ಚೆನ್ನೈ: ಚಂದ್ರಯಾನ-2 ಯೋಜನೆಯಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಪತ್ತೆಗೆ ಸಹಕರಿಸಿದ್ದ ಚೆನ್ನೈ ಮೂಲದ ಮೆಕ್ಯಾನಿಕಲ್ ಇಂಜಿನಿಯರ್ ಷಣ್ಮುಗ ಸುಬ್ರಹ್ಮಣಿಯನ್ ಈಗ ಚಂದ್ರಯಾನ-2 ನ ಪ್ರಗ್ಯಾನ್ ರೋವರ್ ಬಗ್ಗೆ ಮತ್ತೊಂದು ಅಚ್ಚರಿಯ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈ ನಲ್ಲಿ ಸ್ಮೂತ್ ಲ್ಯಾಂಡಿಂಗ್ ಆಗುವುದಕ್ಕೆ ವಿಫಲಗೊಂಡು ಲ್ಯಾಂಡರ್? ಪತನಗೊಂಡಿದೆಯಾದರೂ ಪ್ರಗ್ಯಾನ್ ರೋವರ್ ನ್ನೂ ಜೀವಂತವಾಗಿದೆ ಹಾನಿಗೊಳಗಾಗಿಲ್ಲ ಎಂಬ ಸಂತಸ-ಅಚ್ಚರಿಯ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ. ಲ್ಯಾಂಡರ್ ಪತನಗೊಂಡ ಸ್ಥಳದಿಂದ ಪ್ರಗ್ಯಾನ್ ರೋವರ್ ಕೆಲವು ಮೀಟರ್ ಗಳಷ್ಟು ದೂರ ಸಾಗಿದೆ. ಆದರೆ ಯೋಜಿತ ರೀತಿಯಲ್ಲಿ ನಡೆಯದೇ ವಿಕ್ರಮ್ ಲ್ಯಾಂಡರ್ smooth landing ನಲ್ಲಿ ವಿಫಲವಾದ ಕಾರಣ ಅದರ ಪೇಲೋಡ್ ಕಳಚಿಕೊಂಡಿದೆ ಎಂದು ಷಣ್ಮುಗ ತಿಳಿಸಿದ್ದಾರೆ.
ತಾವು ಕಂಡಂತಹ ಅವಶೇಷಗಳು ವಿಕ್ರಮ್ ಲ್ಯಾಂಡರ್ ನ ಲ್ಯಾಂಗ್‍ಮುಯಿರ್ ಪೆÇ್ರೀಬ್ ನದ್ದಾಗಿದ್ದು, ನಾಸಾ ಕಂಡಿರುವ ಅವಶೇಷಗಳು ಬಹುಶಃ ಬೇರೆ ಪೇಲೋಡ್-ಮುಖ್ಯವಾಗಿ ಆಂಟೆನಾ, ರೆಟ್ರೋ ಬಾಕಿರ್ಂಗ್ ಇಂಜಿನ್ ಗಳು, ಸೋಲಾರ್ ಪ್ಯಾನಲ್ ಗಳದ್ದಾಗಿರಬೇಕು ಎಂದು ಷಣ್ಮುಗ ಅಭಿಪ್ರಾಯಪಟ್ಟಿದ್ದಾರೆ.