಳಾದ ಪ್ಲಸ್ ಟು ವಿದ್ಯಾರ್ಥಿಗಳಾದ ಗೋಪಿಕಾ ಮತ್ತು ಹೇಮಲತಾ ಅವರು ಭೂಕುಸಿತದ ದಿನ 280 ಕಿ.ಮೀ ದೂರದಲ್ಲಿರುವ ತಿರುವನಂತಪುರಂನಲ್ಲಿದ್ದರು. ಪ್ರವಾಹದಿಂದ ಜೀವ ಕಳಕೊಂಡ 82 ಚಹಾ ತೋಟ ಕಾರ್ಮಿಕರಲ್ಲಿ ಗೋಪಿಕಾ ಮತ್ತು ಹೇಮಲತಾ ಅವರ ಪೆÇೀಷಕರು ಸೇರಿದ್ದಾರೆ.
ಗೋಪಿಕಾ ಮತ್ತು ಹೇಮಲತಾ ಅವರಲ್ಲದೆ, ಆಗಸ್ಟ್ 7 ರಂದು ಅನ್ನಲಕ್ಷ್ಮಿ ಮತ್ತು ಶರಣ್ಯ ಪೆಟ್ಟಿಮುಡಿಯಲ್ಲಿರಲಿಲ್ಲ. ಇಬ್ಬರೂ ತಮಿಳುನಾಡಿನಲ್ಲಿ ಓದುತ್ತಿದ್ದಾರೆ. ಇವರೆಲ್ಲರೂ ಸಾವಿನ ದವಡೆಯಿಂದ ಕೋದಳೆಳೆಯ ಅಂತರದಲ್ಲಿ ಪಾರಾದವರು. ಹೆತ್ತವರನ್ನು ಕಳೆದುಕೊಂಡ ಬಳಿಕ ಅವರಲ್ಲೀಗ ಅನಾಥತೆ ಹುಟ್ಟಿಕೊಂಡಿದೆ. ಪೆಟ್ಟಿಮುಡಿ ದುರಂತದಲ್ಲಿ ಕನಿಷ್ಠ 18 ಮಕ್ಕಳು ಸಾವನ್ನಪ್ಪಿದ್ದಾರೆ ಅಥವಾ ಕಾಣೆಯಾಗಿದ್ದಾರೆ. ಆದರೆ, ಘಟನಾ ಸ್ಥಳದಲ್ಲಿ ಅಂದು ಇರದಿದ್ದ 26 ಮಕ್ಕಳು ಜೀವದಾನ ಪಡೆದಿದ್ದಾರೆ.
ಮೂನಾರಿನ ಭೂಕುಸಿತ ದುರಂತದಲ್ಲಿ ನಾಲ್ಕು ಮಕ್ಕಳು ತಮ್ಮ ಪೆÇೀಷಕರು ಸೇರಿದಂತೆ ಮನೆಮಠ ಎಲ್ಲವನ್ನೂ ಕಳೆದುಕೊಂಡಿರುವರು. ಉಳಿದ 11 ಜನರಿಗೆ ಮರಳಲು ಮನೆಗಳಿಲ್ಲ. 11 ಮಕ್ಕಳು ವಿಪತ್ತಿನ ಹಾದಿಯಲ್ಲಿದ್ದಾರೆ.
ಮಕ್ಕಳಿಗೆ ವಿಪತ್ತಿನ ಆಘಾತದಿಂದ ಚೇತರಿಸಿಕೊಳ್ಳಲು ಸಹಾಯ ಮಾಡಲು ಕೌನ್ಸೆಲಿಂಗ್ ವ್ಯವಸ್ಥೆ ಮಾಡಲಾಗಿದೆ. ಮಕ್ಕಳನ್ನು ಭೇಟಿ ಮಾಡಿದ ಜಿಲ್ಲಾ ಕಾನೂನು ಸೇವೆಗಳ ಸೊಸೈಟಿ, ದುರಂತದ ಪರಿಣಾಮದಿಂದ ಮಕ್ಕಳು ಇನ್ನೂ ಚೇತರಿಸಿಕೊಂಡಿಲ್ಲ ಎಂದು ಹೇಳಿದೆ. ಅವರು ಈಗ ಮೌನವಾಗಿದ್ದಾರೆ. ಮಕ್ಕಳಿಗೆ ಕೌನ್ಸೆಲಿಂಗ್ ಖಚಿತಪಡಿಸಿಕೊಳ್ಳಲು ಸರ್ಕಾರದ ನೆರವು ತುರ್ತಾಗಿ ಅಗತ್ಯವಿದೆ ಎಂದು ಸೊಸೈಟಿ ವಿನಂತಿಸಿದೆ. ಪೆಟ್ಟಿಮುಡಿಯಲ್ಲಿ ಅನಾಥವಾಗಿರುವ ಎಲ್ಲಾ 26 ಮಕ್ಕಳಿಗೆ ಶಿಕ್ಷಣ ದೊರೆಯುತ್ತದೆ ಮತ್ತು ಅವರು ಸುರಕ್ಷಿತವಾಗಿರುತ್ತಾರೆ ಎಂದು ನಾವು ಖಚಿತಪಡಿಸಿಕೊಳ್ಳಬೇಕು ಎಂದು ಅದು ಸೂಚಿಸಿದೆ.
ಮೂರನೇ ತರಗತಿಯ ದರ್ಶಿನಿ ಮತ್ತು ಶ್ರುತಿ, ನಾಲ್ಕನೇ ತರಗತಿ ವಿದ್ಯಾರ್ಥಿ ಗಣೇಶ್ ಕುಮಾರ್ ಭೂಕುಸಿತದಿಂದ ಬದುಕುಳಿದರು. ಜಿಲ್ಲಾಧಿಕಾರಿಗಳ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಹಡ್ಲಿ ರಂಜಿತ್, ಕನ್ನಿಯಾರ್ ನದಿಯ ದಡದಲ್ಲಿ ಶಾಲಾ ಚೀಲಗಳು ಮತ್ತು ಪುಸ್ತಕಗಳು ಹರಡಿಕೊಂಡಿರುವುದನ್ನು ನೋಡುವುದು ಹೃದಯ ವಿದ್ರಾವಕವಾಗಿದೆ ಎಂದು ಹೇಳಿರುವರು.
ಈವರೆಗೆ 56 ಶವಗಳನ್ನು ಪೆಟ್ಟಿಮುಡಿಯಿಂದ ಕಾರ್ಯಾಚರಣೆಯ ಮೂಲಕ ಗುರುತಿಸಲಾಗಿದೆ. ಮೃತರಾದವರಲ್ಲಿ ಈವರೆಗೆ 24 ಪುರುಷರು, 21 ಮಹಿಳೆಯರು, 4 ಬಾಲಕರು ಮತ್ತು 6 ಬಾಲಕಿಯರು ಒಳಗೊಂಡಿದ್ದಾರೆ.